ARO Belgaum Army Recruitment Rally 2020-2021: ಬೆಳಗಾವಿ ವಲಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೆಳಗಾವಿ ವಲಯದ ಸೇನಾ ನೇಮಕಾತಿ ಕಚೇರಿಯಿಂದ ಭಾರತೀಯ ಸೇನೆಯಲ್ಲಿ ಸಿಪಾಯಿ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ರ್ಯಾಲಿ ನಡೆಸಲಾಗುತ್ತಿದೆ. ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

 
ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯಾ ? ಇಂದೇ ರಿಜಿಸ್ಟ್ರರ್ ಮಾಡಿ

ಭಾರತೀಯ ಸೇನೆ ನೇಮಕಾತಿಯ ರ್ಯಾಲಿಯು ಕರ್ನಾಟಕ ರಾಜ್ಯದ ಬೆಳಗಾವಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಫೆಬ್ರವರಿ 1 ರಿಂದ ಮಾರ್ಚ್ 31,2021ರ ವರೆಗೆ ನಡೆಯಲಿದೆ.

ವಿದ್ಯಾರ್ಹತೆ:

ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇ 45% ಅಂಕ. ಗ್ರೇಡ್ ಆಧಾರವಾದರೆ ಸಿ2 ಅಥವಾ ಡಿ ಗ್ರೇಡ್ ಪಡೆದುಕೊಂಡಿರಬೇಕು.

ವಯೋಮಿತಿ:

ಕನಿಷ್ಟ 17.5 ರಿಂದ ಗರಿಷ್ಟ 21 ವರ್ಷ (1998ರ ಅಕ್ಟೋಬರ್ 01ರಿಂದ ಏಪ್ರಿಲ್ 01, 2002ರೊಳಗೆ ಹುಟ್ಟಿದವರು) ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ:

ಎತ್ತರ: 177 ಸೆಂ.ಮೀ
ಎದೆ ಸುತ್ತಳತೆ: 77 ಸೆಂ.ಮೀ

ಅರ್ಜಿ ಸಲ್ಲಿಕೆ:

ರ್ಯಾಲಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಡಿಸೆಂಬರ್ 5,2020 ರಿಂದ ಜನವರಿ 18,2021ರೊಳಗೆ ರಿಜಿಸ್ಟರ್ ಮಾಡಿಕೊಳ್ಳಬಹುದು.

ಭಾರತೀಯ ಸೇನೆ ನೇಮಕಾತಿಗಾಗಿ ನಿಗದಿತ ದಿನದಂದು ನಡೆಯುವ ರ್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.joinindianarmy.nic.in/index.htm ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.

For Quick Alerts
ALLOW NOTIFICATIONS  
For Daily Alerts

English summary
ARO belgaum army recruitment rally 2020-21 notification has been released. Interested candidates can register through online before January 18.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X