ಪಿಜಿಸಿಇಟಿ 2017: ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಅವಕಾಶ

Posted By:

2017-18ನೇ ಸಾಲಿನ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೊದಲ ವರ್ಷದ ಮತ್ತು ಎರಡನೇ ವರ್ಷದ ಲ್ಯಾಟರಲ್ ಪ್ರವೇಶಕ್ಕಾಗಿ ಪರೀಕ್ಷಾ ಪ್ರಾಧಿಕಾರವು ಪಿಜಿಸಿಇಟಿ ನಡೆಸುತ್ತಿದ್ದು ಜೂನ್ 1ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎಂಬಿಎ/ಎಂಸಿಎ/ಎಂಇ/ಎಂ.ಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಮೊದಲನೇ ವರ್ಷದ/ಮೊದನೇ ಸೆಮಿಸ್ಟರ್ ಮತ್ತು ಎಂಸಿಎ ಎರಡನೇ ವರ್ಷದ ಲ್ಯಾಟರಲ್ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.

ಪಿಜಿಸಿಇಟಿ 2017 ಅರ್ಜಿ ಆಹ್ವಾನ

ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು ಎಂಇ/ಎಂ.ಟೆಕ್ /ಎಂ.ಆರ್ಕ್ ಕೋರ್ಸುಗಳ ಪ್ರವೇಶಕ್ಕಾಗಿ ಪಿಜಿಸಿಇಟಿ-2017ಕ್ಕೆ ಹಾಜರಾಗ ಬೇಕಾಗಿರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು.

ಶೈಕ್ಷಣಿಕ ವಿದ್ಯಾರ್ಹತೆ

ಮೇಲಿನ ಎಲ್ಲಾ ಕೋರ್ಸುಗಳ ಪ್ರವೇಶಕ್ಕೆ ವಿವರವಾದ ಅರ್ಹತೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಕೋರ್ಸಿಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ವಿವರವನ್ನು ಪರಿಶೀಲಿಸಲು ಕೋರಲಾಗಿದೆ.

ಶುಲ್ಕ

  • ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಪ್ರತಿ ಕೋರ್ಸಿಗೆ ರೂ.650/-
  • ಪ.ಜಾ/ಪ.ಪಂ/ಪ್ರ-1ಕ್ಕೆ ಸೇರಿದ ಕರ್ನಾಟಕದ ಅಭ್ಯರ್ಥಿಗಳಿಗೆ ರೂ.500/-

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-06-2017 ಸಂಜೆ 5.30 ರವರೆಗೆ
  • ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-06-2017 (ಬ್ಯಾಂಕಿನ ವೇಳೆಯಲ್ಲಿ)
  • ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: 20-06-2017 ರ ನಂತರ

ಬ್ಯಾಂಕಿನಿಂದ ಶುಲ್ಕ ಪಾವತಿಸಿದ ಬಗ್ಗೆ ಖಚಿತಗೊಂಡ ನಂತರವೇ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.

ಪರೀಕ್ಷೆ ನಡೆಯುವ ದಿನಾಂಕ ಮತ್ತು ಸಮಯ

  • ಎಂಇ/ಎಂ.ಟೆಕ್/ಎಂ.ಆರ್ಕ್ ಕೋರ್ಸುಗಳಿಗೆ ದಿನಾಂಕ 01-07-2017 ಬೆಳಿಗ್ಗೆ 10.30 ರಿಂದ 12.30
  • ಟೈಪ್ ಎ: ಮಧ್ಯಾಹ್ನ 2.30 ರಿಂದ 4.30
  • ಎಂಸಿಎ ಕೋರ್ಸಿಗೆ ದಿನಾಂಕ 02-07-2017 ಬೆಳಿಗ್ಗೆ 10.30 ರಿಂದ 12.30
  • ಎಂಬಿಎ ಕೋರ್ಸಿಗೆ ದಿನಾಂಕ 02-07-2017 ಮಧ್ಯಾಹ್ನ 2.30 ರಿಂದ 4.30

ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ನಿಯಾಮಾವಳಿಗಳು, ಅರ್ಹತೆ ಇತ್ಯಾದಿಗಳಿಗಾಗಿ ಕೆಇಎ kea.kar.nic.in ವೆಬ್ಸೈಟ್ ಭೇಟಿ ನೀಡಿ.

English summary
he Karnataka Examination Authority will conduct the Karnataka PGCET 2017 on July 1 for the postgraduate admissions (M.Tech) in the state.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia