ಲಾಕ್ಡೌನ್ ಮುಗಿದ ನಂತರ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಬೇಕು, ಮಕ್ಕಳಿಗೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಂತರ ತೀರ್ಮಾನ ಮಾಡುತ್ತೇವೆ. ಎಸ್ಎಸ್ಎಲ್ ಸಿ ಪರೀಕ್ಷೆಗಿಂತ ದೊಡ್ಡದು ಕೊರೊನಾ ವಿರುದ್ಧ ಹೋರಾಡುವ ಪರೀಕ್ಷೆ ಹಾಗಾಗಿ ಮೇ.3 ರ ನಂತರ ಇದರ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದರು.
ಕೆಲವು ಪೋಷಕ ಮತ್ತು ವಿದ್ಯಾರ್ಥಿಗಳಲ್ಲಿ ಈ ಭಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಅನುಮಾನವೆಂದು ಗೊಂದಲ ಮೂಡಿಸಲಾಗುತ್ತಿದೆ, ಆದರೆ ಪರೀಕ್ಷೆ ನಡೆದೇ ನಡೆಯುತ್ತದೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಈ ಬಗ್ಗೆ ಗೊಂದಲ ಬೇಡ. ಮೇ 3ರ ನಂತರ ಒಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
For Daily Alerts