ಕೊಪ್ಪಳದಲ್ಲಿ ಅಕೌಂಟಿಂಗ್ ಕನ್ಸಲ್‌ಟೆಂಟ್ ನೇಮಕಾತಿ

Posted By:

ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅವಶ್ಯವಿರುವ ಅಕೌಂಟಿಂಗ್ ಕನ್ಸಲ್‌ಟೆಂಟ್ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆ: 54 ಹುದ್ದೆಗಳ ನೇಮಕಾತಿ

ಜಿಲ್ಲಾ ನಗರಾಭಿವೃದ್ದಿಕೋಶ, ಕೊಪ್ಪಳದಲ್ಲಿ ಹೊಸದಾಗಿ ಸೃಜನೆಯಾಗಿರುವ ಒಂದು ಅಕೌಂಟೆಂಟ್ ಕನ್ಸಲ್‌ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚೆಯುಳ್ಳ ಎಂ.ಕಾಂ ಪದವೀಧರರು ಅರ್ಜಿಗಳನ್ನು ಅವಶ್ಯಕ ದಾಖಲಾತಿಗಳೊಂದಿಗೆ ದಿನಾಂಕ 03-02-2018 ಸಂಜೆ 5:30 ಗಂಟೆಯೊಳಗೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರಿಗೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಲು ಸೂಚಿಸಿದೆ.

ಫೆಬ್ರವರಿ 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳ

 ಕೊಪ್ಪಳದಲ್ಲಿ ಉದ್ಯೋಗಾವಕಾಶ

ಹುದ್ದೆಯ ವಿವರ

ಹುದ್ದೆಯ ಹೆಸರು: ಅಕೌಂಟಿಂಗ್ ಕನ್ಸಲ್‌ಟೆಂಟ್

ವಿದ್ಯಾರ್ಹತೆ

ಎಂ.ಕಾಂ ಪದವಿ, ಅಕೌಂಟಿಂಗ್ ಮತ್ತು ಆಡಿಟ್ ನಲ್ಲಿ ಐದು ವರ್ಷಗಳ ಕನಿಷ್ಟ ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನವುಳ್ಳವರಾಗಿದ್ದು, ಸದರಿಯವರು ಎಂ.ಎಸ್ ಆಫೀಸ್, ಟ್ಯಾಲಿಯಲ್ಲಿ ಅನುಭವವುಳ್ಳವರಾಗಿರಬೇಕು.
ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನವುಳ್ಳವರಾಗಿರಬೇಕು.

ವೇತನ

ನೇಮಕಾತಿ ಆಗುವ ಎಂ.ಕಾಂ ಪದವೀಧರರ ಒಟ್ಟಾರೆ ಮಾಸಿಕ ವೇತನ ರೂ.30000/-

ಅರ್ಜಿ ಸಲ್ಲಿಕೆ

ನೇಮಕಾತಿ ಕೋರಿ ಅರ್ಜಿ ನಮೂನೆಗಳನ್ನು ಜಿಲ್ಲಾ ನಗರಾಭಿವೃದ್ದಿಕೋಶ, ಕೊಪ್ಪಳ ಇವರಲ್ಲಿ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳ ಪ್ರತಿ ಹಾಗೂ ಒಂದು ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಸೂಕ್ತ ಲಗತ್ತುಗಳಿಲ್ಲದೆ ಸಲ್ಲಿಸಲಾದ ಅರ್ಜಿಗಳನ್ನು ಯಾವುದೇ ಸೂಚನೆಗಳಿಲ್ಲದೆ ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳ ನೇಮಕಾತಿ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಅರ್ಹತೆ (ಮೆರಿಟ್) ಸರ್ಕಾರದ ನಿಯಮ/ಸುತ್ತೋಲೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಗುತ್ತಿಗೆ ಅವಧಿಯು ಪ್ರಾಥಮಿಕ ಒಂದು ವರ್ಷ ಅವಧಿಯದಾಗಿದ್ದು, ಒಂದು ವೇಳೆ ಅವಶ್ಯಕತೆಯಿದ್ದಲ್ಲಿ ಗುತ್ತಿಗೆ ಅವಧಿಯನ್ನು ಅಭ್ಯರ್ಥಿಗಳ ತೃಪ್ತಿಕರ ಸೇವೆಯನ್ನು ಆಧರಿಸಿ ಸರ್ಕಾರದ ಪೂರ್ವಾನುಮತಿಯೊಡನೆ ಮತ್ತೊಂದು ವರ್ಷದ ಅವಧಿಗೆ ಮುಂದುವರೆಸಬಹುದಾಗಿರುತ್ತದೆ. ಯಾವುದೇ ಕಾರಣಕ್ಕಾಗಲಿ ಅಭ್ಯರ್ಥಿಯನ್ನು ಖಾಯಂಗೊಳಿಸಲಾಗುವುದಿಲ್ಲ.

English summary
Applications have been invited to appoint the required accounting consultant at the office of Koppal Deputy Commissioner office.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia