2017 -18 ನೇ ಶೈಕ್ಷಣಿಕ ವರ್ಷದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ

ಪಿ ಯು ಸಿ ನಂತರದ ವೃತ್ತಿಪರ ಕೋರ್ಸ್ಗೆ ಸೇರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೇ ಕೆಸಿಇಟಿ

ಕೆ ಸಿ ಇ ಟಿ ಎಂದರೇನು ?

ಪಿ ಯು ಸಿ ನಂತರದ ವೃತ್ತಿಪರ ಕೋರ್ಸ್ಗೆ ಸೇರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೇ ಕೆಸಿಇಟಿ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ -2017 ಅನ್ನು, 2017 -18 ನೇ ಶೈಕ್ಷಣಿಕ ವರ್ಷಕ್ಕೆ ಸಂಭಂದಿಸಿದಂತೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ/ ವಿಶ್ವವಿದ್ಯಾಲಯ/ ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಇಂಜಿನಿಯರಿಂಗ್‌, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ, ಯೋಗ, ತಂತ್ರಜ್ಞಾನ, ವಾಸ್ತುಶಿಲ್ಪಶಾಸ್ತ್ರ, ಕೃಷಿ ವಿಜ್ಞಾನ (ಬಿಎಸ್‌ಸಿ ಅಗ್ರಿ), ಬಿಎಚ್‌ಎಸ್‌ಸಿ, ಬಿ.ಟೆಕ್‌, ಬಿಎಫ್ಎಸ್‌ಸಿ (ಮೀನುಗಾರಿಕೆ), ಬಿ.ಟೆಕ್‌ (ಫ‌ುಡ್‌ ಸೈನ್ಸ್‌), ಬಿ-ಫಾರ್ಮಾ ಹಾಗೂ ಫಾರ್ಮಾ-ಡಿ ಕೋರ್ಸ್‌ಗಳಲ್ಲಿ ಲಭ್ಯವಿರುವ ಸರ್ಕಾರದ ಪಾಲಿನ ಸೀಟುಗಳಿಗೆ ಸಂಬಂಧಿಸಿದಂತೆ, ಪೂರ್ಣಾವಧಿ ಕೋರ್ಸ್ಗಳ ಮೊದಲನೇ ವರ್ಷಕ್ಕೆ ಅಥವಾ ಮೊದಲನೇ ಸೆಮಿಸ್ಟರ್ಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಸಂಭಂದಿಸಿದಂತೆ ಅರ್ಹತೆ/ ಮೆರಿಟ್ ಅನ್ನು ನಿರ್ಧರಿಸುವ ಉದ್ದೇಶದಿಂದ ನಡೆಸಲಾಗುತ್ತದೆ.

ಕೆಸಿಇಟಿ -2017
ಸೂಚನೆ

1 . ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಸಿ.ಬಿ.ಎಸ್.ಇ ನವರು ನಡೆಸುವ ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (NEET)-2017 ರಲ್ಲಿ ಅರ್ಹತೆಯನ್ನು ಹೊಂದಿರಬೇಕು. ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (NEET)-2017 ರ
ಹಾಗು ಸರ್ಕಾರವು ನಿಗದಿಪಡಿಸುವ ಅರ್ಹತಾ ಮಾನದಂಡಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅನ್ವಯಿಸುತ್ತದೆ.

2 ಆರ್ಕಿಟೆಕ್ಚರ್ ಕೋರ್ಸ್ನ ಪ್ರವೇಶಕ್ಕಾಗಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ನಡೆಸುವ NATA (National Aptitude Test in Architecture) ಪರೀಕ್ಷೆಗೆ ಹಾಜರಾಗಬೇಕು. NATA ಪರೀಕ್ಷೆಯು ದಿನಾಂಕ 16 -04 -2017 ರಂದು ನಡೆಯುತ್ತದೆ ಎಂದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ತಮ್ಮ ವೆಬ್ ಸೈಟ್ www.nata.in and www.nata.nic.in ನಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಮೇಲಿನ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ. ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ / ಸರ್ಕಾರವು ನಿಗದಿಪಡಿಸುವ ಅರ್ಹತಾ ಮಾನದಂಡಗಳು ಆರ್ಕಿಟೆಕ್ಚರ್ ಕೋರ್ಸ್‍ನ ಪ್ರವೇಶಕ್ಕೆ ಅನ್ವಯಿಸುತ್ತದೆ.

ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆ

1. ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು
2. ವಿಟಿಯು ವೆಬ್ಸೈಟಿನಲ್ಲಿ ಪ್ರಚುರ ಪಡಿಸಿರುವ ಪಟ್ಟಿಯಲ್ಲಿರುವ ಅರ್ಹತೆ ಪರೀಕ್ಷೆಯನ್ನು ಯಾವುದೇ ಮುಕ್ತ ವಿಶ್ವವಿದ್ಯಾಲ/ಬೋರ್ಡ್ ಗಳಲ್ಲಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಕೆಇಎ ಮೂಲಕ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅರ್ಹರಾಗಿರುವುದಿಲ್ಲ.
3.ಕೆಎಸ್ಒಯು (ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ)ದಿಂದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಕೆಇಎ ಮೂಲಕ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅರ್ಹರಾಗಿರುವುದಿಲ್ಲ.
4. 2017 ರಲ್ಲಿ ಅರ್ಹತಾ ಪರೀಕ್ಷೆಯನ್ನು ಅಂದರೆ ದ್ವಿತೀಯ ಪಿಯುಸಿ / 12 ನೇ ತರಗತಿ ಪರೀಕ್ಷೆ ಬರೆಯುತಿದ್ದು ಅದರ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಯು 2017 ನೇ ಸಿಇಟಿ ಪರೀಕ್ಷೆಯನ್ನು ಬರೆಯಬಹುದು. ಆದರೆ ಅಂತಹ ಅಭ್ಯರ್ಥಿಯು ಅರ್ಹತಾ ಪರೀಕ್ಷೆಯನ್ನು ಅಗತ್ಯ ಶೇಕಡಾವಾರು ಅಂಕಗಳೊಂದಿಗೆ ತೇರ್ಗಡೆ ಹೊಂದದಿದ್ದಲ್ಲಿ ಅವರು ಈ ಹಿಂದೆ ತಿಳಿಸಿರುವ ಯಾವುದೇ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುವುದಿಲ್ಲ.
5. ಅರ್ಹತೆಯನ್ನು ನಿರ್ಧರಿಸುವ ಶೈಕ್ಷಣಿಕ ವಿದ್ಯಾರ್ಹತೆ / ಅರ್ಹತಾ ಮಾನದಂಡವು ಸಕ್ಷಮ ಪ್ರಾಧಿಕಾರವು ಕಾಲಕಾಲಕ್ಕೆ ನಿಗಧಿಪಡಿಸುವ ನಿಭಂದನೆಗೆ / ಮಾರ್ಗಸೂಚಿ ಒಳಪಟ್ಟಿರುತ್ತದೆ.
6 . ಪ್ರಾಧಿಕಾರವು ಕಾಲೇಜುಗಳಿಗೆ ನಿಗದಿಪಡಿಸುವ ಅರ್ಹತೆ/ಪ್ರವೇಶ/ ಹಂಚಿಕೆ ಮಾಡುವಿಕೆ ಇತ್ಯಾದಿಗಳು ಎಂಸಿ/ಡಿಸಿಐ / ಎಐಸಿಟಿಇ / ಸಿಓಎ/ ಸಿಸಿಐಎಮ್/ ಸರ್ಕಾರ / ಸಂಭಂದಿಸಿದ ವಿಶ್ವವಿದ್ಯಾಲಯ / ಅಪೆಕ್ಸ್ ಸಂಸ್ಥೆಗಳ ಅನುಮೋದನೆಗೆ ಒಳಪಟ್ಟಿರುತ್ತದೆ.
7 . ಅರ್ಹತಾ ಮಾನದಂಡ / ನಿಯಮಗಳು ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರದಿಂದ ನಿಗದಿ ಪಡಿಸಲಾಗುತ್ತಿದ್ದು ಅವುಗಳನ್ನು ಪೂರೈಸದಿದ್ದ ಸಂಧರ್ಭದಲ್ಲಿ ಮಾಡಲಾಗಿರುವ ಯಾವುದೇ ಪ್ರವೇಶಗಳನ್ನು ವಿದ್ಯಾಭ್ಯಾಸದ ಅವಧಿಯ ಯಾವುದೇ ಹಂತದಲ್ಲಿ ಹಿಂತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಕರ್ನಾಟಕ ಪರೀಕ್ಷಾ ಪ್ರದಿಕಾರದಾಗಿರುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಅಭ್ಯರ್ಥಿಗಳು ಕೆಇಎ ನಡೆಸುವ ಸಿಇಟಿ ಮೂಲಕ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ತಮ್ಮ ಅರ್ಜಿ ವಿವರಗಳನ್ನು ಆನ್‍ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. (ಲೇಖನಿ ಮತ್ತು ಹಾಳೆ ಬಳಕೆಮಾಡುವ ಅವಕಾಶವಿಲ್ಲ). 2015ರಿಂದ ಲೇಖನ ಮತ್ತು ಹಾಳೆ ಬಳಸಿ ಅರ್ಜಿಸಲ್ಲಿಕೆ ಮಾಡುವ ವಿಧಾನವನ್ನು ನಿಲ್ಲಿಸಲಾಗಿದೆ

• ಆನ್‍ಲೈನ್ ಅರ್ಜಿ ಭರ್ತಿ/ ಸಲ್ಲಿಕೆ ವಿದ್ಯಾರ್ಥಿ¸ ಸ್ನೇಹಿಯಾಗಿರುತ್ತದೆ
• ಮೊದಲು ಅಭ್ಯರ್ಥಿಗಳು ಖಾಲಿ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ತಮ್ಮ ತಂದೆ/ತಾಯಿ/ಪೋಷಕರೊಂದಿಗೆ ಸಮಾಲೋಚಿಸಿದ ನಂತರ ಮಾಹಿತಿ/ ವಿವರಗಳನ್ನು ಖಚಿತಪಡಿಸಿಕೊಂಡು ಅನಂತರ ಅದರಲ್ಲಿ ಭರ್ತಿ ಮಾಡಬೇಕು ಮತ್ತು ಆ ಮೂಲಕ ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು.
• ಆನ್‍ಲೈನ್ ಅರ್ಜಿ ಭರ್ತಿಗೆ ಸಂಬಂಧಿಸಿದಂತೆ ಪ್ರತಿಯೊಂದು ವಿವರ ನಮೂದು ಕುರಿತಂತೆ ಅಭ್ಯರ್ಥಿಗೆ ಎಲ್ಲಾ ಅಗತ್ಯ ಮಾಹಿತಿ ನೀಡಲಾಗಿರುತ್ತದೆ.
• ಬಹಳಷ್ಟು ಅಂಕಣಗಳಿಗೆ ಅಭ್ಯರ್ಥಿಯು ಕೇವಲ ಈಗಾಗಲೇ ನೀಡಿರುವ ಸಿದ್ಧ ಮಾಹಿತಿಯಿಂದ ಬರಿ ಆಯ್ಕೆಗಳನ್ನು ಮಾತ್ರ ಮಾಡಬೇಕಾಗಿರುತ್ತದೆ ಮತ್ತು ಎಲ್ಲಾ ಅಂಕಣಗಳು ಡ್ರಾಪ್ ಡೌನ್ ಮೆನು ಮೂಲಕ ಸ್ವಯಂ ವಿವರ ನೀಡುತ್ತವೆ . ಅಭ್ಯರ್ಥಿಯು ಸೂಕ್ತವಾದ / ಸರಿ ಹೊಂದುವ ಅಂಶವನ್ನು ಆಯ್ಕೆ ಮಾಡಿಕೊಳ್ಳಬೇಕು.
• ಆನ್‍ಲೈನ್ ಅರ್ಜಿ ಸಲ್ಲಿಕೆ ¸ ಸಂಪೂರ್ಣ ಪ್ರಕ್ರಿಯೆ ಎರಡು ಹಂತಗಳಲ್ಲಿರುತ್ತದೆ. ಮೊದಲನೇ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ವಿವರವನ್ನು ಭರ್ತಿ ಮಾಡಬಹುದು ಮತ್ತು ನೀಡಿದ ಮಾಹಿತಿಯನ್ನು ಎಷ್ಟು ಬಾರಿ ಬೇಕಾದರೂ ತಿದ್ದುಪಡಿ/ ಬದಲಾವಣೆ ಮಾಡಬಹುದು ಹಾಗೂ ಕರಡು ಅರ್ಜಿಯ ಮುದ್ರಿತ ಪ್ರತಿಯನ್ನು ಘೋಷಣೆಯನ್ನು ಆಯ್ಕೆ ಮಾಡುವ ಮುನ್ನವೇ ತೆಗೆದುಕೊಳ್ಳಬೇಕು. ಎರಡನೇ ಹಂತವನ್ನು ಆರಂಭಿಸುವ ಮೊದಲು ಅಭ್ಯರ್ಥಿಗಳು ಅರ್ಜಿಯಲ್ಲಿರುವ ಮಾಹಿತಿಯನ್ನು ತಿದ್ದುಪಡಿ ಮಾಡಬಹುದು/ ಬದಲಾವಣೆ ಮಾಡಬಹುದು/ ತೆಗೆದು ಹಾಕಬಹುದು/ ಸೇರ್ಪಡೆ ಮಾಡಲು ಅವಕಾಶವಿರುತ್ತದೆ.
• ಅಭ್ಯರ್ಥಿಗಳು ಘೋಷಣೆ' (declaration ) ಮುನ್ನವೇ ತಾವಿ ನೀಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿದೆ
• ಘೋಷಣೆ' (declaration ) ಮಾಡಿದ ನಂತರ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಲು ಪಟ್ಟಿಯಲ್ಲಿರುವ ಬ್ಯಾಂಕ್‍ನ್ನು / ಇ-ಅಂಚೆ ಕಚೇರಿಯನ್ನು ಆಯ್ಕೆ ಮಾಡಿಕೊಂಡು ಚಲನ್ ಡೌನ್‍ಲೋಡ್ ಮಾಡಿ ಸಂಬಂಧಿಸಿದ ಬ್ಯಾಂಕ್‍ನಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು
• ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಭ್ಯರ್ಥಿಗಳು ಅಂತಿಮವಾಗಿ ಸಲ್ಲಿಸಿರುವ ಆನ್ಲೈನ್ ಅರ್ಜಿಯ ಪ್ರಿಂಟೌಟ್ ಅನ್ನು ಮುಂದಿನ ಸೀಟು ಹಂಚಿಕೆಯ ಹಂತದ ಪ್ರಕ್ರಿಯೆಗಾಗಿ ತೆಗೆದುಕೊಳ್ಳಬೇಕು.

For Quick Alerts
ALLOW NOTIFICATIONS  
For Daily Alerts

English summary
What is KCET, eligibility criteria and application procedure
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X