ಯುಪಿಎಸ್‌ಸಿ: ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

Posted By:

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆಯ ಪ್ರವೇಶಪತ್ರ (ಇ-ಅಡ್ಮಿಟ್‌ ಕಾರ್ಡ್‌) ಅನ್ನು ಯುಪಿಎಸ್‌ಸಿಯ ವೆಬ್‌ನಲ್ಲಿ ಪ್ರಕಟಿಸಲಾಗಿದೆ.

ಯುಪಿಎಸ್ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 2568 ಮಂದಿ ತೇರ್ಗಡೆ

ಸಿಡಿಎಸ್ (I) ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ ಮೂಲಕ ಡೌನ್‌ ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ-2017 ಅರ್ಜಿ ಆಹ್ವಾನ

ಯುಪಿಎಸ್‌ಸಿ ಪ್ರವೇಶ ಪತ್ರ ಪ್ರಕಟ

ಫೆಬ್ರವರಿ 4ರಂದು ದೇಶಾದ್ಯಂತ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಒಂದೇ ದಿನ ಪರೀಕ್ಷೆ ನಡೆಸಲಾಗುತ್ತದೆ.

ಮೊದಲ ಪತ್ರಿಕೆಯು ಇಂಗ್ಲಿಷ್, ಜನರಲ್‌ ನಾಲೆಜ್, ಎಲಿಮೆಂಟರಿ ಮ್ಯಾಥೆಮ್ಯಾಟಿಕ್ಸ್ ವಿಷಯಗಳನ್ನೊಳಗೊಂಡಿದ್ದರೆ, ಎರಡನೇ ಪತ್ರಿಕೆಯು ಇಂಗ್ಲಿಷ್ ಮತ್ತು ಜನರಲ್ ನಾಲೆಜ್ ವಿಷಯಗಳನ್ನು ಹೊಂದಿರುತ್ತದೆ.

ಪರೀಕ್ಷಾ ವಿವರ

ಯುಪಿಎಸ್‌ಸಿ ಪ್ರವೇಶ ಪತ್ರ ಪ್ರಕಟ

ಅಬ್ಜೆಕ್ಟೀವ್‌ ಮಾದರಿಯ ಪರೀಕ್ಷೆಯೂ ನಡೆಯುವುದರಿಂದ ಅಭ್ಯರ್ಥಿಗಳು ಬ್ಲಾಕ್‌ ಬಾಲ್‌ ಪಾಯಿಂಟ್‌ ಪೆನ್ನನ್ನು ತೆಗೆದುಕೊಂಡು ಹೋಗಬೇಕು.
ಪರೀಕ್ಷಾ ಕೇಂದ್ರಕ್ಕೆ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ, ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು.

ಪ್ರವೇಶ ಪತ್ರ ಪಡೆಯುವ ವಿಧಾನ

  • ಕೇಂದ್ರ ಲೋಕ ಸೇವಾ ಆಯೋಗದ ವೆಬ್ಸೈಟ್ ಗೆ ಲಾಗಿನ್ ಆಗಿ
  • ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ
  • ನಿಮ್ಮ ನೋಂದಣಿ ಸಂಖ್ಯೆ ಅಥವಾ ರೋಲ್ ನಂಬರ್ ನಮೂದಿಸಿ
  • ಪ್ರವೇಶ ಪತ್ರ ಪ್ರಿಂಟ್ ತೆಗೆದುಕೊಳ್ಳಿ

ಪರೀಕ್ಷಾ ಕೇಂದ್ರಗಳು

ಅಗರ್ತಲಾ, ಅಹಮದಾಬಾದ್, ಐಜವಾಲ್, ಅಲ್ಲಾಹಬಾದ್, ಬೆಂಗಳೂರು, ಬರೇಲಿ, ಭೋಪಾಲ್, ಚಂಡೀಗಢ , ಚೆನ್ನೈ, ಕಟಕ್ , ಡೆಹ್ರಾಡೂನ್, ಡೆಲ್ಲಿ , ಧಾರ್ವಾಡ್ , ಡಿಸ್ಪ್ಯೂರ್ , ಗ್ಯಾಂಗ್ಟಾಕ್ , ಹೈದೆರಾಬಾದ್ , ಇಂಫಾಲ್ , ಇಟಾನಗರ್ ,ಜೈಪುರ್ , ಜಮ್ಮು , ಜೋರ್ಹಟ್ , ಕೊಚ್ಚಿ , ಕೊಹಿಮಾ , ಕೊಲ್ಕತ್ತಾ , ಲಕ್ನೋ ,ಮದುರೈ , ಮುಂಬೈ , ನಾಗ್ಪುರ್ , ಪಣಜಿ (ಗೋವಾ), ಪಾಟ್ನಾ , ಪೋರ್ಟ್ ಬ್ಲೇರ್ , ರಾಯ್ಪುರ್, ರಾಂಚಿ , ಸಂಬಲ್ಪುರ್ , ಶಿಲೊಂಗ್ , ಶಿಮ್ಲಾ , ಶ್ರೀನಗರ , ತಿರುವನಂತಪುರಂ , ತಿರುಪತಿ , ಉದೈಪುರ್ ಮತ್ತು ವಿಶಾಖಪಟ್ಟಣಂ

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
The admit card for Combined Defence Service Examination (I) has been released by Union Public Service Commission (UPSC). The exam will be conducted in February 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia