ಏರ್ಫೋರ್ಸ್ ಸ್ಕೂಲ್ ಯಲಹಂಕ: ಶಿಕ್ಷಕರ ನೇಮಕಾತಿ

Posted By:

ಯಲಹಂಕದ ಏರ್ಫೋರ್ಸ್ ಸ್ಕೂಲ್ ನಲ್ಲಿ ಖಾಲಿ ಇರುವ ಶಿಕ್ಷಕ ಮತ್ತು ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಹೊಂದಿದ ಪದವೀಧರರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 17ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಹುದ್ದೆಗಳ ವಿವರ

  • ಟ್ರೈನ್ಡ್ ಗ್ರಾಜ್ಯುಯೇಟ್ ಟೀಚರ್ (ಟಿಜಿಟಿ) ಸಮಾಜ ವಿಜ್ಞಾನ-1 ಹುದ್ದೆ
  • ನರ್ಸರಿ ಟ್ರೈನ್ಡ್ ಟೀಚರ್ಸ್ (ಎನ್ಟಿಟಿ)-03 ಹುದ್ದೆ
  • ಹೆಲ್ತ್ ವೆಲ್ನೆಸ್/ಕೌನ್ಸಲರ್-01 ಹುದ್ದೆ
  • ಅಕೌಂಟ್ಸ್ ಕ್ಲರ್ಕ್-01 ಹುದ್ದೆ

ಏರ್ಫೋರ್ಸ್ ಸ್ಕೂಲ್ ಶಿಕ್ಷಕರ ನೇಮಕಾತಿ

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಶಾಲಾ ವೆಬ್ಟೈಟ್ ಮೂಲಕ ಪಡೆದು ದೃಢೀಕರಿಸಿದ ಸೂಕ್ತ ದಾಖಲೆಗಳು ಮತ್ತು ಇತ್ಥೀಚಿನ ಭಾವಚಿತ್ರವನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ಕಛೇರಿಯ ವಿಳಾಸಕ್ಕೆ ಸಲ್ಲಿಸತಕ್ಕದ್ದು.

ಅಭ್ಯರ್ಥಿಗಳ ಅರ್ಹತೆ ಮತ್ತು ಇನ್ನಿತರ ಮಾಹಿತಿಗಳನ್ನು ಶಾಲಾ ವೆಬ್ಸೈಟ್ ಮತ್ತು ವೆಬ್ಸೈಟ್ ನಲ್ಲಿ ನೀಡಿರುವ ದೂರವಾಣಿ ಸಂಖ್ಯೆ ಮೂಲಕ ಪಡೆಯಬಹುದಾಗಿದೆ.

ಅರ್ಜ ಸಲ್ಲಿಸಬೇಕಾದ ವಿಳಾಸ

ಪ್ರಾಂಶುಪಾಲರು,
ಏರ್ಫೋರ್ಸ್ ಸ್ಕೂಲ್, ಯಲಹಂಕ,
ಬೆಂಗಳೂರು-560063
ಅಥವಾ
stu edn section,
C/o AF station Yelahanka, Bengaluru-56063

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 17-06-2017

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ಪ್ರತ್ಯೇಕವಾಗಿ ಕರೆಪತ್ರದ ಮೂಲಕ ತಿಳಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ವೆಬ್ಸೈಟ್ ವಿಳಾಸ www.airforceschoolyel.net ಭೇಟಿ ಮಾಡಿ.

ದೂರವಾಣಿ ಸಂಖ್ಯೆ: 080-28478067

ಯಲಹಂಕ ಏರ್ಫೋರ್ಸ್ ಸ್ಕೂಲ್

ಯಲಹಂಕದ ಏರ್ಫೋರ್ಸ್ ಶಾಲೆಯು ಕಳೆದ 45 ವರ್ಷಗಳಿಂದ ಶಿಕ್ಷಣ ನೀಡುತ್ತಿದೆ. 1970-71 ರಲ್ಲಿ ನರ್ಸರಿ ಶಾಲೆಯಾಗಿ ಆರಂಭಗೊಂಡ ಈ ಶಾಲೆ ನಂತರದ ದಿನಗಳಲ್ಲಿ ಪ್ರೌಢಶಾಲೆಯವರೆಗೂ ವಿಸ್ತರಿಸಿತು. ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುವವರ ಮಕ್ಕಳಿಗೆಂದೇ ಆರಂಭವಾದ ಈ ಶಾಲೆಯಲ್ಲಿ ಸಾಮಾನ್ಯ ಮಕ್ಕಳಿಗೂ ಪ್ರವೇಶಾತಿ ನೀಡಲಾಗುತ್ತಿದೆ.

English summary
airforce school yelahanka recruiting teachers, health wellness counselor and clerk. Eligible candidates can apply before June 17

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia