World Aids Vaccine Day 2022 : ಈ ದಿನದ ಇತಿಹಾಸ, ಮಹತ್ವ ಮತ್ತು ಉಲ್ಲೇಖಗಳು ಇಲ್ಲಿವೆ

ವಿಶ್ವ ಏಡ್ಸ್ ಲಸಿಕೆ ದಿನವನ್ನು ಪ್ರತಿ ವರ್ಷ ಮೇ 18 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ವಿರುದ್ಧ ಲಸಿಕೆಯನ್ನು ಕಂಡುಹಿಡಿಯಲು ಸತತವಾಗಿ ಶ್ರಮಿಸುತ್ತಿರುವ ಸಾವಿರಾರು ವಿಜ್ಞಾನಿಗಳು ಮತ್ತು ಆರೋಗ್ಯ ವೃತ್ತಿಪರರ ಪ್ರಯತ್ನಗಳನ್ನು ಗುರುತಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.

ಈ ದಿನವನ್ನು ಎಚ್‌ಐವಿ ಲಸಿಕೆ ಜಾಗೃತಿ ದಿನ ಎಂದೂ ಕೂಡ ಕರೆಯಲಾಗುತ್ತದೆ ಇದು ಎಚ್‌ಐವಿ ಸೋಂಕು ಮತ್ತು ಏಡ್ಸ್ ಹರಡುವುದನ್ನು ತಡೆಯಲು ಎಚ್‌ಐವಿ ಲಸಿಕೆಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಉಲ್ಲೇಖಗಳನ್ನು ಇಲ್ಲಿ ತಿಳಿಯೋಣ.

ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ ಮತ್ತು ಮಹತ್ವ ಗೊತ್ತಾ ?

ವಿಶ್ವ ಏಡ್ಸ್ ಲಸಿಕೆ ದಿನ 2022 ಇತಿಹಾಸ ಮತ್ತು ಮಹತ್ವ :

ವಿಶ್ವ ಏಡ್ಸ್ ಲಸಿಕೆ ದಿನವು ಏಡ್ಸ್ ಲಸಿಕೆಯನ್ನು ಕಂಡುಹಿಡಿಯುವ ಸಲುವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳು ಮತ್ತು ಸ್ವಯಂಸೇವಕರನ್ನು ಗೌರವಿಸುವ ದಿನವಾಗಿದೆ.

1997 ರಲ್ಲಿ ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾಷಣ ಮಾಡಿದ ನಂತರ ಮೊದಲ ಬಾರಿಗೆ 1998ರ ಮೇ ತಿಂಗಳಿನಲ್ಲಿ ಈ ದಿನವನ್ನು ಆಚರಿಸಲಾಯಿತ. ಅಂದು ಈ ಸೋಂಕು ಹರಡುವಿಕೆಯನ್ನು ತಡೆಯಲು ಮತ್ತು HIV ಅನ್ನು ನಾಶಮಾಡಲು ಲಸಿಕೆ ಏಕೈಕ ಮಾರ್ಗವಾಗಿದೆ ಎಂದು ಪ್ರಸ್ತಾಪಿಸಿದರು.

2019 ರ ಅಂತ್ಯದ ವೇಳೆಗೆ 38 ಮಿಲಿಯನ್ ಜನಸಂಖ್ಯೆಯು ಹೆಚ್ಐವಿ ಸೋಂಕಿತರಾಗಿದ್ದಾರೆ ಹಾಗಾಗಿ ಇದೊಂದು ಗಂಭೀರವಾದ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಆದಾಗ್ಯೂ HIV ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಆರೈಕೆಗೆ HIV ಸೋಂಕನ್ನು ನಿಯಂತ್ರಿಸಲು ಲಸಿಕೆಯಿಂದ ದೀರ್ಘಾಯುಷ್ಯವನ್ನು ಹೊಂದಲು ಅನುವು ಮಾಡಿಕೊಡುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ ಮತ್ತು ಮಹತ್ವ ಗೊತ್ತಾ ?

ವಿಶ್ವ ಏಡ್ಸ್ ಲಸಿಕೆ ದಿನ 2022 ಉಲ್ಲೇಖಗಳು :

ಮಗುವಿಗೆ ಪ್ರೀತಿ, ನಗು ಮತ್ತು ಶಾಂತಿಯನ್ನು ನೀಡಿ, ಏಡ್ಸ್ ಅಲ್ಲ - ನೆಲ್ಸನ್ ಮಂಡೇಲಾ

ಜನರು ಏಡ್ಸ್‌ನಿಂದ ಸಾಯುತ್ತಿರುವುದು ಸಾಕಷ್ಟು ಕೆಟ್ಟದ್ದು, ಆದರೆ ಅಜ್ಞಾನದಿಂದ ಯಾರೂ ಸಾಯಬಾರದು - ಎಲಿಜಬೆತ್ ಟೇಲರ್

ಶಿಕ್ಷಣ ಪಡೆಯಲು, ಪರೀಕ್ಷೆಗೆ ಒಳಗಾಗಲು, ಏಡ್ಸ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಾವು ಜನರನ್ನು ಪ್ರೋತ್ಸಾಹಿಸಬೇಕು - ಗ್ವೆನ್ ಮೂರ್

ಏಡ್ಸ್ ಒಂದು ಕಾಯಿಲೆಯಾಗಿದ್ದು ಅದರ ಬಗ್ಗೆ ಮಾತನಾಡುವುದು ಕಷ್ಟ - ಬಿಲ್ ಗೇಟ್ಸ್

For Quick Alerts
ALLOW NOTIFICATIONS  
For Daily Alerts

English summary
World aids vaccine day is celebrated on may 18. Here is the history an significance of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X