ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪ್ರಶ್ನೆಪ್ರತ್ರಿಕೆ ಮತ್ತು ಅಂಕಗಳ ವಿವರ

Posted By:

ಹತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದು, ಮೂರು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ.

ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಮೇಲೆ ನಿಗದಿಪಡಿಸಿದ ಕನಿಷ್ಟ ಅಂಕಗಳನ್ನು ಗಳಿಸದೇ ಇದ್ದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ

ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ
ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ವಿಷಯಗಳ ಹುದ್ದೆಗಳಿಗೆ ಪೇಪರ್-1, ಪೇಪರ್-2 ಮತ್ತು ಪೇಪರ್-3 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಪೇಪರ್-3 ರ ಪತ್ರಿಕೆಯು ಭಾಷಾ ಶಿಕ್ಷಕರು-ಆಂಗ್ಲ ಇವರಿಗೆ ಅನ್ವಯಿಸುವುದಿಲ್ಲ.  ಷಯ ಮತ್ತು ನಿಗದಿಪಡಿಸಿರುವ ಗರಿಷ್ಠ ಅಂಕಗಳ ವಿಂಗಡಣೆ ಕೆಳಗಿನಂತಿದೆ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಪ್ರಕಟ

ಪೇಪರ್-1: ಬಹು ಆಯ್ಕೆಯ ಪ್ರಶ್ನೆಗಳು (ಒಎಂಆರ್ ಶೀಟ್‍ನಲ್ಲಿ ಉತ್ತರಿಸಬೇಕಾದ ಪರೀಕ್ಷೆ)

ವಿಷಯಅಂಕಗಳು
ಸಾಮಾನ್ಯ ಕನ್ನಡ ಭಾಷೆ
25
ಸಾಮಾನ್ಯ ಆಂಗ್ಲ ಭಾಷೆ25
ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು)25
ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ + ಬೋಧನಾ ವಿಧಾನ
50
ಮೌಲ್ಯಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ 15
ಗಣಕ ಯಂತ್ರ ಪ್ರಬುದ್ದತೆ ಬಗ್ಗೆ10
ಒಟ್ಟು
150

 ಪೇಪರ್-2: ಭಾಷೆ-ಆಂಗ್ಲ, ಗಣಿತ & ವಿಜ್ಞಾನ ಹಾಗು ಸಮಾಜ ಪಾಠಗಳು ಶಿಕ್ಷಕರಿಗೆ

ಆಯಾ ವಿಷಯದ ಜ್ಞಾನ - ಬಹು ಆಯ್ಕೆಯ ಪ್ರಶ್ನೆಗಳು (ಓಎಂಆರ್‍ಶೀಟ್‍ನಲ್ಲಿ ಉತ್ತರಿಸಬೇಕು)50
ಆಯಾ ವಿಷಯದ ಜ್ಞಾನ - ವಿವರಣಾತ್ಮಕ ಉತ್ತರ ಬರೆಯಬೇಕಾದ ಪ್ರಶ್ನೆಗಳು100
ಒಟ್ಟು
150

ಪೇಪರ್-2 ಪತ್ರಿಕೆಯಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಭಾಷಾ ಸಾಮಥ್ರ್ಯ ಪರೀಕ್ಷೆ - ಪೇಪರ್-3: ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ಅಭ್ಯರ್ಥಿಗಳಿಗೆ ಮಾತ್ರ

ಆಯಾ ಬೋಧನಾ ಮಾಧ್ಯಮದ ಭಾಷಾ ಸಾಮಥ್ರ್ಯ - ವಿವರಣಾತ್ಮಕ ಪರೀಕ್ಷೆ ಅಭ್ಯರ್ಥಿಗಳು ನಿರ್ದಿಷ್ಟಪಡಿಸಿದ ಬೋಧನಾ ಮಾಧ್ಯಮದಲ್ಲಿ ಬೋಧಿಸಲು ಹೊಂದಿರುವ ಭಾಷಾ ಬಳಕೆಯ ಸಾಮಥ್ರ್ಯ, ಗ್ರಹಿಸುವಿಕೆ, ಶಬ್ದಭಂಡಾರ ಮತ್ತು ಬರವಣಿಗೆ ಸಾಮಥ್ರ್ಯಗಳನ್ನು ಪರೀಕ್ಷಿಸಲಾಗುವುದು.100
 ಒಟ್ಟು
100

ಪೇಪರ್-3 ಪತ್ರಿಕೆಯಲ್ಲಿ ಕನಿಷ್ಟ ಶೇ. 60 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಪರೀಕ್ಷಾ ವಿಷಯಗಳಿಗೆ ನಿಗದಿಪಡಿಸಿರುವ ಪಠ್ಯವಸ್ತು: ಪ್ರಶ್ನೆಗಳ ವ್ಯಾಪ್ತಿ ಹಾಗೂ ಸ್ವರೂಪ

  •  ಪ್ರಶ್ನೆಗಳು ನಿಗದಿಪಡಿಸಲಾಗಿರುವ ಪಠ್ಯವಸ್ತುವಿನ(ಸಿಲಬಸ್) ವ್ಯಾಪ್ತಿಯಲ್ಲಿ ಬರುತ್ತದೆ. (ವಿವರವಾದ ಪಠ್ಯವಸ್ತು ಅನುಬಂಧ-2 ರಲ್ಲಿ ನೀಡಲಾಗಿದೆ. ಇಲಾಖಾ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಿದೆ.)
  • ಪೇಪರ್-1 ರ ಪ್ರಶ್ನೆಪತ್ರಿಕೆಯ ಪ್ರಶ್ನೆಗಳು ವಸ್ತುನಿಷ್ಠವಾಗಿದ್ದು (objective type) ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಿದೆ. ಪ್ರತಿ ಪ್ರಶ್ನೆಯು ನಾಲ್ಕು ಉತ್ತರಗಳನ್ನು ಹೊಂದಿದ್ದು, ಇವುಗಳಲ್ಲಿ ಒಂದು ಸರಿ ಉತ್ತರವಾಗಿರುತ್ತದೆ. ಉತ್ತರಗಳನ್ನು 'ಓ.ಎಂ.ಆರ್' ಶೀಟಿನಲ್ಲಿ ಗುರುತಿಸುವುದು.
  • ಪೇಪರ್ -1 ಮತ್ತು ಪೇಪರ್-2 ರ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಇರುತ್ತವೆ.
  • ಪೇಪರ್-2 ರ ಪ್ರಶ್ನೆಪತ್ರಿಕೆಯಲ್ಲಿ ಎರಡು ಭಾಗಗಳಿದ್ದು ಮೊದಲಭಾಗದಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಗಳನ್ನು 'ಓ.ಎಂ.ಆರ್ ' ಶೀಟಿನಲ್ಲಿ ಗುರುತಿಸುವುದು. ಹಾಗೂ ಎರಡನೇ ಭಾಗದಲ್ಲಿ ವಿವರಣಾತ್ಮಕ ಉತ್ತರವನ್ನು, ಪರೀಕ್ಷಾ ಕೇಂದ್ರದಲ್ಲಿ ನೀಡುವ ಉತ್ತರಪತ್ರಿಕೆಯಲ್ಲಿ ಬರೆಯಬೇಕಾಗುತ್ತದೆ.
  • ಪೇಪರ್-2 ರ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಅಭ್ಯರ್ಥಿಯು ಆಯ್ಕೆ ಬಯಸುವ ಹುದ್ದೆಯ ಬೋಧನಾ ಮಾಧ್ಯಮದಲ್ಲಿ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸಬೇಕು.
  • ಪೇಪರ್-3 ರ ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಮಾದರಿಯಾಗಿದ್ದು, ಅಭ್ಯರ್ಥಿಯು ಆಯ್ಕೆ ಬಯಸುವ ವಿಷಯದ ಹುದ್ದೆಯ, ಬೋಧನಾ ಮಾಧ್ಯಮದ ಭಾಷೆಯಲ್ಲಿಯೇ ಉತ್ತರಿಸಬೇಕು.

ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಮಾಧ್ಯಮ: ಕನ್ನಡ ಮತ್ತು ಇಂಗ್ಲೀಷ್.

ಪ್ರಾಥಮಿಕ ಶಾಲಾ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪಠ್ಯ ವಸ್ತುವನ್ನು ಅಂರ್ತಜಾಲ www.schooleducation.kar.nic.in ಅಂತರ್ಜಾಲ ತಾಣದಲ್ಲಿ ಅಳವಡಿಸಲಾಗಿದೆ. ಪಠ್ಯಕ್ರಮವನ್ನು ಅಂರ್ತಜಾಲದಿಂದ ಪಡೆದುಕೊಳ್ಳಬಹುದು.

English summary
Question paper pattern of primary school teachers recruitment. Candidates to answer three papers for 400 marks.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia