ಎಸ್‌ಎಸ್‌ಎಲ್‌ಸಿ: ಆನ್‌ಲೈನ್‌ ಪ್ರವೇಶ ಪತ್ರ ಒದಗಿಸಲು ಚಿಂತನೆ

Posted By:

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನೂ ಆನ್‌ಲೈನ್‌ನಲ್ಲಿಯೇ ಒದಗಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸುತ್ತಿದೆ.

ಮಾರ್ಚ್ 23ರಿಂದ ಏಪ್ರಿಲ್ 6ರ ವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆ

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವಿವರಗಳನ್ನು ಎಸ್‌.ಎ.ಟಿ.ಎಸ್ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ಮೂಲಕ ದಾಖಲಿಸಲಾಗುತ್ತಿದೆ.

ಎಸ್‌ಎಸ್‌ಎಲ್‌ಸಿ ಆನ್‌ಲೈನ್‌ ಪ್ರವೇಶ ಪತ್ರ

ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ಮ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಕಾರ್ಯ ಸಾಗಿದೆ. ಆನ್‌ಲೈನ್ ಮೂಲಕ ವಿವರ ಭರ್ತಿ ಮಾಡಲು ಕೊನೆಯ ದಿನಾಂಕವನ್ನು ಡಿ.20ರವರೆಗೆ ವಿಸ್ತರಿಸಲಾಗಿದೆ

ಆನ್ಲೈನ್ ಮೂಲಕ ಪ್ರವೇಶ ಪತ್ರ ನೀಡುವ ಮೂಲಕ ಸಮಯ ಉಳಿತಾಯ, ಮುದ್ರಣ ವೆಚ್ಚ ಮತ್ತು ದೈಹಿಕ ಶ್ರಮವನ್ನು ತಗ್ಗಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.

ಪ್ರವೇಶ ಪತ್ರಗಳನ್ನೂ ಪಿಡಿಎಫ್‌ ಮಾದರಿಯಲ್ಲಿ ಒದಗಿಸಬಹುದು. ಶಾಲೆಗಳ ಮುಖ್ಯಸ್ಥರು ಮಾತ್ರ ತಮ್ಮ ಶಾಲೆ ವಿದ್ಯಾರ್ಥಿಗಳ ವಿವರಗಳನ್ನು ವೀಕ್ಷಿಸಲು ಮತ್ತು ಅಲ್ಲಿಯೇ ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ನೀಡಬಹುದು. ವಿದ್ಯಾರ್ಥಿ ಮಾಹಿತಿಯಲ್ಲಿ ತಪ್ಪಾಗಿದ್ದಲ್ಲಿ ಆನ್‌ಲೈನ್ ಮೂಲಕವೇ ಮಂಡಳಿಯ ಗಮನಕ್ಕೆ ತರುವುದಕ್ಕೂ ಅವಕಾಶ ಇರುತ್ತದೆ.

ಪ್ರವೇಶ ಪತ್ರಗಳನ್ನು ಈ ಬಾರಿ ಆನ್‌ಲೈನ್ ಮೂಲಕ ಶಾಲೆಗಳಿಗೆ ಒದಗಿಸುವ ಬಗ್ಗೆ ಚಿಂತಿಸಲಾಗಿದೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಎಲ್ಲ ಶಾಲೆಗಳು ವಿದ್ಯಾರ್ಥಿಗಳ ವಿವರವನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಿದ ಬಳಿಕವಷ್ಟೇ ಇದು ಸಾಧ್ಯ' ಎಂದು ಮಂಡಳಿ ನಿರ್ದೆಶಕಿ ವಿ. ಸುಮಂಗಲಾ ಹೇಳಿದ್ದಾರೆ.

English summary
The Karnataka Secondary School Examination Board is planing to provide online examination letters online to SSLC students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia