Teachers Day 2022 Quiz : ಶಿಕ್ಷಕರ ದಿನದ ಪ್ರಯುಕ್ತ ರಸಪ್ರಶ್ನೆಗಳು ಇಲ್ಲಿವೆ

ಶಿಕ್ಷಕರ ದಿನ 2022 : ಈ ದಿನವನ್ನು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿಕ್ಷಕರಿಗೆ ಸಮರ್ಪಿಸಲಾಗಿದೆ. ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ವಾರ್ಷಿಕೋತ್ಸವವಾಗಿದೆ.

 

ರಾಧಾಕೃಷ್ಣನ್ ಅವರು, ''ಶಿಕ್ಷಕರು ದೇಶದ ಉತ್ತಮ ಮನಸ್ಸುಗಳಾಗಬೇಕು'' ಎಂದರು. ಶಿಕ್ಷಕರು ನಮ್ಮ ಭವಿಷ್ಯದ ಮೂಲಾಧಾರಗಳು ಮತ್ತು ಜವಾಬ್ದಾರಿಯುತ ನಾಗರಿಕರನ್ನು ಮತ್ತು ಉತ್ತಮ ಮಾನವರನ್ನು ಸೃಷ್ಟಿಸಲು ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಾರೆ. ಈ ವಿಶೇಷ ದಿನದ ಪ್ರಯುಕ್ತ ಕೆಲವು ರಸಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ ಓದಿ ಉತ್ತರಿಸಿ.

ಶಿಕ್ಷಕರ ದಿನದ ಪ್ರಯುಕ್ತ ರಸಪ್ರಶ್ನೆಗಳು

ಶಿಕ್ಷಕರ ದಿನದಂದು ಕೆಳಗಿನ ರಸಪ್ರಶ್ನೆಗಳಿಗೆ ಉತ್ತರಿಸಿ :

1. ಭಾರತವು ಶಿಕ್ಷಕರ ದಿನವನ್ನು ಯಾವಾಗಿನಿಂದ ಆಚರಿಸುತ್ತಿದೆ?
A. 1962
B. 1972
C. 1965
D. 1975

 

ಉತ್ತರ. ಎ
ವಿವರಣೆ: 1962 ರಿಂದ ಭಾರತವು ಶಿಕ್ಷಕರ ದಿನವನ್ನು ಆಚರಿಸುತ್ತಿದೆ.

2. ಶಿಕ್ಷಕರ ದಿನವು ಹೇಗೆ ಹುಟ್ಟಿಕೊಂಡಿತು?

A. ಜವಾಹರಲಾಲ್ ನೆಹರು ಅವರ ಜನ್ಮದಿನ
B. ಇಂದಿರಾ ಗಾಂಧಿಯವರ ಜನ್ಮದಿನ
C. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ
D. ಮೇಲಿನ ಯಾವುದೂ ಅಲ್ಲ

ಉತ್ತರ. ಸಿ
ವಿವರಣೆ: ಭಾರತದಲ್ಲಿ ಶಿಕ್ಷಕರ ದಿನವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಅವರು ಹೆಸರಾಂತ ವಿದ್ವಾಂಸರು, ಭಾರತ ರತ್ನ ಪುರಸ್ಕೃತರು, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ.

3. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ:
A. ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾದರು ಮತ್ತು ಭಾರತದ ಸಂವಿಧಾನ ಸಭೆಗೆ ಆಯ್ಕೆಯಾದರು.

B. 1954 ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು.

C. ಅವರು 1961 ರಲ್ಲಿ ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿಯನ್ನು ಪಡೆದರು.

D. ಎಲ್ಲಾ ಸರಿಯಾಗಿದೆ

ಉತ್ತರ. ಡಿ
ವಿವರಣೆ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾದರು ಮತ್ತು ಭಾರತದ ಸಂವಿಧಾನ ಸಭೆಗೆ ಆಯ್ಕೆಯಾದರು. 1954 ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಅವರು 1961 ರಲ್ಲಿ ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿಯನ್ನು ಪಡೆದರು.

4. "ಅಧ್ಯಾಪನವು ವೃತ್ತಿಯಲ್ಲ, ಜೀವನ ವಿಧಾನ" ಎಂದು ಯಾರು ಹೇಳಿದರು?
A. ಡಾ. ರಾಧಾಕೃಷ್ಣನ್
B. ಸ್ವಾಮಿ ವಿವೇಕಾನಂದ
C. ಗುಲ್ಜಾರಿಲಾಲ್ ನಂದಾ
D. ನರೇಂದ್ರ ಮೋದಿ

ಉತ್ತರ. ಡಿ
ವಿವರಣೆ: "ಶಿಕ್ಷಕ ವೃತ್ತಿಯಲ್ಲ, ಜೀವನ ವಿಧಾನ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

5. ಡಾ. ರಾಧಾಕೃಷ್ಣನ್ ಯಾವಾಗ ಭಾರತದ ರಾಷ್ಟ್ರಪತಿಯಾದರು?
A. 1952
B. 1962
C. 1972
D. 1982

ಉತ್ತರ. ಬಿ

ವಿವರಣೆ: ಡಾ. ರಾಧಾಕೃಷ್ಣನ್ 1962 ರಲ್ಲಿ ಭಾರತದ ರಾಷ್ಟ್ರಪತಿಯಾದರು.

6. ವಿಶ್ವವಿದ್ಯಾಲಯ ಶಿಕ್ಷಣ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
A. 1928
B. 1935
C. 1948
D. 1950

ಉತ್ತರ. ಸಿ
ವಿವರಣೆ: 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವನ್ನು ರಚಿಸಲಾಯಿತು.

7. 1931 ರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಯಾವ ವಿಶ್ವವಿದ್ಯಾಲಯದ ಉಪಕುಲಪತಿಯಾದರು?
A. ಮೈಸೂರು ವಿಶ್ವವಿದ್ಯಾಲಯ
B. ಆಂಧ್ರ ವಿಶ್ವವಿದ್ಯಾಲಯ
C. ಕರ್ನಾಟಕ ವಿಶ್ವವಿದ್ಯಾಲಯ
D. ಮೇಲಿನ ಯಾವುದೂ ಅಲ್ಲ

ಉತ್ತರ. ಬಿ
ವಿವರಣೆ: 1931 ರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾದರು.

8. ಭಾರತದಲ್ಲಿ ಯಾವ ದಿನಾಂಕದಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ?
A. 14 ನವೆಂಬರ್
B. 5 ಅಕ್ಟೋಬರ್
C. 5 ಸೆಪ್ಟೆಂಬರ್
D. 5 ಅಕ್ಟೋಬರ್

ಉತ್ತರ. ಸಿ
ವಿವರಣೆ: ಭಾರತದಲ್ಲಿ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ.

9. ಶ್ರೀಕೃಷ್ಣನ ಗುರು ಯಾರೆಂದು ಊಹಿಸಿ?
A. ದ್ರೋಣಾಚಾರ್ಯ
B. ಸಂದೀಪನಿ ಮುನಿ
C. ಋಷಿ ವಸಿಷ್ಠ
D. ಗರ್ಗ್ ಮುನಿ

ಉತ್ತರ. ಬಿ
ವಿವರಣೆ: ಸಾಂದೀಪನಿ ಮುನಿಯು ಶ್ರೀಕೃಷ್ಣನ ಗುರು.

10. ಡಾ. ರಾಧಾಕೃಷ್ಣನ್ ಅವರು ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು?
A. ವಿಜ್ಞಾನ
B. ಸಮಾಜಶಾಸ್ತ್ರ
C. ಇತಿಹಾಸ
D. ಫಿಲಾಸಫಿ

ಉತ್ತರ. ಡಿ
ವಿವರಣೆ: ಡಾ. ರಾಧಾಕೃಷ್ಣನ್ ಅವರು ಫಿಲಾಸಫಿ ವಿಷಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು.

For Quick Alerts
ALLOW NOTIFICATIONS  
For Daily Alerts

English summary
Teachers day 2022 is celebrated on September 5. Here is the questions and answers given here on teachers day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X