ಏಮ್ಸ್ ನಲ್ಲಿ 1154 ಹುದ್ದೆಗಳ ಭರ್ಜರಿ ನೇಮಕಾತಿ

Posted By:

ಉತ್ತರಖಾಂಡದ ರಿಶಿಕೇಷ್ ನ ಏಮ್ಸ್ ನಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್ ಮತ್ತು ಸ್ಟಾಫ್ ನರ್ಸ್ಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

28 ನರ್ಸಿಂಗ್ ಸೂಪರಿಂಟೆಂಡೆಂಟ್ ಮತ್ತು 1126 ಸ್ಟಾಫ್ ನರ್ಸ್ ಸೇರಿ ಒಟ್ಟು1154 ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಜುಲೈ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ನರ್ಸಿಂಗ್ ಸೂಪರಿಂಟೆಂಡೆಂಟ್ -28 ಹುದ್ದೆಗಳು
ವೇತನ ಶ್ರೇಣಿ: ರೂ.15600-39100 +ಜಿಪಿ ರೂ.5400
ವಿದ್ಯಾರ್ಹತೆ: ಬಿಎಸ್ಸಿ/ಎಂಎಸ್ಸಿ (ನರ್ಸಿಂಗ್) ಪದವಿ ಮತ್ತು ಆರು ವರ್ಷಗಳ ಸೇವಾನುಭವ ಹೊಂದಿರಬೇಕು.
ವಯೋಮಿತಿ: 21ರಿಂದ 35 ವರ್ಷ

ಏಮ್ಸ್ ನಲ್ಲಿ ಭರ್ಜರಿ ನೇಮಕಾತಿ

ಸ್ಟಾಫ್ ನರ್ಸ್ -1126 ಹುದ್ದೆಗಳು
ವೇತನ ಶ್ರೇಣಿ: ರೂ.9300-34800 +ಜಿಪಿ ರೂ.4600
ವಿದ್ಯಾರ್ಹತೆ: ಬಿಎಸ್ಸಿ (ನರ್ಸಿಂಗ್) ಪದವಿ ಪಡೆದಿರಬೇಕು.
ವಯೋಮಿತಿ: 21ರಿಂದ 30 ವರ್ಷ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.3000/-
  • ಎಸ್.ಸಿ/ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.1000/-

ಪ್ರಮುಖ ದಿನಾಂಕ

ಜುಲೈ 31ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಯ್ಕೆ ವಿಧಾನ

ನೇರ ನೇಮಕಾತಿಯಾಗಿದ್ದು, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ www.aiimsrishikesh.edu.in ಗಮನಿಸಿ

English summary
Online Applications are invited in prescribed proforma from suitable candidate for filling up following Group ‘A’ & ‘B’ posts on DIRECT RECRUITMENT BASIS in All India Institute of Medical Sciences.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia