ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಇಂದ ಒಟ್ಟು 401 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೇ 12ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜೂನ್ 12, 2017 ಕೊನೆ ದಿನ. ಜೂನ್ 13ರೊಳಗೆ ಶುಲ್ಕವನ್ನು ಪಾವತಿಸಿರಬೇಕು. ಇನ್ನು ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 20ರಂದು ನಡೆಸಲು ಉದ್ದೇಶಿಸಲಾಗಿದೆ.
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳ ಪ್ರವೇಶ ಶುಲ್ಕ ರೂ.300/-
- ಪ್ರ ವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ರೂ.150/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ಅಂಗವಿಕಲರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಹುದ್ದೆಗಳ ವಿವರ
ಗ್ರೂಪ್ 'ಎ' :150 ಹುದ್ದೆಗಳು
- ಕರ್ನಾಟಕ ಆಡಳಿತ ಸೇವೆಗಳು _ಕೆ.ಎ.ಎಸ್(ಕಿರಿಯ ಶ್ರೇಣಿ) ಸಹಾಯಕ ಆಯುಕ್ತರು 30 ಹುದ್ದೆ.
- ಕರ್ನಾಟಕ ಪೋಲಿಸ್ ಸೇವೆಗಳು- ಆರಕ್ಷಕ ಉಪಾಧೀಕ್ಷಕರು (ಡಿ.ವೈ.ಎಸ್.ಪಿ.) (ಒಳಾಡಳಿತ ಇಲಾಖೆ) 20
- ಕರ್ನಾಟಕ ಸಾಮಾನ್ಯ ಸೇವೆಗಳು(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ)- ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) 08
- ಕರ್ನಾಟಕ ಖಜಾನೆ ಸೇವೆಗಳು- ಸಹಾಯಕ ನಿರ್ದೇಶಕರು/ಜಿಲ್ಲಾ ಖಜಾನಾಧಿಕಾರಿ (ಖಜಾನೆ ಇಲಾಖೆ) 14
- ಕರ್ನಾಟಕ ಹಿಂದುಳಿದ ವರ್ಗಗಳ ಸೇವೆಗಳು- ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ) 09
- ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳು- ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಆರ್ಥಿಕ ಇಲಾಖೆ) 65
- ಕರ್ನಾಟಕ ಕಾರ್ಮಿಕ ಸೇವೆಗಳು- ಸಹಾಯಕ ಕಾರ್ಮಿಕ ಆಯುಕ್ತರು (ಕಾರ್ಮಿಕ ಇಲಾಖೆ) 04
ಗ್ರೂಪ್ 'ಬಿ': 251 ಹುದ್ದೆಗಳು
- ಕರ್ನಾಟಕ ಆಡಳಿತ ಸೇವೆಗಳು- ತಹಶೀಲ್ದಾರ್-(ಗ್ರೇಡ್-2) (ಕಂದಾಯ ಇಲಾಖೆ) 66
- ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳು- ವಾಣಿಜ್ಯ ತೆರಿಗೆ ಅಧಿಕಾರಿ (ಆರ್ಥಿಕ ಇಲಾಖೆ) 10
- ಕರ್ನಾಟಕ ಕಾರಾಗೃಹಗಳ ಆಡಳಿತ ಸೇವೆಗಳು- ಸಹಾಯಕ ಅಧೀಕ್ಷಕರು, ಕಾರಾಗೃಹಗಳ ಇಲಾಖೆ (ಒಳಾಡಳಿತ ಇಲಾಖೆ) 01
- ಕರ್ನಾಟಕ ಅಬಕಾರಿ ಸೇವೆಗಳು- ಅಬಕಾರಿ ಉಪ ಅಧೀಕ್ಷಕರು (ಅಬಕಾರಿ ಇಲಾಖೆ) 05
- ಕರ್ನಾಟಕ ಖಜಾನೆ ಸೇವೆಗಳು- ಸಹಾಯಕ ಖಜಾನಾಧಿಕಾರಿ 04
- ಕರ್ನಾಟಕ ಪೌರಾಡಳಿತ ಸೇವೆಗಳು ಮುಖ್ಯಾಧಿಕಾರಿ ಶ್ರೇಣಿ-1,ಪೌರಾಡಳಿತ ನಿರ್ದೇಶನಾಲಯ (ನಗರಾಭಿವೃದ್ಧಿ ಇಲಾಖೆ) 19
- ಆಹಾರ ನಾಗರಿಕ ಸರಬರಾಜು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳು- ಸಹಾಯಕ ನಿರ್ದೇಶಕರು (ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ) 02
- ಕರ್ನಾಟಕ ಕೃಷಿ ಮಾರುಕಟ್ಟೆ ಸೇವೆಗಳು- ಸಹಾಯಕ ನಿರ್ದೇಶಕರು, ಕೃಷಿ ಮಾರುಕಟ್ಟೆ ಇಲಾಖೆ, (ಸಹಕಾರ ಇಲಾಖೆ) 02
- ಕರ್ನಾಟಕ ಸಹಕಾರ ಸೇವೆಗಳು- ಸಹಕಾರ ಸಂಘಗಳ ಸಹಾಯಕ ನಿಬಂಧಕರು (ಸಹಕಾರ ಇಲಾಖೆ) 36
- ಕರ್ನಾಟಕ ಸಹಕಾರ ಲೆಕ್ಕಪರಿಶೋಧನಾ ಸೇವೆಗಳು- ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರು, ಲೆಕ್ಕಪರಿಶೋಧನಾ ಇಲಾಖೆ (ಸಹಕಾರ ಇಲಾಖೆ) 02
- ಕರ್ನಾಟಕ ಕಾರ್ಮಿಕ ಸೇವೆಗಳು- ಕಾರ್ಮಿಕ ಅಧಿಕಾರಿ (ಕಾರ್ಮಿಕ ಇಲಾಖೆ) 05
- ಕರ್ನಾಟಕ ಉದ್ಯೋಗ ಮತ್ತು ತರಬೇತಿ ಸೇವೆಗಳು- ಉದ್ಯೋಗಾಧಿಕಾರಿ (ಉದ್ಯೋಗ ಮತ್ತು ತರಬೇತಿ ಇಲಾಖೆ) 09
ಹುದ್ದೆಗಳ ನೇಮಕಾತಿ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 12-05-2017.
- ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017 ರ ರಾತ್ರಿ 11.45
- ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 13-06-2017
- ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿರುವ ದಿನಾಂಕ: 20-08-2017
- ಮುಖ್ಯ ಪರೀಕ್ಷೆಯನ್ನು ಇದೇ ನವೆಂಬರ್ ನಲ್ಲಿ ನಡೆಸಲು ಆಯೋಗವು ನಿರ್ಧರಿಸಿದೆ. (ಅನಿವಾರ್ಯ ಕಾರಣಗಳಿದ್ದಲ್ಲಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಬಹುದು.)
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬಳ್ಳಾರಿ, ಮೈಸೂರು, ಬೆಳಗಾವಿ, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಮತ್ತು ರಾಯಚೂರು ನಗರದಲ್ಲಿ ಪರೀಕ್ಷೆಗಳು ನಡೆಯಲಿವೆ.
ಹೆಚ್ಚಿನ ವಿವರಗಳಿಗೆ ಆಯೋಗದ ವೆಬ್ ಸೈಟ್ kpsc.kar.nic.in ಗಮನಿಸಿ
For Quick Alerts
For Daily Alerts