ಇ.ಎಸ್.ಐ ನೋಂದಾಯಿತ ಕಾರ್ಮಿಕ ಮಕ್ಕಳಿಗೆ 2017-18 ರ ಮೆಡಿಕಲ್ ಕಾಲೇಜು ಪ್ರವೇಶಾತಿ

ಇ.ಎಸ್.ಐ.ಸಿ ಮೆಡಿಕಲ್/ಡೆಂಟಲ್ ಕಾಲೇಜುಗಳಲ್ಲಿ ಅರ್ಹ ಇ.ಎಸ್.ಐ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಎಂ.ಬಿ.ಬಿ.ಎಸ್/ಬಿ.ಡಿ.ಎಸ್ ಸೀಟುಗಳನ್ನು ಕಾಯ್ದಿರಿಸಲಾಗಿದೆ.

ಕಾರ್ಮಿಕ ಮಕ್ಕಳಿಗ ನೀಟ್-2017

 
 • ಇ.ಎಸ್.ಐ ನೋಂದಾಯಿತ ಕಾರ್ಮಿಕ ಮಕ್ಕಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು cbse ನಡೆಸುವ ನೀಟ್-2017 ಪರೀಕ್ಷೆಯ ಅರ್ಹತೆ ಆಧಾರದ ಮೇಲೆ ನೀಡಲಾಗುವುದು
 • ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮೇ 2017 ರಲ್ಲಿ ನಡೆಯುವ ನೀಟ್ ಪರೀಕ್ಷೆಗೆ ಹಾಜರಾಗಬೇಕು. ಇದಕ್ಕೆ ವೆಬ್ಸೈಟ್ www.cbseneet.nic.in ಮೂಲಕವೇ ಅರ್ಜಿ ಸಲ್ಲಿಸಬೇಕ.
 • ತದನಂತರ, ಮೇಲಿನ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು ಇ.ಎಸ್.ಐ.ಸಿ.ಯ ವೆಬ್ಸೈಟ್ www.esic.nic.in ನಲ್ಲಿ ಪ್ರಕಟವಾಗುವ ಸೂಚನೆಯಂತೆ ಅರ್ಜಿ ಸಲ್ಲಿಸಬೇಕು.
 • ಇದು ಕೇವಲ ಸೂಚನಾರ್ಥವಾಗಿ ನೀಡಿದ ಪ್ರಕಟಣೆಯಾಗಿದ್ದು ಅರ್ಹತೆ, ಮೀಸಲಾತಿ ಇನ್ನಿತರ ಸಂಪೂರ್ಣ ವಿವರಗಳಿಗಾಗಿ www.esic.nic.in/admission.php ಯನ್ನು ನೋಡುವುದು

ಪರೀಕ್ಷಾ ವಿವರ

 • ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ದೇಶದ ಒಟ್ಟು 10 ಭಾಷೆಗಳಲ್ಲಿ ನೀಡಲಾಗುತ್ತದೆ.
 • ವಿದ್ಯಾರ್ಥಿಯು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಲಿಚ್ಚಿಸುತ್ತಾನೆ ಎನ್ನುವುದನ್ನು ನೀಟ್ ಆನ್ಲೈನ್ ಅರ್ಜಿ ಸಲ್ಲಿಸುವಾಗ ಅರ್ಜಿಯಲ್ಲಿ ನಮೂದಿಸಬೇಕು.
 • ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು 3 ಬಾರಿ ಅವಕಾಶ ನೀಡಲಾಗಿದ್ದು ಈಗಾಗಲೇ 3 ಬಾರಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
 • ದಿನಾಂಕ 07-05-2017 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.
 • ಪ್ರತಿ ಪತ್ರಿಕೆಯು ಒಟ್ಟು 180 ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
 • ಪರೀಕ್ಷಾ ವಿಷಯಗಳು ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ (ಬಾಟನಿ ಮತ್ತು ಜಿಯೋಲಾಜಿ).
 • ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ.
 • ವಿದ್ಯಾರ್ಥಿಗಳಿಗೆ ಸೂಚನೆ ಆಧಾರ್ ಕಾರ್ಡ್ ಹೊಂದಿರಬೇಕು, ಆಧಾರ್ ಕಾರ್ಡ್ ಹೊಂದಿಲ್ಲದೆ ಇದ್ದಲ್ಲಿ ಆಧಾರ್ ಎನ್ರೋಲ್ಮೆನ್ಟ್ ಸಂಖ್ಯೆಯನ್ನು ನಮೂದಿಸಬೇಕು.
 • ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (ವಿದ್ಯಾರ್ಥಿಯ ಹೆಸರು ಮತ್ತು ಫೋಟೋ ತೆಗೆದ ದಿನಾಂಕವನ್ನು ಭಾವ ಚಿತ್ರದಲ್ಲಿ ನಮೂದಿಸಬೇಕು) ಮತ್ತು ಸಹಿ.
 • ಚಾಲ್ತಿಯಲ್ಲಿರುವ ಇ-ಮೇಲ್ , ದೂರವಾಣಿ ಸಂಖ್ಯೆ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

For Quick Alerts
ALLOW NOTIFICATIONS  
For Daily Alerts

English summary
admission in UG courses (MBBS/BDS)in ESIC Medical/Dental colleges under insured persons quota
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X