ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ಇದೀಗ ಬ್ರೇಕಿಂಗ್ ಸುದ್ದಿ ನೀಡಿದೆ. 100,000ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆಜಾನ್ ಮುಂದಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಮಾರಾಟದ ಬೇಡಿಕೆ ಹೆಚ್ಚಾಗಿದೆ ಮತ್ತು ಜನರು ಕೊರೋನಾ ಹೆಚ್ಚುತ್ತಿರುವ ಕಾರಣಕ್ಕಾಗಿ ಶಾಪಿಂಗ್ ಎಂದು ಅಲೆಯದೆ ಆನ್‌ಲೈನ್ ಮೂಲಕ ವ್ಯವಹಾರ ಮತ್ತು ಶಾಪಿಂಗ್ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಅಮೆಜಾನ್ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಹೊಸದಾಗಿ ಅರೆಕಾಲಿಕ ಮತ್ತು ಪೂರ್ಣ ಕಾಲಿಕ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದ್ದು, ವಸ್ತುಗಳನ್ನು ಪ್ಯಾಕ್ ಮಾಡಲು, ಸಾಗಿಸಲು ಅಥವಾ ವಿಂಗಡಿಸಲು ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಕಂಪೆನಿ ಇಂದು ತಿಳಿಸಿದೆ. ಈ ನೇಮಕಾತಿಗಳು ರಜಾದಿನದ ನೇಮಕಕ್ಕೆ ಸಂಬಂಧಿಸಿದಲ್ಲ ಎಂದು ಹೇಳಿದೆ.
ಈ ಹಿಂದೆ 1,75,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿತ್ತು. ಕಳೆದ ವಾರ ಕಂಪನಿಯು 33,000 ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳ ನೇಮಕಕ್ಕೆ ಸೂಚನೆ ನೀಡಿದೆ. ಕಳೆದ ವರ್ಷ ಕಂಪನಿಯು ರಜಾ ದಿನಗಳಿಗೆ ಮುಂಚಿತವಾಗಿ 2,00,000 ಜನರನ್ನು ನೇಮಕ ಮಾಡಿತ್ತು.