550 ಪಶು ವೈದ್ಯಾಧಿಕಾರಿಗಳ ನೇಮಕಾತಿ

ಪಶುಪಾಲನೆ ಮತ್ತು ಪಶು ಸೇವಾ ವೈದ್ಯ ಇಲಾಖೆಯಲ್ಲಿ ಖಾಲಿಯಿರುವ 450 ಹುದ್ದೆ ಮತ್ತು 100 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪಶುಪಾಲನೆ ಮತ್ತು ಪಶು ಸೇವಾ ವೈದ್ಯ ಇಲಾಖೆಯಲ್ಲಿ ಖಾಲಿಯಿರುವ 450 ಹುದ್ದೆ ಮತ್ತು 100 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ಪಶುವೈದ್ಯಾಧಿಕಾರಿ
ಒಟ್ಟು ಹುದ್ದೆ-550
ವೇತನ- 28100-50100 /-

ಪಶು ವೈದ್ಯಾಧಿಕಾರಿಗಳ ನೇಮಕಾತಿ

ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ 05 -04 -2017 ರ ಒಳಗಾಗಿ ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲಾದ ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ/ ಬಿ.ವಿ.ಎಸ್.ಸಿ ಮತ್ತು ಹೆಚ್ ಪದವಿಯನ್ನು ಪಡೆದಕೊಂಡಿರಬೇಕು.

ವಯೋಮಿತಿ

ಅಭ್ಯರ್ಥಿಗಳಿಂದ ಪೂರ್ಣಗೊಳಿಸಿದ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಅಂತಿಮ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಪ್ರಕ್ರಿಯೆ

ಅರ್ಜಿ ನಮೂನೆಯನ್ನು ನಿಗದಿಪಡಿಸಿರುವ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಕೇಳಿರುವ ದಾಖಲೆಗಳನ್ನು ಲಗತ್ತಿಸಿ ಕಳುಹಿಸತಕ್ಕದ್ದು.

ಸಲ್ಲಿಸಬೇಕಾದ ದಾಖಲೆಗಳು

  • ಬಿ.ವಿ.ಎಸ್ ಸಿ/ ಬಿ.ವಿ.ಎಸ್.ಸಿ ಅಂಡ್ ಹೆಚ್ ಪದವಿಯ ಎಲ್ಲಾ ವರ್ಷಗಳ (ಸೆಮಿಸ್ಟರ್) ಅಂಕಪಟ್ಟಿಗಳು ಮತ್ತು ಪ್ರಾವಿಷನಲ್ ಡಿಗ್ರಿ ಪ್ರಮಾಣ ಪತ್ರ.
  • ಸಂಬಂಧಪಟ್ಟ ವಿಶ್ವವಿದ್ಯಾಲಯ ನೀಡುವ ತ್ರೈಮಾಸಿಕ ಪದ್ಧತಿಯ ಅಂಕಪಟ್ಟಿಯ ಪರಿವರ್ತಿಕ ಕೋಷ್ಟಕ ಪ್ರಮಾಣ ಪತ್ರ.
  • ಚಾಲ್ತಿಯಲ್ಲಿರುವ ಪಶು ವೈದ್ಯಕೀಯ ಪರಿಷತ್ತಿನ ನೋಂದವಣಿ ಪ್ರಮಾಣ ಪತ್ರ.
  • ಘಟಿಕೋತ್ಸವ ಪ್ರಮಾಣ ಪತ್ರ(ಪಡೆದಿದ್ದರೆ)
  • ಜನ್ಮ ದಿನಾಂಕ ನಮೂದಿಸಿರುವ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ಅಥವಾ ತತ್ಸಮಾನ ಪ್ರಮಾಣ ಪತ್ರ/ವರ್ಗಾವಣೆ ಪ್ರಮಾಣ ಪತ್ರ/ಕ್ಯುಮಿಲೇಟಿವ್ ರೆಕಾರ್ಡ್ ನ ಪ್ರಮಾಣಿಕೃತ ಉಧೃತ ಭಾಗ

ಅರ್ಜಿ ಶುಲ್ಕ

ಅರ್ಜಿಯೊಂದಿಗೆ " ಜಂಟಿ ನಿರ್ದೇಶಕರು (ಆಡಳಿತ) ಪದನಿಮಿತ್ತ ಸದಸ್ಯ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ನಿರ್ದೇಶನಾಲಯ, ಬೆಂಗಳೂರು ರವರ ಹೆಸರಿಗೆ ಪಡೆದ ರೂ.500 /- ರ ಡಿಡಿ (ಪ.ಜಾ/ಪ.ಪಂ/ಪ್ರ-1 ಹಾಗೂ ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ).
ಉಳಿದ ಅಭ್ಯರ್ಥಿಗಳು ಕ್ರಾಸ್ ಮಾಡಿದ ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು ರಾಷ್ಟ್ರೀಕೃತ ಬ್ಯಾಂಕ್ ನಿಂದ ಪಡೆದ ಡಿ.ಡಿಮೂಲಕ ನಿಗದಿತ ಶುಲ್ಕವನ್ನು ಸಂದಾಯ ಮಾಡತಕ್ಕದ್ದು.

ಸೂಚನೆ

  • ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ಗುಣ ಮತ್ತು ನಡತೆ ಪ್ರಮಾಣ ಪತ್ರಗಳು ದ್ವಿಪ್ರತಿಯಲ್ಲಿ ಒದಗಿಸುವುದು.
  • ಅರ್ಜಿಯಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಭಾವ ಚಿತ್ರಗಳನ್ನು ಅಂಟಿಸುವುದು.
  • 2015 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಯನ್ನು ಇದೇ ನೇಮಕಾತಿಗೆ ಪರಿಗಣಿಸಲಾಗುವುದು.

ಅರ್ಜಿ ಕಳುಹಿಸಬೇಕಾದ ವಿಳಾಸ

ಸದಸ್ಯ ಕಾರ್ಯದರ್ಶಿಗಳು ಇಲಾಖಾ ಆಯ್ಕೆ ಸಮೀತಿ, ಪರಿಶೀಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಆಯುಕ್ತರವರ ಕಾರ್ಯಾಲಯ 2ನೇ ಮಹಡಿ, ಸರ್ ಎಂ ವಿಶ್ವೇಶ್ವರಯ್ಯ ಚಿಕ್ಕಗೋಪುರ ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಒಳಗೊಂಡ ಲಕೋಟೆಯ ಮೇಲೆ ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಎಂದು ದಪ್ಪ ಅಕ್ಷರಗಳಲ್ಲಿ ಬರೆಯತಕ್ಕದ್ದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 -04 -2017
ಹೆಚ್ಚಿನ ಮಾಹಿತಿಗಾಗಿ www.ahvs.kar.nic.in

For Quick Alerts
ALLOW NOTIFICATIONS  
For Daily Alerts

English summary
Application invited for recruitement of 550 posts of veterinary officers
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X