ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಉದ್ಯೋಗಾವಕಾಶ

Posted By:

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ಮ್ಯಾನೇಜರ್ ಹುದ್ದೆಗಳ ನೇಮಕಾತಿ ನಡೆಯಲಿದ್ದು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ಎಜಿಎಂ)
ಒಟ್ಟು ಹುದ್ದೆಗಳು: 3

ಬೆಂಗಳೂರು ಮೆಟ್ರೋ ನೇಮಕಾತಿ

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಕಾಂ ಅಥವಾ ಯಾವುದೇ ವಿಷಯದಲ್ಲಿ ಪದವಿ ಹೊಂದಿರುವುದರ ಜೊತೆಗೆ ಸಿ.ಎ ಅಥವಾ ಐಸಿಡಬ್ಲ್ಯುಎ ಪಡೆದಿಬೇಕು ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಕಾಂ ಅಥವಾ ಎಂಬಿಎ (ಪೂರ್ಣಕಾಲಿಕ) ಪದವಿ ಗಳಿಸಿರಬೇಕು.

ಅನುಭವ
ಎಂ.ಕಾಂ ಅಥವಾ ಎಂಬಿಎ ಸ್ನಾತಕೋತ್ತರ ಪದವಿಯೊಂದಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ 15 ವರ್ಷಗಳ ಸೇವಾನುಭವ ಇರಬೇಕು.

ವೇತನ: ತಿಂಗಳಿಗೆ ರೂ.50000/-
ಗುತ್ತಿಗೆ ಅವದಿ : ಮೂರು ವರ್ಷಗಳು (ನಿವೃತ್ತಿ ನೌಕರರಿಗೆ ಒಂದು ವರ್ಷ)

ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಅಂಚೆ ಮೂಲಕ ಕಳುಹಿಸತಕ್ಕದ್ದು. ಅರ್ಜಿಯ ಲಕೋಟೆ ಮೇಲೆ ದಪ್ಪಕ್ಷರದಲ್ಲಿ ಯಾವ ಹುದ್ದೆಗೆ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ಬರೆಯತಕ್ಕದ್ದು.

ಅಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನದ ಕರೆ ಪತ್ರ ನೀಡಲಾಗುವುದು
  • ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

ಅಂಚೆ ವಿಳಾಸ

General Manager (HR), Bangalore Metro Rail
Corporation Limited, III Floor, BMTC Complex, K.H.Road, Shanthinagar, Bangalore
560027

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-04-2017 ಸಂಜೆ 4:00 ಗಂಟೆ
ಹೆಚ್ಚಿನ ವಿವರಗಳಿಗಾಗಿ www.bmrc.co.in ವೆಬ್ಸೈಟ್ ವಿಳಾಸ ಗಮನಿಸಿ

ನಮ್ಮ ಮೆಟ್ರೋ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‍ಸಿಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ.

ಬೆಂಗಳೂರು ಮೆಟ್ರೋಗೆ "ನಮ್ಮ ಮೆಟ್ರೋ'' ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಉತ್ಸರ್ಜನಗಳ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ.

English summary
BMRCL invites applications from qualified and experienced personnel to work in the Finance & Accounts Division of the Company.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia