ತುಮಕೂರಿನ ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ

Posted By:

ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸರ್ಕಾರಿ ಅನುದಾನಕ್ಕೆ ಒಳಪಟ್ಟಿರುವ ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಕಿನಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳು ದಿನಾಂಕ 17-07-2017 ರೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ಕಾಲೇಜು ಕಛೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ.

ಹುದ್ದೆಗಳ ವಿವರ

ಹುದ್ದೆಯ ಹೆಸರು: ವಾಣಿಜ್ಯಶಾಸ್ತ್ರ ಉಪನ್ಯಾಸಕರು-01 ಹುದ್ದೆ
ವಿದ್ಯಾರ್ಹತೆ: ಸರ್ಕಾರಿ ನಿಯಮಾವಳಿಗಳ ಅನುಸಾರ ಎಂ.ಕಾಂ ನಲ್ಲಿ ಕನಿಷ್ಠ ೫೫% ಅಂಕಗಳು ಮತ್ತು ಎನ್ಇಟಿ/ಎಸ್ಎಲ್ಇಟಿ/ಪಿಹೆಚ್.ಡಿ(2009ರ ನಂತರ)ಇವುಗಳಲ್ಲಿ ಯಾವುದಾದರು ಒಂದರಲ್ಲಿ ತೇರ್ಗಡೆಯಾಗಿರಬೇಕು

ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ

ಹುದ್ದೆಯ ಹೆಸರು: ಅಟೆಂಡರ್-01 ಹುದ್ದೆ
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ತೇರ್ಗಡೆ

ಹುದ್ದೆಯ ಹೆಸರು: ಪರಿಚಾರಕರು-01 ಹುದ್ದೆ
ವಿದ್ಯಾರ್ಹತೆ: 8ನೇ ತರಗತಿ ತೇರ್ಗಡೆ

ಅರ್ಜಿ ಸಲ್ಲಿಕೆ

ಸ್ವವಿವರವುಳ್ಳ ಅರ್ಜಿಗಳನ್ನು ದಾಖಲಾತಿಗಳ ಸಮೇತ, ಕಾರ್ಯದರ್ಶಿಗಳು, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ಡಾ.ಹೆಚ್.ಎಂ ಗಂಗಾಧರಯ್ಯ ರಸ್ತೆ, ಸರಸ್ವತಿಪುರಂ, ತುಮಕೂರು-572105 ಇಲ್ಲಿಗೆ ದಿನಾಂಕ:17-07-2017 ರೊಳಗೆ ತಲುಪಿಸತಕ್ಕದ್ದು.

ಅರ್ಜಿ ಶುಲ್ಕ

ರೂ.250/- ಗಳ ಡಿ.ಡಿಯನ್ನು ಕಾರ್ಯದರ್ಶಿಗಳು, ಶ್ರೀ ಸಿದ್ಧಾರ್ಥ ವಿದ್ಯಾಸಂಸ್ಥೆ, ತುಮಕೂರು. ಇವರ ಹೆಸರಿಗೆ ತೆಗೆದು ಅರ್ಜಿಯ ಜೊತೆ ಲಗತ್ತಿಸಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ 40 ವರ್ಷಗಳು

ಸೂಚನೆ

ಅರ್ಜಿ ಸಲ್ಲಿಸುವವರು ಸಂಬಂಧಿಸಿದ ದಾಖಲೆಗಳ ಎಲ್ಲಾ ನಕಲುಗಳ ದ್ವಿಪ್ರತಿಗಳನ್ನ ಲಗತ್ತಿಸಬೇಕು. ಉಳಿದ ಎಲ್ಲಾ ರೀತಿಯ ಅರ್ಹತೆಗಳು ಕಾಲೇಜು ಶಿಕ್ಷಣ ಇಲಾಖೆ ಮತ್ತು ನಿಯಮಗಳಿಗೆ ಅನುಸಾರವಾಗಿರುತ್ತದೆ.

ಅರ್ಜಿಯ ಪ್ರತಿಗಳನ್ನು ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ, ಕಾಳಿದಾಸ ರಸ್ತೆ, ಗಾಂಧಿನಗರ, ಬೆಂಗಳೂರು-560009 ಇಲ್ಲಿಗೆ ಕಳುಹಿಸುವುದು.

ಮೇಲಿನ ಮೂರು ಹುದ್ದೆಗಳು ಎಸ್.ಸಿ ವರ್ಗಕ್ಕೆ ಮೀಸಲಿದ್ದು, ಈ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

ನೇಮಕಾತಿ ಅನುಮೋದನೆ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ನಿಯಮಗಳಿಗೆ ಒಳಪಟ್ಟಿರುತ್ತದೆ.

English summary
Sri Siddhartha education society invites applications from eligible candidates to fill the back log posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia