ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನೇಮಕಾತಿ 2020: 4 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು 4 ಪ್ರೊಫೆಸರ್ , ಹೆಡ್ ಪೇಟೆಂಟ್ ಸೆಲ್ , ಅಸಿಸ್ಟೆಂಟ್ ಆಡಿಟ್ ಆಫೀಸರ್ ಮತ್ತು ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್ಸೈಟ್ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಏಪ್ರಿಲ್ 27, 2020 ರ ಸಂಜೆ 5:30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನೇಮಕಾತಿ.. ಏ.27ರೊಳಗೆ ಅರ್ಜಿ ಹಾಕಿ

CRITERIA DETAILS
Name Of The Posts ಪ್ರೊಫೆಸರ್ , ಹೆಡ್ ಪೇಟೆಂಟ್ ಸೆಲ್ , ಅಸಿಸ್ಟೆಂಟ್ ಆಡಿಟ್ ಆಫೀಸರ್ ಮತ್ತು ಅಕೌಂಟೆಂಟ್
Organisation ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ
Educational Qualification ಎಂಬಿಬಿಎಸ್,ಎಂಎಸ್, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಪದವಿ
Job Location ಮೈಸೂರು (ಕರ್ನಾಟಕ)
Salary Scale ಹುದ್ದೆಗಳಿಗನುಸಾರ ವೇತನ
Application Start Date March 20, 2020
Application End Date April 27, 2020

ಶೈಕ್ಷಣಿಕ ವಿದ್ಯಾರ್ಹತೆ:

ಹುದ್ದೆಗಳಿಗನುಸಾರ ಎಂಬಿಬಿಎಸ್,ಎಂಎಸ್, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಪ್ರೊಫೆಸರ್ ಹುದ್ದೆಗಳಿಗೆ ಗರಿಷ್ಟ 50 ವರ್ಷ. ಹೆಡ್ ಪೇಟೆಂಟ್ ಸೆಲ್ ಹುದ್ದೆಗಳಿಗೆ ಗರಿಷ್ಟ 35 ವರ್ಷ, ಅಸಿಸ್ಟೆಂಟ್ ಆಡಿಟ್ ಆಫೀಸರ್ ಹುದ್ದೆಗಳಿಗೆ ಗರಿಷ್ಟ 30 ವರ್ಷ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಗರಿಷ್ಟ ೫೬56 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದವ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಓಬಿಸಿ,ಆರ್ಥಿಕವಾಗಿ ಹಿಂದುಳಿದ ಮತ್ತು ಓಬಿಸಿ ಅಭ್ಯರ್ಥಿಗಳು 100/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು. ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಅಧಿಕೃತ ವೆಬ್ಸೈಟ್ https://aiishmysore.in/en/ ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 27,2020 ರ ಸಂಜೆ 5:30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ಕಚೇರಿಯ ವಿಳಾಸ:
ಮುಖ್ಯ ಆಡಳಿತಾಧಿಕಾರಿ,

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ,

ಮಾನಸಗಂಗೋತ್ರಿ,

ಮೈಸೂರು-570006

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಪರಿಚಯ:

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಬಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿಯಲ್ಲಿ 1965 ರಲ್ಲಿ ಸ್ಥಾಪಿಸಲ್ಪಟ್ಟಿತು.ಇದು ಪೂರ್ಣ ಪ್ರಮಾಣದ ಅನುದಾನದಲ್ಲಿ ಪಡೆದಿದ್ದು ಸ್ವಯಂಶಾಸನವನ್ನು ಹೊಂದಿರುವ ಒಂದು ವಿಶೇಷ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ವೃತ್ತಿಪರ ತರಬೇತಿ ನೀಡುವುದು, ರೋಗಿಗಳಿಗೆ ಅವಶ್ಯ ಸೇವೆ ಒದಗಿಸುವುದು ಸಂಶೋಧನೆ ಮಾಡುವುದು ಹಾಗೂ ಸಫಲ ಸಂವಹನಕ್ಕೆ ತಡೆಯುಂಟು ಮಾಡುವ ತೊಂದರೆಗಳಾದ ಶ್ರವಣದೋಷ, ಬುದ್ಧಿಮಾಂದ್ಯತೆ, ಧ್ವನಿ, ತಡೆಯಿಲ್ಲದೆ ಮಾತನಾಡುವ ಮತ್ತು ಶಬ್ದಗಳು ಹಾಗೂ ಭಾಷೆಯ ಬಗ್ಗೆ ಜನರಲ್ಲಿ ಅರಿವುಂಟು ಮಾಡಿಸುವುದಾಗಿದೆ.
ಈ ಸಂಸ್ಥೆಯು 1965 ರಲ್ಲಿ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯಿಂದ ಪ್ರಾರಂಭಿಸಲ್ಪಟ್ಟು ಈಗ ವಿಸ್ತರಣೆಗೊಂಡಿದ್ದು ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ.

ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು - ಈ ಸಂಸ್ಥೆಯು ಏಷ್ಯಾ ಉಪಖಂಡದಲ್ಲೇ ಒಂದು ಸರಿಸಾಟಿ ಇಲ್ಲದ ಸಂಸ್ಥೆ.ಇಲ್ಲಿ 11 ಪ್ರತ್ಯೇಕ ವಿಭಾಗಗಳಿದ್ದು, ಸುಸಜ್ಜಿತವಾದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸುಶಿಕ್ಷಣವನ್ನು ನೀಡಲು ಬೇಕಾದ ಸಲಕರಣೆಗಳನ್ನು ಪ್ರತಿ ಪ್ರತ್ಯೇಕ ವಿಭಾಗಗಳಿಗೂ ಹೊಂದಿವೆ.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಸಂವಹನ ನ್ಯೂನತೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಯಸ್ಸಿನ ತನ್ನ ಕಕ್ಷಿದಾರರ ಅಗತ್ಯೆಗಳಿಗೆ ಸ್ಪಂದಿಸುತ್ತದೆ.ಈ ಸಂಸ್ಥೆಯು ಭಾರತದ ವಿವಿಧ ಭಾಗಗಳಿಂದ ಮತ್ತು ಪ್ರಪಂಚದ ಎಲ್ಲೆಡಗಳಿಂದ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.ಕಳೆದ 43 ವರ್ಷಗಳಲ್ಲಿ ಶ್ರವಣ ದೋಷ ಮತ್ತು ಮಾತಿನ ತೊಂದರೆಗಳ ರೋಗನಿವಾರಣಾ ತಂತ್ರಗಳು ಹಾಗೂ ಅವುಗಳ ವಿಶೇಷ ವಿದ್ಯಾಭ್ಯಾಸವನ್ನು ಕುರಿತಂತೆ ಇನ್ನೂ ಹೆಚ್ಚಾಗಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ.

ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಲು ಸಂಸ್ಥೆಗೆ ಇರುವ ಉತ್ಸಾಹಕ್ಕೆ ಯಾವ ಎಲ್ಲೆಯೂ ಇಲ್ಲ.ವಿಶ್ವ ಆರೋಗ್ಯ ಸಂಸ್ಥೆಯಿಂದ 'ಶ್ರವಣ ದೋಷದ ಕ್ಷೇತ್ರದಲ್ಲಿ ಬಹಳ ಅತ್ಯುತ್ತಮವಾದ ಕೇಂದ್ರ' ವೆಂದೂ, ಯು. ಜಿ. ಸಿ. ಯಿಂದ 'ಮುಂದುವರಿದ ಸಂಶೋಧನಾ ಕೇಂದ್ರ'ವೆಂದೂ ಮತ್ತು ಡಿ.ಎಸ್.ಟಿ ಯಿಂದ 'ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ' ಎಂದೂ ಗುರುತಿಸಪಟ್ಟಿದೆ.ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು, ಈ ಸಂಸ್ಥೆಯನ್ನು ಶ್ರವಣದೋಷವನ್ನು ತಡೆಗಟ್ಟಲು ಮತ್ತು ನಿಯಂತ್ರಣದಲ್ಲಿಡುವ ರಾಷ್ಟ್ರೀಯ ಕಾರ್ಯಕ್ರಮದ ಕೇಂದ್ರಸ್ಥಾನವೆಂದು ಹಾಗೂ ಈ ದಿಸೆಯಲ್ಲಿ ಕೆಲಸ ಮಾಡಲು ಬೇಕಾಗುವಂತಹ ನುರಿತ ಪರಿಣಿತರನ್ನು ಒದಗಿಸುವ ಕೇಂದ್ರ ಎಂದು ಗುರುತಿಸಲ್ಪಟ್ಟಿದೆ.

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
AIISH mysore recruitment 2020 notification has been released on official website for the recruitment of 4 various posts. Interested candidates can apply before 27th April 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X