ಆರ್ಮಿ ಸ್ಕೂಲ್‌: 8000 ಬೋಧಕ ಹುದ್ದೆಗಳ ನೇಮಕಾತಿ

2018-19ನೇ ಸಾಲಿಗೆ 8000 ಬೋಧಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಪೋಸ್ಟ್ ಗ್ಯಾಜುಯೇಟ್‌, ಗ್ರ್ಯಾಜುಯೇಟ್‌ ಮತ್ತು ಪ್ರೈಮರಿ ಟೀಚರ್‌ಗಳ ನೇಮಕಾತಿ ನಡೆಯಲಿದೆ.

ದೇಶದ 137 ಆರ್ಮಿ ಸ್ಕೂಲ್‌ಗಳಲ್ಲಿನ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

2018-19ನೇ ಸಾಲಿಗೆ 8000 ಬೋಧಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಪೋಸ್ಟ್ ಗ್ಯಾಜುಯೇಟ್‌, ಗ್ರ್ಯಾಜುಯೇಟ್‌ ಮತ್ತು ಪ್ರೈಮರಿ ಟೀಚರ್‌ಗಳ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 21 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

8000 ಬೋಧಕ ಹುದ್ದೆಗಳ ನೇಮಕಾತಿ

ವಿಷಯವಾರು ನೇಮಕಾತಿ

ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಹಿಸ್ಟರಿ, ಜಿಯಾಗ್ರಫಿ, ಎಕನಾಮಿಕ್ಸ್‌, ಪೊಲಿಟಿಕಲ್‌ ಸೈನ್ಸ್‌, ಮ್ಯಾಥ್ಸ್‌, ಫಿಸಿಕ್ಸ್‌, ಕೆಮಿಸ್ಟ್ರಿ, ಬಯಾಲಜಿ, ಬಯೋ ಟೆಕ್ನಾಲಜಿ, ಸೈಕಾಲಜಿ, ಕಾಮರ್ಸ್‌, ಕಂಪ್ಯೂಟರ್‌ ಸೈನ್ಸ್‌/ಇನ್‌ಫಾರ್ಮೇಟಿಕ್ಸ್‌, ಹೋಂ ಸೈನ್ಸ್‌ ಮತ್ತು ಫಿಸಿಕಲ್‌ ಎಜುಕೇಶನ್‌ ವಿಭಾಗಗಳಿಗೆ ಬೋಧಕರ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ

ಪಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಡ್‌ ಜೊತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಪಿಜಿಟಿ ಮತ್ತು ಪಿಆರ್‌ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಎಡ್‌ ಜೊತೆಗೆ ಆಯಾ ವಿಭಾಗಗಳಿಗೆ ಸಂಬಂಧ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ನಿಗದಿತ ವಿದ್ಯಾರ್ಹತೆ (ಪದವಿ/ಸ್ನಾತಕೋತ್ತರ) ಮತ್ತು ಬಿಎಡ್‌ ನಲ್ಲಿ ಅಭ್ಯರ್ಥಿಗಳು ಶೇಕಡಾ 50 ಅಂಕಗಳನ್ನು ಪಡೆದರೆ ಮಾತ್ರ ಅರ್ಜಿ ಸಲ್ಲಿಸುವ ಅರ್ಹತೆ ಇರುತ್ತದೆ.

ವಯೋಮಿತಿ

ಈಗಾಗಲೇ ಬೋಧಕರಾಗಿ ಕೆಲಸ ಮಾಡಿದ ಅನುಭವ ಇದ್ದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 57 ವರ್ಷ (ಐದು ವರ್ಷ ಬೋಧನಾನುಭವ ಇರಬೇಕು) ಮೀರಿರಬಾರದು. ಹೊಸದಾಗಿ ಅರ್ಜಿ ಸಲ್ಲಿಸುವ (ಫ್ರೆಶರ್ಸ್‌) ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಿ, ತಮ್ಮ ಪರೀಕ್ಷಾ ಕೇಂದ್ರಗಳನ್ನು ಅಲ್ಲೇ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಪರೀಕ್ಷಾ ವಿವರ

ಆನ್‌ಲೈನ್‌ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಪಿಜಿಟಿ ಮತ್ತು ಟಿಜಿಟಿ ಹುದ್ದೆಗಳಿಗೆ ಮೊದಲ ಹಂತದಲ್ಲಿ 90 ಅಂಕಗಳ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿರುತ್ತವೆ. ಜನರಲ್‌ ಅವೇರ್ನೆಸ್‌, ಮೆಂಟಲ್‌ ಎಬಿಲಿಟಿ, ಇಂಗ್ಲಿಷ್‌ ಕಾಂಪ್ರಹೆನ್ಷನ್‌, ಎಜುಕೇಶನಲ್‌ ಕಾನ್ಸೆಪ್ಟ್‌ ಮತ್ತು ಮೆಥಡಾಲಜಿ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿರುತ್ತವೆ.

ಎರಡನೇ ಹಂತದಲ್ಲಿ ಹುದ್ದೆಗೆ ಸಂಬಂಧಪಟ್ಟಂತೆ ಆಯಾ ವಿಭಾಗವಾರು ವಿಷಯಕ್ಕೆ ಅನುಗುಣವಾಗಿ ನಿರ್ದಿಷ್ಟ ಪತ್ರಿಕೆಗೆ ಸಂಬಂಧಿಸಿದ 90 ಅಂಕಗಳ ಪ್ರಶ್ನೆಗಳಿರುತ್ತವೆ.

ಇನ್ನು ಪಿಆರ್‌ಟಿ ಹುದ್ದೆಗಳಿಗೆ ಪಿಜಿಟಿ ಮತ್ತು ಟಿಜಿಟಿಗೆ ಮೊದಲ ಹಂತದಲ್ಲಿ ನೀಡಿರುವ ಪತ್ರಿಕಾ ವಿಷಯಗಳೇ ಇರುತ್ತವೆ.

ಪರೀಕ್ಷಾ ಶುಲ್ಕ: ರೂ.500/

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನ :ಡಿಸೆಂಬರ್‌ 21, 2017
  • ಪರೀಕ್ಷೆಯ ನಡೆಯುವ ಸಂಭಾವ್ಯ ದಿನ: ಜನವರಿ 15ರಿಂದ 17, 2018
  • ಪ್ರವೇಶಪತ್ರ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು: ಜನವರಿ 5, 2018
  • ಅಂತಿಮ ಫಲಿತಾಂಶ: ಜನವರಿ 27, 2018

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Army Public Schools (APS) located in various Cantonments and Military Stations across India invites online application from eligible candidates for the teacher post.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X