1090 ಸ್ಥಾನಗಳಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆ ಅಧಿಸೂಚನೆ ಪ್ರಕಟ

ಕೇಂದ್ರ ನಾಗರೀಕ ಸೇವಾ ಆಯೋಗ (ಯುಪಿಎಸ್ಸಿ) 2017ನೇ ಸಾಲಿನ ಸಿವಿಲ್ ಸರ್ವೀಸಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್) ಪರೀಕ್ಷೆಗಳಿಗೆ ಅಧಿಸೂಚನೆ.

ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಬಯಸುವವರಿಗೆ, ದೇಶದ ಉನ್ನತ ಹುದ್ದೆಯ ಕನಸು ಹೊತ್ತವರಿಗೆ, ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಬಯಸುವವರಿಗೆ ಕೇಂದ್ರ ಲೋಕ ಸೇವಾ ಅಯೋಗ 2017 ನೇ ಸಾಲಿನ ಸಿವಿಲ್ ಸರ್ವಿಸಸ್ ಮತ್ತು ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಅಧಿಸೂಚನೆ ಹೊರಡಿಸಿದೆ.

ಯುಪಿಎಸ್‌ಸಿ ಪರೀಕ್ಷೆ-2017

ಕೇಂದ್ರ ನಾಗರೀಕ ಸೇವಾ ಆಯೋಗ (ಯುಪಿಎಸ್ಸಿ) 2017ನೇ ಸಾಲಿನ ಸಿವಿಲ್ ಸರ್ವೀಸಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. 980+110(ಐಎಫ್‌ಎಸ್) ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಲಿದೆ.

ಪರೀಕ್ಷಾ ವಿಧಾನ

ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳು ಅಂಕ ಪಡೆಯುತ್ತಾರೆ.ಗಳಿಸಿದ ಅಂಕಗಳ ಆಧಾರದ ಮೇಲೆ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ.

ಒಟ್ಟು ಸ್ಥಾನ: 1090
ಅರ್ಜಿ ಸಲ್ಲಿಕೆ ಕೊನೇ ದಿನ: ಮಾರ್ಚ್ 17, 2017
ಪೂರ್ವಭಾವಿ ಪರೀಕ್ಷೆ: ಜೂನ್ 18, 2017
ಜಾಲತಾಣ: http://www.upsc.gov.in/

ವಯೋಮಿತಿ

* ಕನಿಷ್ಠ 21 ಹಾಗೂ ಗರಿಷ್ಠ 32 ವರ್ಷ (6 ಪ್ರಯತ್ನ).
* ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ (ಗರಿಷ್ಠ 9 ಪ್ರಯತ್ನ)
* ಅಂಗವಿಕಲರಿಗೆ 10 ವರ್ಷ ಸಡಿಲಿಕೆ

ವಿದ್ಯಾರ್ಹತೆ:

* ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರೈಸಿರಬೇಕು.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್) ಆಯ್ಕೆಗೆ ವಿಜ್ಞಾನ/ಕೃಷಿ/ಪಶುಶಾಸ್ತ್ರ/ಅರಣ್ಯ/ಗಣಿತ ಅಥವಾ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು.
* ಪದವಿ ಅಂತಿಮ ವರ್ಷ/ಸೆಮಿಸ್ಟರ್ನಲ್ಲಿ ಅಭ್ಯಾಸ ಮಾಡುತ್ತಿರುವವರಿಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
* ಎಂಬಿಬಿಎಸ್ ಅಭ್ಯರ್ಥಿಗಳು ಸಂದರ್ಶನಕ್ಕೂ ಮುನ್ನ ಇಂಟರ್ನ್ಷಿಪ್ ಪೂರೈಸಿರಬೇಕು.

ಆನ್ಲೈನ್ ಅರ್ಜಿ

* ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತಿ ಬಳಿಕ ಚಲನ್ ಡೌನ್ಲೋಡ್ ಮಾಡಿ, ಯಾವುದೇ ಎಸ್ಬಿಐ ಶಾಖೆಯಲ್ಲಿ ಅಥವಾ ಆನ್ಲೈನ್ನಲ್ಲಿ ಸಾಮಾನ್ಯ ಹಾಗೂ ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳು ₹100 ಶುಲ್ಕ ಪಾವತಿಸಬೇಕು.
* ಮಹಿಳೆಯರು/ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಪ್ರಿಲಿಮಿನರಿ ಪರೀಕ್ಷೆ (400 ಅಂಕ):
* ಅಧಿಸೂಚನೆ ಪ್ರಕಾರ ಜೂನ್ 18ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
* 200 ಅಂಕಗಳ ಬಹು ಆಯ್ಕೆ ಮಾದರಿಯ ಎರಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ (ಸಾಮಾನ್ಯ ಅಧ್ಯಯನ ಪತ್ರಿಕೆ 1 ಮತ್ತು 2).
* ಸಾಮಾನ್ಯ ಅಧ್ಯಯನ ವಿಷಯದ 2ನೇ ಪ್ರತಿಕೆಯಲ್ಲಿ ಅರ್ಹತೆಗೆ ಶೇ.33ರಷ್ಟು ಅಂಕ ಪಡೆಯಬೇಕು. ತಪ್ಪು ಉತ್ತರಕ್ಕೆ ಶೇ.0.33ರಷ್ಟು ಅಂಕ ಕಡಿತವಿದೆ.
ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆ(1750+275 ಅಂಕ):
* 2017ರ ಅಕ್ಟೋಬರ್ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.
* 300 ಅಂಕಗಳ ಇಂಗ್ಲಿಷ್ ಪತ್ರಿಕೆ ಹಾಗೂ ಯಾವುದೇ ಭಾರತೀಯ ಭಾಷೆಯಲ್ಲಿ ತೇರ್ಗಡೆಗೆ ಶೇ.25 ಅಂಕಗಳನ್ನು ಪಡೆಯಬೇಕು, ಆದರೆ ಒಟ್ಟು ಅಂಕಗಳಲ್ಲಿ ಈ ಪತ್ರಿಕೆ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
*500 ಅಂಕಗಳಿಗೆ ಐಚ್ಚಿಕ ವಿಷಯದ ಪರೀಕ್ಷೆ, ಭಾರತೀಯ ಭಾಷಾ ಪತ್ರಿಕೆ, 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆ ನಡೆಸಲಾಗುತ್ತದೆ.
* ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಕ್ಕೆ 275 ಅಂಕಗಳು ನಿಗದಿಯಾಗಿದೆ.

ನೇಮಕಾತಿ ಹಂತ

* ಮುಖ್ಯ ಪರೀಕ್ಷೆ ಬರೆಯಲು ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕಾಗುತ್ತದೆ.
* ಬಳಿಕ ಮುಖ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ವ್ಯಕ್ತಿತ್ವ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
* 2025 ಅಂಕಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಂತಿಮ Rankings ಪ್ರಕಟಿಸಲಾಗುತ್ತದೆ.
* ಐಐಎಎಸ್/ಐಪಿಎಸ್/ಐಎಎಫ್‌ಎಸ್/ಐಆರ್‌ಎಸ್/ ಗ್ರೂಪ್ ಎ ಮತ್ತು ಬಿ ಸೇರಿದಂತೆ ದೇಶದ 20ಕ್ಕೂ ಹೆಚ್ಚು ವಿಭಾಗಗಳ ಆಡಳಿತಾತ್ಮಕ ಹುದ್ದೆಗಳಿಗೆ ರ‍್ಯಾಂಕ್ ಆಧರಿಸಿ ನೇಮಕಾತಿ ಮಾಡಲಾಗುತ್ತದೆ.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಗಳಿಗೆ ಪ್ರತ್ಯೇಕ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅರ್ಹರ ಆಯ್ಕೆ ಮಾಡಲಾಗುತ್ತದೆ.

ಎಲ್ಲೆಲ್ಲಿ ಪರೀಕ್ಷೆ

ದೇಶದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳು ಬೆಂಗಳೂರು, ಧಾರವಾಡ ಅಥವಾ ಮೈಸೂರು ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: 011-23385271/23381125/ 23098543

For Quick Alerts
ALLOW NOTIFICATIONS  
For Daily Alerts

English summary
UPSC has released notification for civil services 2017 and forest services 2017 exam
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X