ವಿಐಟಿಇಇಇ ಫಲಿತಾಂಶ ಪ್ರಕಟ: ಶುಲ್ಕ ವಿನಾಯಿತಿ ಪಡೆಯಲಿರುವ ಟಾಪರ್ಸ್

Posted By:

ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆಸಿದ 2017 ರ ಸಾಲಿನ ಪ್ರವೇಶ ಪರೀಕ್ಷೆ 'ವಿಐಟಿಇಇಇ' ಫಲಿತಾಂಶ ಪ್ರಕಟವಾಗಿದೆ.

ವಿದ್ಯಾರ್ಥಿಗಳು www.vit.ac.in ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡುವ ಮೂಲಕ ಫಲಿತಾಂಶ ಪರೀಶೀಲಿಸಬಹುದು.
ಏ.5 ರಿಂದ 16 ರವರೆಗೆ 119 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆದಿತ್ತು. ಪ್ರವೇಶ ಪರೀಕ್ಷೆ ಮೂಲಕ ವಿಐಟಿ ವಿವಿಯು ವೆಲ್ಲೂರು, ಚೆನ್ನೈ, ಭೂಪಾಲ್ ಮತ್ತು ಅಮರಾವತಿಯಲ್ಲಿರುವ ಶಾಖೆಗಳಿಗೆ ಬಿ.ಟೆಕ್ ಕೋರ್ಸ್ಗಳಿಗೆ ಪ್ರವೇಶ ನೀಡುತ್ತದೆ.

ವಿಐಟಿಇಇಇ ಫಲಿತಾಂಶ ಪ್ರಕಟ

ಪ್ರಶ್ನೆಪತ್ರಿಕೆ

 • ಪ್ರಶ್ನೆಪತ್ರಿಕೆಯು ಇಂಗ್ಲಿಷ್ ಭಾಷೆಯಲಿದ್ದು ಎಲ್ಲವು ಕೂಡ ಬಹು ಆಯ್ಕೆಯ ಉತ್ತರಗಳನ್ನೊಳಗೊಂಡಿರುತ್ತದೆ.
 • ಪಿಸಿಎಂ ಮತ್ತು ಪಿಸಿಬಿ ಸಂಯೋಜನೆಯ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದೆ.
 • 125 ಅಂಕಗಳ ಈ ಪರೀಕ್ಷೆಯಲ್ಲಿ ನಕಾರಾತ್ಮಕ ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸಲಾಗುವುದು.

ಫಲಿತಾಂಶ ನೋಡುವ ವಿಧಾನ

 • ವಿಐಟಿ ಅಧಿಕೃತ ವಿಳಾಸಕ್ಕೆ ಭೇಟಿ ನೀಡಿ www.vit.ac.in
 • ಮೇನ್ ಪೇಜ್ ಬಲಭಾಗದಲ್ಲಿ ಕಾಣುವ ರಿಸಲ್ಟ್ ಬಟನ್ ಕ್ಲಿಕ್ ಮಾಡಿ
 • ರಿಸಲ್ಟ್ ಪುಟದಲ್ಲಿ ಲಿಂಕ್ ಬಟನ್ ಕ್ಲಿಕ್ ಮಾಡಿ
 • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
 • ರಿಸಲ್ಟ್ ಶೀಟ್ ಪಡೆಯಿರಿ

ಕೌನ್ಸಿಲಿಂಗ್

 • ಮೇ 10 ರಂದು ನಡೆಯುವ ಕೌನ್ಸಿಲಿಂಗ್ ನಲ್ಲಿ 1 ರಿಂದ 8 ಸಾವಿರ ರ್ಯಾಂಕ್ ಗಳಿಸಿರುವವರು ಭಾಗವಹಿಸಬಹುದು.
 • ಮೇ 11 ರಂದು 8001 ರಿಂದ 14 ಸಾವಿರ ರ್ಯಾಂಕ್ ಒಳಗಿನ ಅಭ್ಯರ್ಥಿಗಳು.
 • ಮೇ.12 ರಂದು 14001 ರಿಂದ 20 ಸಾವಿರದೊಳಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಕೌನ್ಸಿಲಿಂಗ್ ನಡೆಯಲಿವೆ.

ಟಾಪರ್ಸ್

ಮಧ್ಯಪ್ರದೇಶದ ಭವನ ವಿದ್ಯಾಲಯ ಪಾಂಚ್ಕುಲಾದ ವಿದ್ಯಾರ್ಥಿ ಆಶೀಸ್ ವಾಯ್ಕರ್ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಉತ್ತರ ಪ್ರದೇಶದ ಪ್ರಭಾತ್ ಸೀನಿಯರ್ ಸೆಕೆಂಡರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ದಿವ್ಯಾಂಶು ತ್ರಿಪಾಠಿ ಹಾಗೂ ರಾಜಸ್ಥಾನದ ಆರ್ಕೇಡಿಯಾ ಅಕಾಡೆಮಿಯ ದಿವ್ಯಾಂಶು ಮಂಡೋವರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ.

ಶುಲ್ಕ ವಿನಾಯಿತಿ

ಕೇಂದ್ರ ಮತ್ತು ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆದವರಿಗೆ 4 ವರ್ಷ ಶೇ.100 ಶುಲ್ಕ ವಿನಾಯಿತಿ ನೀಡಲಿದೆ. 50 ರ್ಯಾಂಕ್ ಪಡೆದವರಿಗೆ ಶೇ.75 , 51 ರಿಂದ 100 ರ್ಯಾಂಕ್ ಗಳಿಸಿದವರಿಗೆ ಶೇ.50 ಮತ್ತು 101 ರಿಂದ 1 ಸಾವಿರದೊಳಗಿನವರಿಗೆ ಶೇ.25 ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು.

English summary
The Vellore Institute of Technology Engineering Entrance Exam (VITEEE) 2017 results are declared by the Vellore Institute of Technology (VIT).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia