ಪ್ರಥಮ ಪಿಯುಸಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗಾಗಿ ನಡೆಸುವ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 16 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಪರೀಕ್ಷೆಗಳು ನಡೆಯಲಿವೆ.
2016-17 ನೇ ಸಾಲಿನ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ದಿನಾಂಕ 16-05-2017 ರಿಂದ 27-05-2017 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಸುವ ಸಲುವಾಗಿ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವೇಳಾಪಟ್ಟಿಯನ್ನು ಇಲಾಖಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಈ ಕುರಿತು ಮಾಹಿತಿ ನೀಡಿ ವೇಳಾಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.
ಫಲಿತಾಂಶ
ದ್ವಿತೀಯ ಪಿಯುಸಿ ತರಗತಿಗಳು ಬೇಗ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 05-06 -2017 ರ ಒಳಗೆ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಇಲಾಖೆ ಸೂಚಿಸಿದೆ. ಅಲ್ಲದೇ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಗೆ ದಾಖಲಾತಿ ನೀಡಲು ತಿಳಿಸಿದೆ.

ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ
| ಪರೀಕ್ಷಾ ದಿನಾಂಕ | 9-00 ರಿಂದ 12-15 ರವರೆಗೆ |
| 16-05-2017 | ಇಂಗ್ಲಿಷ್ |
| 17-05-2017 | ಕನ್ನಡ ತಮಿಳು ತೆಲುಗು ಮಲಯಾಳಂ ಮರಾಠಿ ಉರ್ದು ಅರೇಬಿಕ್ ಫ್ರೆಂಚ್ |
| 18-05-2017 | ಇತಿಹಾಸ ಭೂಗರ್ಭಶಾಸ್ತ್ರ ಎಲೆಕ್ಟ್ರಾನಿಕ್ಸ್ ಗಣಕವಿಜ್ಞಾನ |
| 19-05-2017 | ತರ್ಕಶಾಸ್ತ್ರ ಬಿಸಿನೆಸ್ ಸ್ಟಡೀಸ್ ಗಣಿತ ಶಿಕ್ಷಣ |
| 20-05-2017 | ಅರ್ಥಶಾಸ್ತ್ರ |
| 21-05-2017 | ಭಾನುವಾರ -ರಜಾದಿನ |
| 22-05-2017 | ಐಚ್ಛಿಕ ಕನ್ನಡ ಲೆಕ್ಕಶಾಸ್ತ್ರ ಮನಃಶಾಸ್ತ್ರ ಭೌತಶಾಸ್ತ್ರ |
| 23-05-2017 | ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಗೃಹವಿಜ್ಞಾನ |
| 24-05-2017 | ಭೂಗೋಳಶಾಸ್ತ್ರ ಜೀವಶಾಸ್ತ್ರ ಬೇಸಿಕ್ ಮ್ಯಾಥ್ಸ್ |
| 25-05-2017 | ಹಿಂದಿ ಸಂಸ್ಕೃತ |
| 26-05-2017 | ಸಮಾಜಶಾಸ್ತ್ರ |
| 27-05-2017 | ಕರ್ನಾಟಕ ಸಂಗೀತ ಹಿಂದೂಸ್ತಾನಿ ಸಂಗೀತ ರಸಾಯನಶಾಸ್ತ್ರ |
ಹೆಚ್ಚಿನ ಮಾಹಿತಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ www.pue.kar.nic.in ವೆಬ್ಸೈಟ್ ಗಮನಿಸಿ


Click it and Unblock the Notifications











