ಪತ್ರಿಕೋದ್ಯಮ ಪದವೀಧರರಿಗೆ ನಿರೂಪಣಾ ಕೌಶಲ್ಯ ವ್ಯಕ್ತಿ ವಿಕಸನ ತರಬೇತಿ

Posted By:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2017-18 ಸಾಲಿನ ನಿರೂಪಣಾ ಕೌಶಲ್ಯ ವ್ಯಕ್ತಿ ವಿಕಸನ ತರಬೇತಿಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಪದವಿ ಸ್ನಾತಕೋತ್ತರ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪದವಿ/ಪಿಜಿ ಡಿಪ್ಲೊಮಾ /ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆರು ದಿವಸಗಳ ವೃತ್ತಿ, ನಿರೂಪಣಾ ಕೌಶಲ್ಯತೆಗಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ತರಬೇತಿ ಶಿಬಿರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಲಾಗುತ್ತದೆ.

ಪತ್ರಿಕೋದ್ಯಮ ಪದವೀಧರರಿಗೆ ತರಬೇತಿ

ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು. ಇಲ್ಲವೆ ಇಲಾಖೆಯ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿಯಲ್ಲಿ ಸೂಚಿಸಿರುವ ಎಲ್ಲ ಮಾಹಿತಿಗಳಿಗೆ ಅಧಿಕೃತ ಪೂರಕ ದಾಖಲಾತಿಗಳ ಸ್ವಯಂ ಧೃಢೀಕೃತ ಪ್ರತಿಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.

ಆಯ್ಕೆ ಪ್ರಕ್ರಿಯೆ

ಮೆರಿಟ್ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು karnatakainformation.gov.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು - 560 001, ಈ ವಿಳಾಸಕ್ಕೆ ಅರ್ಜಿಗಳನ್ನು ಅಂಚೆ ಮೂಲಕ ಕಳುಹಿಸುವುದು. ಅರ್ಜಿಯೊಂದಿಗೆ ಸ್ವಯಂ ವಿಳಾಸವುಳ್ಳ ಎರಡು ಲಕೋಟೆಯನ್ನು ಲಗತ್ತಿಸುವುದು.

ಸೂಚನೆ

  • ಪದವಿ ಪೂರ್ಣಗೊಳಿಸಿರುವ ಆಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವವರ ವಯೋಮಿತಿ 40 ನ್ನು ಮೀರಿರಬಾರದು.
  • ಗೊತ್ತುಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು
  • ಅರ್ಜಿಯ ಲಕೋಟೆ ಮೇಲೆ ಕಡ್ಡಾಯವಾಗಿ "ವೃತ್ತಿ / ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ" ಎಂದು ನಮೂದಿಸಬೇಕು.
  • ಸರ್ಕಾರದಿಂದ ಯಾವುದೇ ರೀತಿಯ ತರಬೇತಿ ಅಥವಾ ಇತರೆ ಸೌಲಭ್ಯಗಳನ್ನು ಪಡೆದಿರುವವರು ಅರ್ಜಿಯನ್ನು ಸಲ್ಲಿಸಬಾರದು.
  • ಸರ್ಕಾರದಿಂದ ಸೌಲಭ್ಯ ಪಡೆದ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದಲ್ಲಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
  • ತರಬೇತಿ ಪ್ರಾರಂಭವಾದ ಮೊದಲನೇ ದಿನ ತರಬೇತಿಗೆ ಹಾಜರಾಗದಿದ್ದರೆ ಅಂತಹ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ.

ಹೆಚ್ಚಿನ ವಿವರಗಳಿಗೆ ದೂರವಾಣಿ -080-22028037/ 87 ನ್ನು ಸಂಪರ್ಕಿಸಬಹುದು.

English summary
Department of information and public relations invited applications from journalism graduates for personality development and presentation skills.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia