World No Tobacco Day 2022 : ವಿಶ್ವ ತಂಬಾಕು ರಹಿತ ದಿನದ ಇತಿಹಾಸ, ಮಹತ್ವ, ಥೀಮ್ ಮತ್ತು ಉಲ್ಲೇಖಗಳು ಇಲ್ಲಿವೆ

ತಂಬಾಕು ಸೇವನೆಯಿಂದ ಉಂಟಾಗುವ ಅಪಾಯವನ್ನು ಎಲ್ಲರಿಗೂ ತಿಳಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ವಾರ್ಷಿಕ ಅಭಿಯಾನದ ಮೂಲಕ ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಮತ್ತು ಜನರ ಆರೋಗ್ಯವನ್ನು ರಕ್ಷಿಸಲು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ವಿಶ್ವ ತಂಬಾಕು ರಹಿತ ದಿನ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ ತಂಬಾಕು ಸೇವನೆಯಿಂದ ಎದುರಾಗುವ ಆರೋಗ್ಯದ ಅಪಾಯಗಳನ್ನು ಎತ್ತಿ ತೋರಿಸಲು ವಿಶ್ವ ತಂಬಾಕು ರಹಿತ ದಿನವನ್ನು ಉತ್ತೇಜಿಸುತ್ತದೆ. ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ನೀತಿಗಳನ್ನು ಜಾರಿಗೆ ತರಲು ಸರ್ಕಾರಗಳನ್ನು ಉತ್ತೇಜಿಸುತ್ತದೆ.

WHO ಪ್ರಕಾರ ತಂಬಾಕು ಸೇವನೆಯ ಪರಿಣಾಮ ಪ್ರತಿ ವರ್ಷ ಪ್ರಪಂಚದಾದ್ಯಂತ 8 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತಿದೆ. ಯಾವುದೇ ರೀತಿಯ ತಂಬಾಕು ಸೇವನೆಯು ಶ್ವಾಸಕೋಶದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರಾಟದ ಕಾಯಿಲೆಗಳ ತೀವ್ರತೆಯನ್ನು ಹೆಚ್ಚಿಸುತ್ತದೆ.

ವಿಶ್ವ ತಂಬಾಕು ರಹಿತ ದಿನ 2022 ಥೀಮ್ :

ಪ್ರತಿ ವರ್ಷ ವಿಶ್ವ ತಂಬಾಕು ದಿನವನ್ನು ವಿಭಿನ್ನ ವಿಷಯದೊಂದಿಗೆ ಆಚರಿಸಲಾಗುತ್ತದೆ; ಈ ವರ್ಷ ವಿಶ್ವ ತಂಬಾಕು ರಹಿತ ದಿನದ ಥೀಮ್ "ಪರಿಸರವನ್ನು ರಕ್ಷಿಸಿ". 2022ರ ಜಾಗತಿಕ ಅಭಿಯಾನವು ಅದರ ಕೃಷಿ, ಉತ್ಪಾದನೆ ಮತ್ತು ವಿತರಣೆಯಿಂದ ಹಿಡಿದು ಉತ್ಪಾದಿಸುವ ವಿಷಕಾರಿ ತ್ಯಾಜ್ಯದವರೆಗೆ ಸಂಪೂರ್ಣ ತಂಬಾಕು ಚಕ್ರದಿಂದ ಪರಿಸರದ ಮೇಲಾಗುವ ಪ್ರಭಾವದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಈ ವರ್ಷದ ಥೀಮ್ ಪರಿಸರದ ಮೇಲಾಗುವ ತಂಬಾಕಿನ ಪ್ರಭಾವದ ಮೇಲೆ ಕೇಂದ್ರೀಕರಿಸುತ್ತದೆ. ಪರಿಸರದ ಮೇಲೆ ತಂಬಾಕು ಉದ್ಯಮದ ಹಾನಿಕಾರಕ ಪರಿಣಾಮವು ಅಗಾಧವಾಗಿದೆ ಹಾಗಾಗಿ ನಮ್ಮ ಭೂಮಂಡಲದ ವಿರಳವಾದ ಸಂಪನ್ಮೂಲಗಳು ಮತ್ತು ದುರ್ಬಲವಾದ ಪರಿಸರ ವ್ಯವಸ್ಥೆಗಳಿಗೆ ಅನಗತ್ಯ ಒತ್ತಡವನ್ನು ತಂದೊಡ್ಡುತ್ತಿವೆ.

ವಿಶ್ವ ತಂಬಾಕು ರಹಿತ ದಿನ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ

ವಿಶ್ವ ತಂಬಾಕು ರಹಿತ ದಿನ 2022 ಇತಿಹಾಸ :

1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಏಪ್ರಿಲ್ 7,1988 ರಂದು ವಿಶ್ವ ಧೂಮಪಾನ ರಹಿತ ದಿನ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಕನಿಷ್ಠ 24 ಗಂಟೆಗಳ ಕಾಲ ತಂಬಾಕು ಸೇವನೆಯನ್ನು ತಡೆಯಲು ಜನರನ್ನು ಪ್ರೇರೇಪಿಸಲು ಈ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ನಂತರ 1988 ರಲ್ಲಿ ಸಂಸ್ಥೆಯು ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುವುದು ಎಂದು ಮತ್ತೊಂದು ನಿರ್ಣಯವನ್ನು ಅಂಗೀಕರಿಸಿತು.

2008 ರಲ್ಲಿ, WHO ತಂಬಾಕು ಬಗ್ಗೆ ಯಾವುದೇ ರೀತಿಯ ಜಾಹೀರಾತು ಅಥವಾ ಪ್ರಚಾರವನ್ನು ನಿಷೇಧಿಸಿತು. ಬಹುಶಃ ಜಾಹೀರಾತುಗಳು ಯುವಕರನ್ನು ಧೂಮಪಾನದಲ್ಲಿ ತೊಡಗಿಸಿಕೊಳ್ಳಲು ಆಕರ್ಷಿಸುತ್ತವೆ ಎಂದು ಭಾವಿಸಿದೆ.

ಈ ದಿನವು ಜನರ ಹೃದಯರಕ್ತನಾಳದ ಆರೋಗ್ಯದ ಮೇಲೆ ತಂಬಾಕಿನ ಪ್ರಭಾವದ ಮೇಲೆ ಕೇಂದ್ರೀಕರಿಸುತ್ತದೆ. ಇದು ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಬಾಹ್ಯ ನಾಳೀಯ ಕಾಯಿಲೆಯನ್ನು ಉಂಟುಮಾಡುವ ಅಪಾಯಕಾರಿ ಅಂಶವಾಗಿರಬಹುದು. ಅಲ್ಲದೆ ಹೃದಯರಕ್ತನಾಳದ ಕಾಯಿಲೆಗೆ (ಸಿವಿಡಿ) ತಂಬಾಕು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬ ಜ್ಞಾನವನ್ನು ದಿನವು ಜನರಿಗೆ ನೀಡುತ್ತದೆ.

ಧೂಮಪಾನವನ್ನು ತ್ಯಜಿಸುವ ಪ್ರಯೋಜನಗಳು:

ಈ ದಿನದಂದು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲು ಹಲವಾರು ಅಭಿಯಾನಗಳು, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ನೀವು ಧೂಮಪಾನವನ್ನು ತ್ಯಜಿಸಿದರೆ ತಕ್ಷಣದ ಮತ್ತು ದೀರ್ಘಾವಧಿಯ ಆರೋಗ್ಯ ಪ್ರಯೋಜನಗಳಿವೆ.

WHO ಪ್ರಕಾರ ಕೆಲವು ಪ್ರಯೋಜನಕಾರಿ ಆರೋಗ್ಯ ಬದಲಾವಣೆಗಳು ನಡೆಯುತ್ತವೆ:

* 20 ನಿಮಿಷಗಳಲ್ಲಿ ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.
* 12 ಗಂಟೆಗಳಲ್ಲಿ ನಿಮ್ಮ ರಕ್ತದಲ್ಲಿನ ಕಾರ್ಬನ್ ಮಾನಾಕ್ಸೈಡ್ ಮಟ್ಟವು ಸಾಮಾನ್ಯ ಸ್ಥಿತಿಗೆ ಇಳಿಯುತ್ತದೆ ಮತ್ತು 2 ರಿಂದ 12 ವಾರಗಳಲ್ಲಿ ನಿಮ್ಮ ಶ್ವಾಸಕೋಶದ ಕಾರ್ಯವು ಹೆಚ್ಚಾಗುತ್ತದೆ.
* 1 ರಿಂದ 9 ತಿಂಗಳುಗಳಲ್ಲಿ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಮತ್ತು 1 ವರ್ಷದಲ್ಲಿ ನಿಮ್ಮ ಪರಿಧಮನಿಯ ಹೃದಯ ಕಾಯಿಲೆಯ ಅಪಾಯವು ಧೂಮಪಾನಿಗಳ ಅರ್ಧದಷ್ಟು ಇರುತ್ತದೆ.

ವಿಶ್ವ ತಂಬಾಕು ರಹಿತ ದಿನದ ಉಲ್ಲೇಖಗಳು:

"ಧೂಮಪಾನವನ್ನು ತ್ಯಜಿಸುವುದು ಪ್ರಪಂಚದಲ್ಲಿ ಅತ್ಯಂತ ಸುಲಭವಾದ ವಿಷಯವಾಗಿದೆ. ನನಗೆ ತಿಳಿದಿದೆ ಏಕೆಂದರೆ ನಾನು ಅದನ್ನು ಸಾವಿರಾರು ಬಾರಿ ಮಾಡಿದ್ದೇನೆ" - ಮಾರ್ಕ್ ಟ್ವೈನ್
"ಒಂದು ಸಿಗರೇಟ್ ಮಾತ್ರ ಗ್ರಾಹಕ ಉತ್ಪನ್ನವಾಗಿದ್ದು, ನಿರ್ದೇಶಿಸಿದಂತೆ ಬಳಸಿದಾಗ ಅದರ ಗ್ರಾಹಕರನ್ನು ಕೊಲ್ಲುತ್ತದೆ." -ಗ್ರೋ ಬ್ರಂಡ್ಟ್ಲ್ಯಾಂಡ್
"ಸಿಗರೇಟ್ ಹಿಡಿಯುವುದಕ್ಕಿಂತ ನಿಮ್ಮ ಬೆರಳುಗಳ ನಡುವೆ ಪುಸ್ತಕವನ್ನು ಹಿಡಿದಿಟ್ಟುಕೊಳ್ಳುವುದು ಉತ್ತಮ." -ಬಿಸ್ತಾ ನಿರೂಜ್

For Quick Alerts
ALLOW NOTIFICATIONS  
For Daily Alerts

English summary
World no tobacco day is celebrated on may 31. Here is the history, significance, theme and quotes of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X