ಏರ್ ಇಂಡಿಯಾ: 27 ವಿವಿಧ ಹುದ್ದೆಗಳ ನೇಮಕಾತಿ

Posted By:

ಏರ್ ಇಂಡಿಯಾ ಲಿಮಿಟೆಡ್ ನ ಏರ್ ಲೈನ್ ಅಲೈಡ್ ಸರ್ವಿಸಸ್ ಲಿ.,ನಲ್ಲಿ ಖಾಲಿ ಇರುವ 27 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಏರ್ ಇಂಡಿಯಾ ನೇಮಕಾತಿ

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅರ್ಜಿ ಶುಲ್ಕದ ಡಿ.ಡಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ನಿಗದಿತ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.1500/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿಗಳು ಕಚೇರಿ ತಲುಪಬೇಕಾದ ಕೊನೆಯ ದಿನಾಂಕ: 24-10-2017

ಹುದ್ದೆಗಳ ವಿವರ

ಹುದ್ದೆಯ ಹೆಸರುಹುದ್ದೆ ಸಂಖ್ಯೆವಯೋಮಿತಿ
ಡೆಪ್ಯುಟಿ ಚೀಫ್ ಫೈನಾನ್ಷಿಯಲ್ ಆಫೀಸರ್01
45
ಚೀಫ್ ಪರ್ಸನಲ್ 01
45
ಸಿಂಥೆಟಿಕ್ ಫ್ಲೈಟ್ ಇನ್ಸ್ ಟ್ರಕ್ಟರ್ 03
70
ಮ್ಯಾನೇಜರ್ ಕಾರ್ಗೊ 01
40
ಮ್ಯಾನೇಜರ್ ಸೇಲ್ಸ್ ಅಂಡ್ ಮಾರ್ಕೆಟಿಂಗ್ 01
40
ಮ್ಯಾನೇಜರ್ ಎಂಎಂಡಿ 01
40
ಮ್ಯಾನೇಜರ್ ಸೆಕ್ಯುರಿಟಿ 01
40
ಇನ್ಸ್ ಟ್ರಕ್ಟರ್ (ಟೆಕ್ನಿಕಲ್) 02
50
ಅಸಿಸ್ಟೆಂಟ್ ಮ್ಯಾನೇಜರ್ (ಎಚ್ ಆರ್) 01
35
ಮ್ಯಾನೇಜರ್ ಕಾರ್ಪೊರೇಟರ್ ಕಮ್ಯುನಿಕೇಷನ್ 01
40
ಸ್ಟೇಷನ್ ಮ್ಯಾನೇಜರ್14
40

ವಿದ್ಯರ್ಹತೆ

ಡೆಪ್ಯುಟಿ ಚೀಫ್ ಫೈನಾನ್ಷಿಯಲ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳು ಸಿಎ ಪೂರ್ಣಗೊಳಿಸಿರಬೇಕು.

ಕಾರ್ಪರೇಟ್ ಕಮ್ಯುನಿಕೇಷನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಟೆಕ್ನಿಕಲ್ ಇನ್ಸ್ ಟ್ರಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮುಗಿಸಿರಬೇಕು.

ಉಳಿದ ಹುದ್ದೆಗಳಿಗೆ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅಲೈಯನ್ಸ್ ಏರ್ ಪರ್ಸನಲ್ ಡಿಪಾರ್ಟ್ಮೆಂಟ್
ಅಲೈಯನ್ಸ್ ಭವನ
ಟರ್ಮಿನಲ್-1ಬಿ, ಐಜಿಐ ಏರ್ಪೋಟ್
ನವದೆಹಲಿ-110037

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Airline Allied Services Limited, a subsidiary of Air India Limited has invited the application for the recruitment of candidates for various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia