ನೀಟ್ 2018: ಮೇ 10 ರಂದು ನಡೆಯುವ ಸಾಧ್ಯತೆ

Posted By:

ಸಿಬಿಎಸ್ಇ ನೀಟ್ 2018 ರ ಪರೀಕ್ಷೆಯು ಮೇ 10 ರಂದು (ಗುರುವಾರ) ನಡೆಯುವ ಸಾಧ್ಯತೆ ಇದೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಆಗಸ್ಟ್ 18 ರೊಳಗೆ ವೈದ್ಯಕೀಯ ಮತ್ತು ದಂತ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದು, ಈ ವರ್ಷ ನೀಟ್ ಪರೀಕ್ಷೆಯನ್ನು ಭಾನುವಾರದ ಬದಲು ಗುರುವಾರ ನಡೆಯುವ ಸಾಧ್ಯತೆ ಇದೆ.

ಮೇ 10 ರಂದು ನೀಟ್ 2018

ಎನ್ಇಇಟಿ ಫಲಿತಾಂಶಗಳನ್ನು ಆಧರಿಸಿ ಜುಲೈ 10 ರಿಂದ ಪ್ರವೇಶ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಜೂನ್ ಮೊದಲ ವಾರದಲ್ಲೇ ಫಲಿತಾಂಶಗಳು ಪ್ರಕಟವಾಗಲಿದೆ ಎಂದು ಎಂಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಜನವರಿ ತಿಂಗಳ ಅಂತ್ಯದ ವೇಳೆಗೆ ನೀಟ್ ಪರೀಕ್ಷೆಯ ಅಧಿಕೃತ ಪ್ರಕಟಣೆ ಹೊರಬಿದ್ದಿತ್ತು. ಸುಮಾರು 65,170 ಎಂಬಿಬಿಎಸ್ ಸೀಟುಗಳು ಮತ್ತು ಸುಮಾರು 25,730 ಬಿಡಿಎಸ್ ಕೋರ್ಸುಗಳಿಗೆ ಪ್ರವೇಶಕ್ಕಾಗಿ 7 ಮೇ 2017 ರಂದು ನೀಟ್ ಪರೀಕ್ಷೆಗಳು ನಡೆದಿತ್ತು.

ಎಂಸಿಐ & ಡಿಸಿಐ ವೆಬ್ಸೈಟ್ಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 470 ವೈದ್ಯಕೀಯ ಕಾಲೇಜುಗಳು ಮತ್ತು 308 ಡೆಂಟಲ್ ಕಾಲೇಜುಗಳು ನೀಟ್ ಫಲಿತಾಂಶಗಳ ಆಧಾರದ ಮೇಲೆ ಅಧಿಕೃತ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.

ನೀಟ್ ಪರೀಕ್ಷೆ ಮೇ 7ರಂದು ನಡೆದಿತ್ತು. ದೇಶದಾದ್ಯಂತ 11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮತ್ತು ಒಡಿಯಾ ಸೇರಿ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು.

2013ರಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದಾದ ನಂತರ ನಿಂತಿದ್ದ ಪರೀಕ್ಷೆಯನ್ನು 2016ರಲ್ಲಿ ಮತ್ತೆ ಪುನರಾರಂಭಿಸಲಾಗಿತ್ತು. 2016ರಲ್ಲಿ ಎರಡು ಹಂತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಕಳೆದ ಬಾರಿ ಒಂದೇ ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.

English summary
NEET 2018 will be held on 10 May (Thursday). NEET 2017 was held on 7 May 2017 (Sunday). This year CBSE will conduct the exam on a week day.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia