ಕೃಷಿ ಇಲಾಖೆಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ

Posted By: Vinaykumar

ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಲಿಂಗತ್ವ ಸಂಯೋಜಕ ಹುದ್ದೆಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಿದೆ.

ಆತ್ಮ ಯೋಜನೆಯಡಿ ನೇಮಕಾತಿ

ಹುದ್ದೆಯ ವಿವರ

ಹುದ್ದೆಯ ಹೆಸರು: ಲಿಂಗತ್ವ ಸಂಯೋಜಕರು
ವಿದ್ಯಾರ್ಹತೆ:ಕೃಷಿ ಹಾಗು ಕೃಷಿ ಸಂಬಂಧಿತ ವಿಷಯಗಳಲ್ಲಿ ಗೃಹವಿಜ್ಞಾನ ವಿಸ್ತರಣೆ, ಸೇರಿದಂತೆ ಅಥವಾ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
ಅನುಭವ: ಕನಿಷ್ಠ 5 ವರ್ಷಗಳ ಕೃಷಿ ವಿಸ್ತರಣೆ ಇಲ್ಲವೇ ಲಿಂಗತ್ವ ಸಂಬಂಧಿತ ಕೆಲಸಗಳಲ್ಲಿ ಅನುಭವ
ಕಾರ್ಯಸ್ಥಾನ : ಕೇಂದ್ರ ಕಛೇರಿ, ಬೆಂಗಳೂರು
ಮಾಹೆಯಾನ ವೇತನ: ರೂ.40,000/-
ಗರಿಷ್ಠ ಸೇವಾ ಅವಧಿ: ಈ ಹುದ್ದೆಯು ಗರಿಷ್ಠ ಎರಡು ವರ್ಷದಾಗಿದ್ದು, ಆದಾಗ್ಯೂ ಪ್ರತಿ ವರ್ಷ ಕೇಂದ್ರ ಸರ್ಕಾರದ ಸೂಚನೆಗೆ ಒಳಪಟ್ಟಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ಸೈಟ್ http ://raitamitra.kar.nic.in ನಲ್ಲಿ ಮಾಹಿತಿ ಪಡೆಯಬಹುದು. ಅರ್ಜಿಗಳನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 25 -02 -2017 ರಂದು ಸಂಜೆ ಸಮಯ 5:30 ರ ಒಳಗಾಗಿ " ಕೃಷಿ ಆಯುಕ್ತಾಲಯ, ಕೃಷಿ ಇಲಾಖೆ, ಶೇಷಾದ್ರಿ ರಸ್ತೆ, ಬೆಂಗಳೂರು-01 " ರವರಿಗೆ ತಲುಪಿಸುವುದು, ಲಕೋಟೆ ಮೇಲೆ ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಕೆಂಪು ಶಾಯಿಯಲ್ಲಿ ನಮೂದಿಸಬೇಕು.
ಅರ್ಜಿಗಳನ್ನು ವೆಬ್ಸೈಟ್ ನಲ್ಲಿ ಸೂಚಿಸಿರುವಂತೆ ಅಭ್ಯರ್ಥಿಯು ಅರ್ಜಿಯೊಂದಿಗೆ ಸಲ್ಲಿಸಲಾಗಿರುವ ಮಾಹಿತಿ/ ದಾಖಲಾತಿಗಳನ್ವಯ ಆದ್ಯತೆ ಪಟ್ಟಿಯನ್ನು ತಯಾರಿಸಿ ಕೇಂದ್ರ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಕೇಂದ್ರ ಕಚೇರಿಯ ಆತ್ಮ ಘಟಕವನ್ನು ಸಂಪರ್ಕಿಸುವುದು.
ದೂರವಾಣಿ ಸಂಖ್ಯೆ:080 -22074158

ಆತ್ಮ ಯೋಜನೆ

ಆತ್ಮ ಯೋಜನೆಯು ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಉಳಿಸಿ ಕೃಷಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವೆ ಸಂಪೂರ್ಣ ಹಣ ಒದಗಿಸುತ್ತಿದ್ದು ಹಳ್ಳಿಗಳ ಮತ್ತು ಕೃಷಿಕರ ಉಳಿವಿಗಾಗಿ ಯೋಜನೆಯನ್ನು ರೂಪಿಸಲಾಗಿದೆ. ಕೃಷಿ ಕುಟುಂಬ ಹೊಂದಿರುವವರು, ಕೃಷಿ ಸಮುದಾಯ, ಮಹಿಳೆಯರು ಸೇರಿದಂತೆ ಇನ್ನು ಅನೇಕ ಮಂದಿ ಆತ್ಮ ಯೋಜನೆಯ ಫಲಾನುಭವಿಗಳಾಗಿದ್ದರೆ. ಸಬ್ಸಿಡಿ ಮೂಲಕ ಯೋಜನೆಯ ಫಲವನ್ನು ಪಡೆಯುತ್ತಿದ್ದು ಎಲ್ಲಾ ರೀತಿಯ ಕೃಷಿಕರು ಇದಕ್ಕೆ ಒಳಪಡುತ್ತಾರೆ. ಆತ್ಮ ಯೋಜನೆಯಡಿಯಲ್ಲಿ ಉದ್ಯೋಗಾವಕಾಶವು ಸೃಷ್ಟಿಯಾಗುತ್ತಿದ್ದು ಅನೇಕ ನಿರುದ್ಯೋಗಿಗಳು ಕೂಡ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

English summary
agriculture department invites application for the contract basis recruitment under aatma yojane.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia