
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಯುಜಿಸಿ ಎನ್‌ಇಟಿ ಜೂನ್ ಸೆಷನ್ 2021 ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಎನ್‌ಟಿಎ ಪ್ರಕಟ ಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟೆಂಬರ್ 5,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಯುಜಿಸಿ-ಎನ್ಇಟಿ ಪರೀಕ್ಷೆಯು ಅಕ್ಟೋಬರ್ 6 ರಿಂದ 11,2021ರ ವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸಲು ಕೇಳಲಾಗಿರುವ ಅರ್ಹತೆ, ವಯೋಮಿತಿ, ಪರೀಕ್ಷಾ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ವಿದ್ಯಾರ್ಹತೆ:
ಯುಜಿಸಿ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಶೇ.55%ರಷ್ಟು ಅಂಕಗಳೊಂದಿಗೆ ಯಾವುದೇ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಲ್ಲಿ ಪೂರೈಸಿರಬೇಕು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಸ್ನಾತಕೋತ್ತರ ಪದವಿಯನ್ನು ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಹಾಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.
ವಯೋಮಿತಿ:
ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅಕ್ಟೋಬರ್ 1,2021ರ ಅನ್ವಯ ಗರಿಷ್ಟ 31 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ,ಓಬಿಸಿ,ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ಯಾವುದೇ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿರುವುದಿಲ್ಲ.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ಅಭ್ಯರ್ಥಿಗಳು 1000/-ರೂ, ಸಾಮಾನ್ಯ-ಆರ್ಥಿಕವಾಗಿ ಹಿಂದುಳಿದ/ಓಬಿಸಿ -ಎನ್‌ಸಿಎಲ್ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಎಲ್ಲಾ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕವು ಪಾವತಿಸಬಹುದು.
ಪರೀಕ್ಷೆಯ ವಿವರ:
ಪರೀಕ್ಷಾ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
ಪರೀಕ್ಷೆಯ ಒಟ್ಟು ಅಂಕಗಳು : 300
ಪತ್ರಿಕೆ : 2 ಪ್ರಶ್ನೆ ಪತ್ರಿಕೆಗಳು
ಸಮಯ : ಒಟ್ಟು 3 ಗಂಟೆಗಳ ಅವಧಿ
ಪರೀಕ್ಷೆ ಎರಡು ಶಿಫ್ಟ್‌ಗಳಲ್ಲಿ ನಡೆಯಲಿದ್ದು, ಮೊದಲ ಶಿಫ್ಟ್ 9-00 ಗಂಟೆಯಿಂದ 12-00 ಗಂಟೆ ವರೆಗೆ ನಡೆಯುತ್ತದೆ. ಎರಡನೇ ಶಿಫ್ಟ್ ಮಧ್ಯಾಹ್ನ 03-00 ಗಂಟೆಯಿಂದ ಸಂಜೆ 06-00 ಗಂಟೆ ವರೆಗೆ ನಡೆಯಲಿದೆ.
ಎನ್ಇಟಿ ಜೂನ್ ಸೆಶನ್ 2021ರ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಆಗಸ್ಟ್ 10,2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 5,2021
ಅರ್ಜಿ ತಿದ್ದುಪಡಿಗೆ ಅವಕಾಶ : ಸೆಪ್ಟೆಂಬರ್ 7 ರಿಂದ 12,2021
ಪರೀಕ್ಷೆ ದಿನಾಂಕ : ಅಕ್ಟೋಬರ್ 6 ರಿಂದ 11,2021
ಈ ಕೆಳಗಿನ ಸ್ಟೆಪ್ಸ್ ಮೂಲಕ ಎನ್‌ಇಟಿ ಜೂನ್ 2021ರ ಪರೀಕ್ಷೆಗೆ ಅರ್ಜಿ ಸಲ್ಲಿಸಿ:
ಸ್ಟೆಪ್ 1: ಯುಜಿಸಿ ಎನ್‌ಇಟಿ ಅಧಿಕೃತ ವೆಬ್‌ಸೈಟ್ https://ugcnet.nta.nic.in/webinfo/Page/Page?PageId=1&LangId=P ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಎನ್‌ಟಿಎಯು ಈ ಹಿಂದೆ 2020ರ ಡಿಸೆಂಬರ್ ಸೆಷನ್ ಪರೀಕ್ಷೆಯನ್ನು ಕೊರೋನಾ ಕಾರಣದಿಂದಾಗಿ ನಡೆಸಿಲ್ಲ. ಆದ್ದರಿಂದ 2020ರ ಡಿಸೆಂಬರ್ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹಾಗೂ ಪ್ರಸ್ತುತ ಸೆಷನ್ ಪರೀಕ್ಷೆಯನ್ನು ತೆಗೆದುಕೊಳ್ಳುವವರಿಗೆ ಮರ್ಜ್ ಮಾಡಿ ಪರೀಕ್ಷೆಯನ್ನು ನಡೆಸುವುದಾಗಿ ಹೇಳಿದೆ. ಹಾಗಾಗಿ 2020 ಡಿಸೆಂಬರ್ ಸೆಷನ್ ಪರೀಕ್ಷೆಗೆ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸದ ಅಭ್ಯರ್ಥಿಗಳು ಕೂಡ ಇದೀಗ ಅರ್ಜಿಯನ್ನು ಪೂರ್ಣಗೊಳಿಸಬಹುದು ಎಂದು ಎನ್‌ಟಿಎ ಹೇಳಿದೆ.