ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಪ್ರೆಂಟಿಸ್ ಶಿಪ್ ತರಬೇತಿ

Posted By:

ಕರ್ನಾಟಕ ವಿದ್ಯುತ್ ನಿಗಮದ ಕಛೇರಿಗಳಲ್ಲಿ ಐಟಿಐ ಮತ್ತು ಎಸ್ ಎಸ್ ಎಲ್ ಸಿ ಆದವರಿಗೆ ಅಪ್ರೆಂಟಿಸ್ಶಿಪ್ ತರಬೇತಿಗೆ ನಿಯೋಜಿಸಲು ಅರ್ಜಿ ಆಹ್ವಾನಿಸಲಾಗಿದೆ.

ಶಿಶಿಕ್ಷು (ಅಪ್ರೆಂಟಿಸ್ಶಿಪ್) ತರಬೇತಿಗೆ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ದಿನಾಂಕ 31 -08 -2017 ರೊಳಗೆ ಕಚೇರಿ ವಿಳಾಸಕ್ಕೆ ತಲುಪಿಸಬೇಕಾತಿ ಸೂಚಿಸಲಾಗಿದೆ.

ಅಪ್ರೆಂಟಿಸ್ ಶಿಪ್ ತರಬೇತಿ

ತರಬೇತಿ ಅವಧಿಯಲ್ಲಿ ಐಟಿಐ ಶಿಶಿಕ್ಷುಗಳಿಗೆ ಪ್ರತಿ ತಿಂಗಳು ರೂ.10000/- ಮತ್ತು ಎಸ್ ಎಸ್ ಎಲ್ ಸಿ ಶಿಶಿಕ್ಷುಗಳಿಗೆ ರೂ.7000/- ಸ್ಟೈಫಂಡ್ ನೀಡಲಾಗುವುದು.

ಶಿಶಿಕ್ಷು ತರಬೇತಿ ವಿವರ

ಶಿಶಿಕ್ಷು ವೃತ್ತಿವಿದ್ಯಾರ್ಹತೆತರಬೇತಿ ಅವಧಿ
ಪ್ರೊಗ್ರಾಮಿಂಗ್ ಮತ್ತು ಸಿಸ್ಟಮ್ಸ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ಐಟಿಐ(ಕೋಪಾ)(NCVT)1 ವರ್ಷ
ಪ್ಲಂಬರ್ಎಸ್ ಎಸ್ ಎಲ್ ಸಿ ಮತ್ತು ಒಂದು ವರ್ಷದ ಕಾರ್ಯಾನುಭವದ ಪತ್ರ1 ವರ್ಷ
ಕಾರ್ಪೆಂಟರ್8 ನೇ ತರಗತಿ ಮತ್ತು ಒಂದು ವರ್ಷದ ಕಾರ್ಯಾನುಭವದ ಪತ್ರ1 ವರ್ಷ
ರೆಫ್ರಿಜೇಷನ್ ಮತ್ತು ಏರ್ ಕಂಡೀಷನಿಂಗ್ ಮೆಕಾನಿಕ್ಐಟಿಐ (ಎಂಆರ್ಎಸಿ) (NCVT)1 ವರ್ಷ
ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ಎಸ್ ಎಸ್ ಎಲ್ ಸಿ2 ವರ್ಷ
ಹೌಸ್ ಕೀಪರ್ (ಕಾರ್ಪೊರೇಟ್)ಎಸ್ ಎಸ್ ಎಲ್ ಸಿ1.5 ವರ್ಷ

ತರಬೇತಿಯ ನಂತರ ಶಿಶಿಕ್ಷುಗಳನ್ನು ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ನಿಗಮದ ಸೇವೆಯಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ.

ತರಬೇತಿಗೆ ಕನಿಷ್ಠ ವಯೋಮಿತಿ 14 ವರ್ಷಗಳು

ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸೂಕ್ತ ವಿವರಗಳೊಂದಿಗೆ ಕಛೇರಿಯ ವಿಳಾಸಕ್ಕೆ ತಲುಪಿಸುವುದು.

ಅರ್ಜಿಯಲ್ಲಿ ಲಗತ್ತಿಸಬೇಕಾದ ವಿವರಗಳು

  • ಅಭ್ಯರ್ಥಿ ಹೆಸರು/ವಿಳಾಸ/ಮೊಬೈಲ್ ಸಂಖ್ಯೆ
  • ಆಧಾರ್ ಕಾರ್ಡ್ ಪ್ರತಿ
  • ಎಸ್ ಎಸ್ ಎಲ್ ಸಿ/ಐಟಿಐ ಅಂಕಪಟ್ಟಿ
  • ಇ-ಮೇಲ್ ವಿಳಾಸ
  • ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ ಆಗಿದ್ದಲ್ಲಿ ಮಾತ್ರ)
  • ಶಿಶಿಕ್ಷು ವೃತ್ತಿ (ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿದ್ದಲ್ಲಿ ವಿವರಗಳು)

ಅರ್ಜಿ ತಲುಪಿಸಬೇಕಾದ ವಿಳಾಸ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ನಂ.82 , ಶಕ್ತಿ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2017 ಸಂಜೆ 5.00 ಗಂಟೆಯೊಳಗೆ

English summary
Karnataka power corporation has invited application from the eligible candidates for apprenticeship training.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia