ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ: 197 ಹುದ್ದೆಗಳಿಗೆ ಅವಕಾಶ

Posted By:

ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯು ಕೃಷಿ ಸಂಶೋಧನಾ ಸೇವೆ (ಎಆರ್‌ಎಸ್-ಅಗ್ರಿಕಲ್ಚರ್ ರಿಸರ್ಚ್ ಸರ್ವೀಸ್)-2017 ಹಾಗೂ ರಾಷ್ಟ್ರೀಯ ಮಾನ್ಯತಾ ಪರೀಕ್ಷೆ (ಎನ್ಇಟಿ)-2018 ನಡೆಸಲು ಮುಂದಾಗಿದೆ.

ಬೆಂಗಳೂರಿನ ಪೌರಾಡಳಿತ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ನೇಮಕಾತಿ

ಈ ಎರಡೂ ಪರೀಕ್ಷೆಗಳು ಕ್ರಮವಾಗಿ ಏಪ್ರಿಲ್ 6 (ಎಆರ್‌ಎಸ್ ಪೂರ್ವಭಾವಿ ಪರೀಕ್ಷೆ) ಹಾಗೂ ಏಪ್ರಿಲ್ 13 ರಂದು ದೇಶಾದ್ಯಂತ 23 ಕೇಂದ್ರಗಳಲ್ಲಿ ಆನ್-ಲೈನ್ ಮೂಲಕ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಫೆ.3 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

ಎಎಸ್ಆರ್‌ಬಿ ನೇಮಕಾತಿ

ವಿವಿಧ ವಿಭಾಗಗಳ ಒಟ್ಟು 197 ಹುದ್ದೆಗಳಿಗೆ ಅವಕಾಶವಿದ್ದು, ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

 

 

ಹುದ್ದೆ ಮತ್ತು ವೇತನ

ಎಆರ್‌ಎಸ್ ಪಾಸ್ ಆಗುವವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕರ್ತವ್ಯಕ್ಕೆ ನಿಯುಕ್ತಿಗೊಳ್ಳುತ್ತಾರೆ. ಎನ್ಇಟಿ ಪರೀಕ್ಷೆ ಪಾಸ್ ಆಗುವವರು ಸಹಾಯಕ ಪ್ರಾಧ್ಯಾಪಕ/ಬೋಧಕರಾಗಲು ಅರ್ಹತೆ ಪಡೆಯುತ್ತಾರೆ.

ವೇತನ ಶ್ರೇಣಿ: ರೂ.15600-39100/-+ 6000/-

ಅರ್ಹತೆ
ಎಆರ್ ಎಸ್ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಎನ್ಇಟಿ-ಕೃಷಿ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

 

ವಯೋಮಿತಿ ವಿವರ

ಎ ಆರ್ ಎಸ್ ಗೆ ಗರಿಷ್ಠ 32 ವರ್ಷ,
ಎನ್ಇಟಿ ಗೆ ಗರಿಷ್ಠ ವಯೋಮಿತಿ ಇರುವುದಿಲ್ಲ.

ಅರ್ಜಿ ಶುಲ್ಕ

ಎ ಆರ್ ಎಸ್

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇರಲಿದೆ.

ಎನ್ಇಟಿ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
  • ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ.250/-

ಅರ್ಜಿ ಸಲ್ಲಿಕೆ

ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 06-02-2018
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02-03-2018

ಆಯ್ಕೆ ಮತ್ತು ಪರೀಕ್ಷಾ ವಿಧಾನ

ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

English summary
The Agricultural Scientists Recruitment Board (ASRB) will hold a combined ARS-2017 (Preliminary) and NET (I)-2018 Examination during 06.04.2018 to 13.04.2018 in Online mode at 23 Centres across India in a staggered slot-wise examination format as per the Rules and Scheme of Examination indicated in this notification.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia