ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಆರು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ ಮೂಲಕ ಮಾರ್ಚ್ 31 ರೊಳಗಾಗಿ ಕಚೇರಿಯ ವಿಳಾಸಕ್ಕೆ ತಲುಪಿಸತಕ್ಕದ್ದು.

ಹುದ್ದೆಗಳ ವಿವರ

 • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್)-1 ಹುದ್ದೆ
 • ಮ್ಯಾನೇಜರ್ (ಮೆಟಿರಿಯಲ್ ಮ್ಯಾನೇಜ್ಮೆಂಟ್)-1 ಹುದ್ದೆ
 • ಅಧಿಕಾರಿ (ಮೆಟಿರಿಯಲ್ ಮ್ಯಾನೇಜ್ಮೆಂಟ್)-2 ಹುದ್ದೆಗಳು
 • ಅಧಿಕಾರಿ(ಫೈನಾನ್ಸ್ ಅಂಡ್ ಅಕೌಂಟ್ಸ್)-2 ಹುದ್ದೆಗಳು

ಮ್ಯಾನೇಜರ್ ಹುದ್ದೆಗಳ ನೇಮಕಾತಿ

  ವೇತನ

  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್)-ರೂ.15600-39100+7600
  • ಮ್ಯಾನೇಜರ್ (ಮೆಟಿರಿಯಲ್ ಮ್ಯಾನೇಜ್ಮೆಂಟ್)-ರೂ.15600-39100 +6600
  • ಅಧಿಕಾರಿ (ಮೆಟಿರಿಯಲ್ ಮ್ಯಾನೇಜ್ಮೆಂಟ್)-ರೂ.9300-34800 +4200
  • ಅಧಿಕಾರಿ(ಫೈನಾನ್ಸ್ ಅಂಡ್ ಅಕೌಂಟ್ಸ್)-ರೂ.9300-34800 +4200

  ವಯೋಮಿತಿ

  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್)- 50 ವರ್ಷಗಳು ಮೀರಿರಬಾರದು
  • ಮ್ಯಾನೇಜರ್ (ಮೆಟಿರಿಯಲ್ ಮ್ಯಾನೇಜ್ಮೆಂಟ್)- 35 ರಿಂದ 40 ವರ್ಷಗಳು
  • ಅಧಿಕಾರಿ (ಮೆಟಿರಿಯಲ್ ಮ್ಯಾನೇಜ್ಮೆಂಟ್)- 21 ರಿಂದ 30 ವರ್ಷಗಳು
  • ಅಧಿಕಾರಿ(ಫೈನಾನ್ಸ್ ಅಂಡ್ ಅಕೌಂಟ್ಸ್)- 21 ರಿಂದ 30 ವರ್ಷಗಳು

  ವಿದ್ಯಾರ್ಹತೆ

  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್) ಹುದ್ದೆಗೆ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಸಿಎ/ಐಸಿಡಬ್ಲ್ಯೂಎ ಅಥವಾ ಎಂಬಿಎ (ಫುಲ್-ಟೈಂ) ಅಥವಾ ಫೈನಾನ್ಸ್ ಪಿಜಿ ಡಿಪ್ಲೊಮಾ ಪದವಿಯನ್ನು ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
  • ಮ್ಯಾನೇಜರ್ (ಮೆಟಿರಿಯಲ್ ಮ್ಯಾನೇಜ್ಮೆಂಟ್)-ಹುದ್ದೆಗೆ ಅಭ್ಯರ್ಥಿಯು ಅಂಗೀಕೃತ ಶಿಕ್ಷಣ ಸಂಸ್ಥಯಿಂದ ಬಿಇ/ಬಿಟೆಕ್ (ಫುಲ್-ಟೈಂ) ಪದವಿಯನ್ನು ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. (ಮೆಕಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಕೆಮಿಕಲ್ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು)
  • ಅಧಿಕಾರಿ (ಮೆಟಿರಿಯಲ್ ಮ್ಯಾನೇಜ್ಮೆಂಟ್)-ಹುದ್ದೆಗೆ ಅಭ್ಯರ್ಥಿಯು ಅಂಗೀಕೃತ ಶಿಕ್ಷಣ ಸಂಸ್ಥಯಿಂದ ಬಿಇ/ಬಿಟೆಕ್ (ಫುಲ್-ಟೈಂ) ಪದವಿಯನ್ನು ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. (ಮೆಕಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಕೆಮಿಕಲ್ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು)
  • ಅಧಿಕಾರಿ(ಫೈನಾನ್ಸ್ ಅಂಡ್ ಅಕೌಂಟ್ಸ್)-ಹುದ್ದೆಗೆ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಸಿಎ/ಐಸಿಡಬ್ಲ್ಯೂಎ ಅಥವಾ ಎಂಬಿಎ (ಫುಲ್-ಟೈಂ) ಅಥವಾ ಫೈನಾನ್ಸ್ ಪಿಜಿ ಡಿಪ್ಲೊಮಾ ಪದವಿಯನ್ನು ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

  ಸೂಚನೆ

  • ವಯೋಮಿತಿ ಮತ್ತು ಇತರೆ ವಿಷಯಗಳಲ್ಲಿ ಮೀಸಲಾತಿಯನ್ನು ಸರ್ಕಾರಿ ನಿಯಮಗಳನುಸಾರ ನೀಡಲಾಗುತ್ತದೆ. 
  • ಒಬ್ಬ ಅಭ್ಯರ್ಥಿಯು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

  ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600 /-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100 /-
  • "BNPM Recruitment Account" ಮೈಸೂರು ಇವರಿಗೆ ಸಂದಾಯವಾಗುವಂತೆ ಬ್ಯಾಂಕ್ ಡಿಡಿಯನ್ನು ತೆಗೆಯಬೇಕು.

  ಆಯ್ಕೆ ವಿಧಾನ

  ವಯ್ಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಂಥ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

  ಅರ್ಜಿ ಸಲ್ಲಿಸುವ ವಿಧಾನ

  • ಆಸಕ್ತ ಅಭ್ಯರ್ಥಿಗಳು ಎ4 ಅಳತೆಯ ಹಾಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಿದ್ದು ಅರ್ಜಿಯಲ್ಲಿ ಸ್ವವಿವರ, ಅರ್ಹತಾ ಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಸೇವಾನುಭವ ಸೇರಿದಂತೆ ಸೂಕ್ತ ದಾಖಲೆಗಳೊಂದಿಗೆ ಭಾವಚಿತ್ರ ಸಹಿತ ಅಂಚೆ ಮೂಲಕ ತಲುಪಿಸತಕ್ಕದ್ದು.
  • ಅರ್ಜಿ ಲಕೋಟೆಯ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರ ಎಂಬುದನ್ನ ಸ್ಪಷ್ಟವಾಗಿ ನಮೂದಿಸತಕ್ಕದ್ದು.

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2017

  ಅರ್ಜಿ ಸಲ್ಲಿಸುವ ವಿಳಾಸ

  The General Manager
  Bank Note Paper Mill India Private Limited
  Administrative Building,
  Paper Mill Compound, Note Mudran Nagar,
  Mysuru - 570 003, Karnataka

  ಹೆಚ್ಚಿನ ವಿವರಗಳಿಗಾಗಿ www.bnpmindia.com ಗಮನಿಸಿ

  English summary
  BANK NOTE PAPER MILL INDIA PRIVATE LIMITED RECRUITMENT 2017,THE COMPANY INVITES APPLICATIONS FOR THE MANAGER POSTS FROM ELIGIBLE CANDIDATES

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia