ಮೈಸೂರು ವಿಶ್ವವಿದ್ಯಾಲಯ: ಕೆ ಸೆಟ್ 2017 ಅಧಿಸೂಚನೆ ಪ್ರಕಟ

ಈ ಬಾರಿ 39 ವಿಷಯಗಳಿಗೆ ಸಂಬಂಧಿಸಿದಂತೆ ಉಪನ್ಯಾಸಕರ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದ್ದು, ಡಿಸೆಂಬರ್ 31ರಂದು ಪರೀಕ್ಷೆ ನಡೆಯಲಿದೆ.

ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಅಧಿಸೂಚನೆಯನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಈ ಬಾರಿ 39 ವಿಷಯಗಳಿಗೆ ಸಂಬಂಧಿಸಿದಂತೆ ಉಪನ್ಯಾಸಕರ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದ್ದು, ಡಿಸೆಂಬರ್ 31ರಂದು ಪರೀಕ್ಷೆ ನಡೆಯಲಿದೆ.

ಕೆ ಸೆಟ್ 2017

ಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕ ಗಳಿಸಿರಬೇಕು. ಪರಿಶಿಷ್ಟ ಜಾತಿ, ಪಂಗಡ, ವಿವಿಧ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50 ಅಂಕ ನಿಗದಿಪಡಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ದೂರಶಿಕ್ಷಣದ ವಿವಿಧ ಕೋರ್ಸುಗಳ ದಾಖಲಾತಿ ಬೆಂಗಳೂರು ವಿಶ್ವವಿದ್ಯಾಲಯ ದೂರಶಿಕ್ಷಣದ ವಿವಿಧ ಕೋರ್ಸುಗಳ ದಾಖಲಾತಿ

ಪರೀಕ್ಷಾ ಕೇಂದ್ರಗಳು

ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಕೆ-ಸೆಟ್ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷಾ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1,050/-
  • ಹಿಂದುಳಿದ ವರ್ಗ 2 ಎ, 2 ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ ರೂ.850/-
  • ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 550/-

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 09-10-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2017
  • ರೂ.150/- ದಂಡ ಸಹಿತ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-11-2017
  • ಬ್ಯಾಂಕ್ ಚಲನ್‌ ಸೇರಿ ಅಗತ್ಯ ದಾಖಲೆಗಳೊಂದಿಗೆ ಮೂಲಪ್ರತಿಗಳನ್ನು ನೋಡಲ್ ಕೇಂದ್ರಗಳಿಗೆ ತಲುಪಿಸಲು ಅಂತಿಮ ದಿನಾಂಕ: 10-11-2017
  • ಅರ್ಹತಾ ಪರೀಕ್ಷೆ ನಡೆಯುವ ದಿನಾಂಕ: 31-12-2017

ಕೆ ಸೆಟ್ ಪರೀಕ್ಷೆ

ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ರಾಜ್ಯದ ವಿಶ್ವವಿದ್ಯಾಲಯಗಳಿಂದ ನಡೆಸಲ್ಪಡುವುದು. ಯುಜಿಸಿ ಅಥವಾ ಯುಜಿಸಿ-ಸಿಎಸ್ಐಆರ್ /ಸಿಬಿಎಸ್ಇ ನಡೆಸುವ ಈ ಅರ್ಹತಾ ಪರೀಕ್ಷೆಯ ಹೊರತಾಗಿ, ರಾಜ್ಯ ಮಟ್ಟದಲ್ಲಿ ನೆಟ್ ಪರೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನು (SET) ನಡೆಸಲೂ ಸಹ ಯುಜಿಸಿ ಅವಕಾಶ ಮಾಡಿಕೊಟ್ಟಿದೆ.

ರಾಷ್ಟ್ರಮಟ್ಟದಲ್ಲಿ ಈ ಪರೀಕ್ಷೆಗಳು ವರ್ಷಕ್ಕೆರಡು ಬಾರಿ ಅತ್ಯಂತ ಸುವ್ಯವಸ್ಥಿತವಾಗಿ ಕ್ರಮ ತಪ್ಪದಂತೆ ನಡೆದುಕೊಂಡು ಬಂದಿವೆ. ವರ್ಷದಿಂದ ವರ್ಷಕ್ಕೆ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುತ್ತ, ಮೌಲ್ಯವರ್ಧಿಸಿಕೊಂಡು ಈ ಪರೀಕ್ಷೆಗಳು ಸಾಗುತ್ತಿವೆ. ಆದರೂ ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಉತ್ತೀರ್ಣತಾ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಅನುವು ಮಾಡಿಕೊಟ್ಟಿದೆ.

ಪರೀಕ್ಷಾ ಕ್ರಮ

ಸಿಬಿಎಸ್ಇ /ಯುಜಿಸಿ ನಡೆಸುವ ನೆಟ್ ಪರೀಕ್ಷೆಗಳಂತೆ ಕೆ-ಸೆಟ್ ಪರೀಕ್ಷೆ ಕೂಡ ಬಹು ಆಯ್ಕೆಯ ಪ್ರಶ್ನಾಪತ್ರಿಕೆಯಾಗಿದ್ದು ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

  • ಪ್ರಶ್ನೆಪತ್ರಿಕೆ-1 : ಸಾಮಾನ್ಯ ಪತ್ರಿಕೆ (100 ಅಂಕಗಳು)
  • ಪ್ರಶ್ನೆಪತ್ರಿಕೆ-2 : ವಿಷಯ ಪತ್ರಿಕೆ (100 ಅಂಕಗಳು)
  • ಪ್ರಶ್ನೆಪತ್ರಿಕೆ -3: ವಿಷಯ ಪತ್ರಿಕೆ (150 ಅಂಕಗಳು)

ತೇರ್ಗಡೆ ವಿಧಾನ

ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ kset.uni-mysore.ac.in ನೋಡಬಹುದು.

For Quick Alerts
ALLOW NOTIFICATIONS  
For Daily Alerts

English summary
The exam dates for Karnataka State Eligibility Test have been announced by the University of Mysore. The KSET 2017 is scheduled to be held on December 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X