ಬಿ.ಇ/ಡಿಪ್ಲೊಮಾ/ಐಟಿಐ ಆದವರಿಗೆ ಅಪ್ರೆಂಟಿಸ್ ತರಬೇತಿ

Posted By:

ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ವಿದ್ಯುದಾಗಾರ/ಕಚೇರಿಗಳಲ್ಲಿ ಶಿಶಿಕ್ಷುಗಳನ್ನು ತರಬೇತಿಗೆ ನಿಯೋಜಿಸಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿ.ಇ, ಡಿಪ್ಲೊಮಾ, ಐಟಿಟಿ ಸೇರಿದಂತೆ ಒಟ್ಟು 32 ಹುದ್ದೆಗಳನ್ನು ಒಂದು ವರ್ಷದ ಅಪ್ರೆಂಟಿಸ್ ತರಬೇತಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

 ಅಪ್ರೆಂಟಿಸ್ ತರಬೇತಿ

ಆಯ್ಕೆಯಾದ ಶಿಶಿಕ್ಷುಗಳಿಗೆ ಮಾಸಿಕ ಸ್ಟೈಪೆಂಡ್ ಕೂಡ ನೀಡಲಾಗುವುದು.

ಸ್ಟೈಪಂಡ್ ವಿವರ

  • ಪದವೀಧರ ಶಿಶಿಕ್ಷುಗಳಿಗೆ ರೂ.7000/-
  • ಡಿಪ್ಲೊಮಾ ಶಿಶಿಕ್ಷುಗಳಿಗೆ ರೂ.5000/-
  • ಐಟಿಐ ಶಿಶಿಕ್ಷುಗಳಿಗೆ ರೂ. 10.000/- ಮತ್ತು ಎಸ್ ಎಸ್ ಎಲ್ ಸಿ ಶಿಶಿಕ್ಷುಗಳಿಗೆ ಮನೆ ಅವಶ್ಯಕತೆಯಿದ್ದಲ್ಲಿ ಜಂಟಿಯಾಗಿ ವಿತರಿಸಿ ಬಾಡಿಗೆಯನ್ನು ಕಡಿತಗೊಳಿಸಲಾಗುವುದು.

ಶಿಶಿಕ್ಷು ಹುದ್ದೆಗಳ ವಿವರ

ಬಿ.ಇ/ಡಿಪ್ಲೊಮಾ ಶಿಶಿಕ್ಷು ಹುದ್ದೆಗಳುಸೀಟುಗಳು
ಬಿ.ಇ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್)04
ಬಿ.ಇ (ಮೆಕ್ಯಾನಿಕಲ್)02
ಬಿ.ಇ (ಕಂಪ್ಯೂಟರ್ ಸೈನ್ಸ್)01
ಡಿಪ್ಲೊಮಾ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್)02
ಡಿಪ್ಲೊಮಾ (ಮೆಕ್ಯಾನಿಕಲ್)01
ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್)01
ಡಿಪ್ಲೊಮಾ (ಕಮರ್ಷಿಯಲ್ ಪ್ರಾಕ್ಟಿಸ್)
01
ಒಟ್ಟು 13
ಐಟಿಐ ಶಿಶಿಕ್ಷು ಹುದ್ದೆಗಳುಸೀಟುಗಳು
ಪ್ರೋಗ್ರಾಮಿಂಗ್ ಅಂಡ್ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್04
ಎಲೆಕ್ಟ್ರಿಷಿಯನ್04
ಎ ಸಿ ಎಲೆಕ್ಟ್ರಿಷಿಯನ್01
ಫಿಟ್ಟರ್03
ವೆಲ್ಡರ್03
ಡೀಸಲ್ ಮೆಕ್ಯಾನಿಕ್01
ಕಾರ್ಪೆಂಟರ್02
ಹೌಸ್ ಕೀಪರ್ (ಕಾರ್ಪೊರೇಟ್)01
ಒಟ್ಟು19

ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳು ಮತ್ತೊಮ್ಮೆ ತರಬೇತಿಗೆ ನಿಯೋಜಿಸಲು ಅವಕಾಶವಿರುವುದಿಲ್ಲ. ತರಬೇತಿ ನಂತರ ಶಿಶಿಕ್ಷುಗಳನ್ನು ಬಿಡುಗಡೆಗೊಳಿಸಲಾಗುವುದು.

ತರಬೇತಿಗೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು.

ಬಿ.ಇ/ಡಿಪ್ಲೊಮಾ ಅಭ್ಯರ್ಥಿಗಳು www.mhrdnats.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.
ಐಟಿಐ/ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳು www.apprenticeship.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.

ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಂಡ ನಂತರ ಅದರ ಪ್ರಿಂಟ್ ತೆಗೆದು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಹೆಚ್.ಆರ್.ಡಿ)
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ,
ವರಾಹಿ ಜಲವಿದ್ಯುತ್ ಯೋಜನೆ ಹೊಸಂಗಡಿ
ಕುಂದಾಪುರ ತಾಲ್ಲೂಕು, ಉಡುಪಿ-56285

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2017

English summary
Applicants are invited to train at the Varahi Hydroelectric Planning Area / Offices for apprentice training and qualified candidates are invited.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia