ಕೆಪಿಎಸ್‌ಸಿ ಜೂನಿಯರ್ ಟ್ರೈನಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

Written By: Rajatha

ಕರ್ನಾಟಕ ಲೋಕ ಸೇವಾ ಆಯೋಗ 2018ರ ಸಾಲಿನ ಖಾಲಿ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 1520 ಜೂನಿಯರ್ ಟ್ರೈನಿಂಗ್ ಆಫೀಸರ್ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 20, 2018ರ ಒಳಗೆ ಅರ್ಜಿ ಸಲ್ಲಿಸಬಹುದು.

ಕಮೀಷನ್ ಕರ್ನಾಟಕ ಲೋಕ ಸೇವಾ ಆಯೋಗ
 ಹುದ್ದೆ ಜೂನಿಯರ್ ಟ್ರೈನಿಂಗ್ ಆಫೀಸರ್
 ಖಾಲಿ ಹುದ್ 1520
 ಸೇವೆ ನಿರ್ವಹಿಸಬೇಕಾದ ಸ್ಥಳ ಕರ್ನಾಟಕ
 ಅರ್ಜಿ ಸಲ್ಲಿಸಲು ಕೊನೆ ದಿನಾಂಕ 20 ಮಾರ್ಚ್ 2018
 ವೇತನ ಶ್ರೇಣಿ 17,650ರೂ. -32,000ರೂ.
 ವಿದ್ಯಾರ್ಹತೆ  ಎಸ್‌ಎಸ್‌ಎಲ್‌ಸಿ ಜೊತೆಗೆ ಸಂಬಂಧಿಸಿದ ವಿಷ್ಯಗಳಲ್ಲಿ ಡಿಪ್ಲೋಮಾ ಮಾಡಿರಬೇಕು.
 ವಯೋಮಿತಿ 18-35 ವರ್ಷ ( 20೦.03.2018 ಕ್ಕೆ ಅನ್ವಯವಾಗುವಂತೆ)

ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಸ್ಟೆಪ್ 1

ಮೊದಲಿಗೆ ಕರ್ನಾಟಕ ಲೋಕ ಸೇವಾ ಆಯೋಗದ ಅಧೀಕೃತ ವೆಬ್‌ಸೈಟ್‌ನ್ನು ಕ್ಲಿಕ್ ಮಾಡಿ. ಅದರಲ್ಲಿ ನೇಮಕಾತಿಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.

ಸ್ಟೆಪ್ 2

ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ. ಅದೇ ಪೇಜ್‌ನ ಕೆಳಗೆ ಕೊಟ್ಟಿರುವ ಎಲ್ಲಾ ಸೂಚನೆಯನ್ನು ನಾನು ಓದಿದ್ದೇನೆ ಎನ್ನುವ ಆಪ್ಷನ್ ಬರುತ್ತದೆ ಅದನ್ನ ಕ್ಲಿಕ್ ಮಾಡಿ ನ್ಯೂ ರಿಜಿಸ್ಟೇಶನ್ ಆಪ್ಷನ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಹೊಸ ನೊಂದಣಿದಾರರಿಗೆ ಫಾರ್ಮ್ ಕಾಣಿಸುತ್ತದೆ ಅದರಲ್ಲಿ ಕೇಳಲಾಗಿರುವ ಎಲ್ಲಾ ಪ್ರಶ್ನೆಗೆ ಸರಿಯಾಗಿ ಭರ್ತಿ ಮಾಡಬೇಕು.

ಸ್ಟೆಪ್ 4

ಎಲ್ಲವನ್ನು ಭರ್ತಿ ಮಾಡಿದ ನಂತರ ಕೊನೆಗೆ ಸೆಕ್ಯೂರಿಟಿ ಕೋಡ್ ಒಂದನ್ನು ಕೇಳುತ್ತದೆ. ಅಲ್ಲಿ ಕೊಟ್ಟಿರುವ ಕೋಡ್‌ನ್ನು ಸರಿಯಾಗಿ ನಮೂದಿಸಿ.

ಸ್ಟೆಪ್ 5

ಅಭ್ಯರ್ಥಿಯ ಘೋಷಣೆ ಎನ್ನುವ ಆಪ್ಷನ್ ಕಾಣಿಸುತ್ತದೆ ಅದರಲ್ಲಿ ಕೊಟ್ಟಿರುವುದನ್ನೆಲ್ಲಾ ಓದಿ. ನಾನು ಒಪ್ಪುತ್ತೇನೆ ಎನ್ನುವ ಆಪ್ಷನ್‌ನ್ನು ಕ್ಲಿಕ್ ಮಾಡಿ . ನಂತರ ಅದರ ಕೆಳಗೆ ಸಬ್‌ಮಿಟ್ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ.

 

 

English summary
There is 1520 vacancies for Junior Training Officer in KPSC. Job seekers can apply before march 20th2018. for more information go through official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia