ಯುಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರವೇಶ ಪತ್ರ ಡೌನ್ಲೋಡ್ ಗೆ ಲಭ್ಯ

Posted By:

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲಿದ್ದು, ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗು ಯುಪಿಎಸ್ಸಿ ಮುಖ್ಯ ಪರೀಕ್ಷೆಯು ನಡೆಯಲಿದೆ.

ಯುಪಿಎಸ್ಸಿ ಮುಖ್ಯ ಪರೀಕ್ಷೆ 2017

ಸುಮಾರು 980 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಪರೀಕ್ಷಾರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

ಇದನ್ನು ಗಮನಿಸಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ನೇಮಕಾತಿ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

ಪ್ರವೇಶ ಪತ್ರ ಪಡೆಯುವ ವಿಧಾನ

 • ಕೇಂದ್ರ ಲೋಕ ಸೇವಾ ಆಯೋಗದ ವೆಬ್ಸೈಟ್ ಗೆ ಲಾಗಿನ್ ಆಗಿ
 • ಇ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ
 • ನಿಮ್ಮ ನೋಂದಣಿ ಸಂಖ್ಯೆ ಅಥವಾ ರೋಲ್ ನಂಬರ್ ನಮೂದಿಸಿ ಪ್ರವೇಶ ಪತ್ರ ಪ್ರಿಂಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳಿಗೆ ಸೂಚನೆ

 • ಇ-ಅಡ್ಮಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಯಾವುದಾದರೂ ವ್ಯತಿರಿಕ್ತತೆಗಳು ಇದ್ದರೆ ತಕ್ಷಣವೇ ಯುಪಿಎಸ್ಸಿಯ ಗಮನಕ್ಕೆ ತನ್ನಿ.
 • ನಿಮ್ಮ ಹೆಸರು, ರೋಲ್ ಸಂಖ್ಯೆ, ನೋಂದಣಿ ಐಡಿ ಮತ್ತು ಹೆಸರನ್ನು ಯುಪಿಎಸ್ಸಿಯ ಎಲ್ಲಾ ಪತ್ರವ್ಯವಹಾರದಲ್ಲಿ ಉಲ್ಲೇಖಿಸಬೇಕು.
 • ಪರಿಕ್ಷೆ ವೇಳೆ ಅಭ್ಯರ್ಥಿಯು ಇ-ಅಡ್ಮಿಟ್ ಕಾರ್ಡ್ ಅನ್ನು ಪರೀಕ್ಷಾ ಕೊಠಡಿಗೆ ಕಡ್ಡಾಯವಾಗಿ ಕೊಂಡೊಯ್ಯಬೇಕು. ಇ-ಅಡ್ಮಿಟ್ ಕಾರ್ಡ್ ಅನ್ನು ಲಿಖಿತ ಫಲಿತಾಂಶದ ಘೋಷಣೆಯಾಗುವವರೆಗೂ ಸಂರಕ್ಷಿಸಬಹುದು.
 • ಪರೀಕ್ಷೆ ಶುರುವಾಗುವ 20 ನಿಮಿಷಗಳ ಮೊದಲು ಎಕ್ಸಾಮಿನೇಷನ್ ಹಾಲ್ ಅನ್ನು ಪ್ರವೇಶಿಸಬೇಕು.
 • ಪರೀಕ್ಷೆ ಶುರುವಾದ 10 ನಿಮಿಷಗಳ ನಂತರ ನಿಮಗೆ ಪರೀಕ್ಷಾ ಕೊಠಡಿಗೆ ಪ್ರವೇಶವಿರುವುದಿಲ್ಲ.
 • ಮೊಬೈಲ್ ಫೋನ್ಸ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ / ಸಂವಹನ ಸಾಧನಗಳ ಬಳಕೆಯನ್ನು ಪರೀಕ್ಷಾ ಆವರಣದಲ್ಲಿ ನಿಷೇಧಿಸಲಾಗಿದೆ.
 • ಪರೀಕ್ಷೆ ಹಾಲ್ನಲ್ಲಿ ಯಾವುದೇ ಬೆಲೆಬಾಳುವ / ದುಬಾರಿ ವಸ್ತುಗಳನ್ನು ತರುವಂತಿಲ್ಲ.
 • ಇ-ಅಡ್ಮಿಟ್ ಕಾರ್ಡ್ನಲ್ಲಿ ಸ್ಪಷ್ಟ ಛಾಯಾಚಿತ್ರಗಳನ್ನು ಹೊಂದಿಲ್ಲದ ಅಭ್ಯರ್ಥಿಗಳು ಫೋಟೋ ಗುರುತಿಸುವ ಪುರಾವೆ (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ವೋಟರ್ ಐ ಕಾರ್ಡ್ ಇತ್ಯಾದಿ.) ತರಬೇಕಾಗುತ್ತದೆ ಜೊತೆಯಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ತರಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್ಸೈಟ್ ಗಮನಿಸಿ

English summary
The Union Public Service Commission (UPSC) has released the admit card for civil services main examination 2017 on its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia