ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ (MAT-ಮ್ಯಾಟ್)-2017 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನವಾಗಿದೆ.
ಮ್ಯಾಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳು ದೇಶದ 600 ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿನಲ್ಲಿ ಎಂಬಿಎ/ಪಿಜಿಡಿಎಮ್/ಎಂಎಂಎಸ್ ಕೋರ್ಸ್ಗಳಿಗೆ ಸೇರಬಹುದಾಗಿದೆ.
ಕೆಪಿಟಿಸಿಎಲ್ ಆಯ್ಕೆಯಾಗಿರುವ ಅಭ್ಯರ್ಥಿಗಳ ಕರೆಪತ್ರ ಪ್ರಕಟ
ಅಭ್ಯರ್ಥಿಗಳು ಪೇಪರ್ ಬೇಸ್ಡ್ ಅಥವಾ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿದೆ.

ಅರ್ಜಿ ಸಲ್ಲಿಕೆ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಾಯಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ
ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ಅರ್ಜಿ ಶುಲ್ಕ : ರೂ.1500/-
ಪರೀಕ್ಷಾ ದಿನಾಂಕ
- ಪೇಪರ್ ಬೇಸ್ಡ್ ಪರೀಕ್ಷೆ: 10-12-2017
- ಕಂಪ್ಯೂಟರ್ ಬೇಸ್ಡ್ ಪರೀಕ್ಷೆ: 16-12-2017
ಕರ್ನಾಟಕದ ಪರೀಕ್ಷಾ ಕೇಂದ್ರಗಳು
- ಬೆಂಗಳೂರು: ಪೇಪರ್ ಬೇಸ್ಡ್ ಮತ್ತು ಕಂಪ್ಯೂಟರ್ ಬೇಸ್ಡ್
- ಮಂಗಳೂರು: ಪೇಪರ್ ಬೇಸ್ಡ್ ಮಾತ್ರ
ಪ್ರವೇಶ ಪತ್ರಗಳು ಡಿಸೆಂಬರ್ 2ನೇ ತಾರೀಖಿನ ನಂತರ ವೆಬ್ಸೈಟ್ ನಲ್ಲಿ ಲಭ್ಯವಿರಲಿದೆ.
ಪರೀಕ್ಷಾ ವಿಧಾನ
200 ಅಂಕಗಳ ಈ ಪರೀಕ್ಷೆಯು ಒಟ್ಟು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು
ಉತ್ತರಿಸಲು 150 ನಿಮಿಷಗಳ ಕಾಲಾವಧಿ ನೀಡಲಾಗುತ್ತದೆ.
ಮ್ಯಾಟ್ ಪರೀಕ್ಷೆಯನ್ನು ಐದು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಲ್ಯಾಂಗ್ವೇಜ್ ಕಾಂಪ್ರಹೆನ್ಷನ್, ಮೆಥಮ್ಯಾಟಿಕಲ್ ಆಪ್ಟಿಟ್ಯೂಡ್, ಇಂಟಲಿಜೆನ್ಸ್ ಆಂಡ್ ಕ್ರಿಟಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಆಂಡ್ ಸಫೀಷಿಯನ್ಸಿ ಮತ್ತು ಇಂಡಿಯನ್ ಆಂಡ್ ಗ್ಲೋಬಲ್ ಎನ್ವಯರ್ನಮೆಂಟ್.
ಎಲ್ಲಾ ವಿಭಾಗಗಳೂ ಕಡ್ಡಾಯ ಮತ್ತು ಮೊದಲ ನಾಲ್ಕು ವಿಭಾಗಗಳ ಸ್ಕೋರಿಂಗನ್ನೇ ಪರಿಗಣಿಸಲಾಗುತ್ತದೆ. ಐದನೇ ವಿಭಾಗದ ಸ್ಕೋರನ್ನು ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮತ್ತು ವಿಶ್ವವಿದ್ಯಾನಿಲಯಗಳು ತಮ್ಮ ತಮ್ಮ ನಿಯಮಗಳಿಗೆ ಅನುಸಾರವಾಗಿ ಪರಿಗಣಿಸುತ್ತವೆ.