ಯುಜಿಸಿ ಎನ್ಇಟಿ: ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಸಿಬಿಎಸ್ಇ ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದೆ. ಈ ಬಾರಿಯ ಎನ್ಇಟಿ ಪರೀಕ್ಷೆಯು ನವೆಂಬರ್ 05 (ಭಾನುವಾರ) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಂದ ಕೊನೆಯ ದಿನವಾಗಿದೆ.

ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದೆ. ಈ ಬಾರಿಯ ಎನ್ಇಟಿ ಪರೀಕ್ಷೆಯು ನವೆಂಬರ್ 05 (ಭಾನುವಾರ) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಂದ ಕೊನೆಯ ದಿನವಾಗಿದೆ.

ಎನ್ಇಟಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಲಾಗಿತ್ತು ಆಗಸ್ಟ್ 11 ರಂದು ಪ್ರಾರಂಭವಾದ ಅರ್ಜಿ ಸಲ್ಲಿಕೆ ಇಂದಿಗೆ ಮುಕ್ತಾಯವಾಗಲಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ತುಂಬುವಾಗ ತಪ್ಪು ಮಾಡಿದ್ದರೆ ತಿದ್ದಲು ದಿನಾಂಕ 19-09-2017 ರಿಂದ ಒಂದು ವಾರ ಕಾಲಾವಕಾಶ ಕಲ್ಪಿಸಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:11-08-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-09-2017
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 12-09-2017
  • ಅರ್ಜಿ ತಿದ್ದುಪಡಿ ಪ್ರಾರಂಭಿಕ ದಿನಾಂಕ: 19-09-2017
  • ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕ:25-09-2017
  • ಪರೀಕ್ಷೆ ನಡೆಯುವ ದಿನಾಂಕ: 05-11-2017

ಆಧಾರ್ ಕಾರ್ಡ್ ಕಡ್ಡಾಯ ಈ ಬಾರಿಯ ಎನ್ ಇ ಟಿ ಪರೀಕ್ಷಾರ್ಥಿಗಳು ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಗೆ ಮಾತ್ರವಲ್ಲದೇ ಆನ್-ಲೈನ್ ಅರ್ಜಿ ತುಂಬಲು ಕೂಡ ಆಧಾರ್ ಸಂಖ್ಯೆ ನಮೂದಿಸುವಂತೆ ಸೂಚಿಸಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಎನ್ ಇ ಟಿ ಪರೀಕ್ಷೆ

ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ. ಅಲ್ಲದೆ ಕೆಲ ರಾಜ್ಯಗಳು ವರ್ಷ, ಎರಡು ವರ್ಷಕ್ಕೊಮ್ಮೆ ಎಸ್‌ಎಲ್‌ಇಟಿ (ಸ್ಲೆಟ್‌) ನಡೆಸುತ್ತವೆ.

ಎನ್ಇಟಿ ಪರೀಕ್ಷಾ ವಿಧಾನ

ಎನ್ಇಟಿ ಪರೀಕ್ಷೆಯು ಒಟ್ಟು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು 350 ಅಂಕಗಳಿಗೆ ನಡೆಸಲಾಗುವುದು.

ಮೊದಲ ಪತ್ರಿಕೆ 60 ಪ್ರಶ್ನೆಗಳನ್ನೊಳಗೊಂಡಿದ್ದು 50 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಈ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು ಲಾಜಿಕ್, ರೀಸನಿಂಗ್, ಮೆಂಟಲ್ ಎಬಿಲಿಟಿ ಸೇರಿದಂತೆ ಹತ್ತು ವಿವಿಧ ವಿಷಯಗಳ ಬಗ್ಗೆ ಕೇಳಲಾಗುವುದು.

ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ತೇರ್ಗಡೆ ವಿಧಾನ

ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Today is the last day for the professor aspirants to apply for CBSE UGC NET 2017. The lines to apply for the same opened last month on 11-8-17. Today being 11-9-2017, candidates who have not applied yet must hurry before the line closes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X