ಬ್ಯಾಂಕ್ ಆಫ್ ಇಂಡಿಯಾದ 670 ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತದಾದ್ಯಂತ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಾಗಿ ಒಟ್ಟು 670 ಸ್ಥಾನಗಳು ಖಾಲಿಯಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 5, 2017 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಹುದ್ದೆಯ ಹೆಸರು: ಆಫೀಸರ್
ಒಟ್ಟು ಹುದ್ದೆಗಳು: 270
ವೇತನ ಶ್ರೇಣಿ: ರೂ.23700-42020/-

ಹುದ್ದೆಯ ಹೆಸರು: ಮ್ಯಾನೇಜರ್
ಒಟ್ಟು ಹುದ್ದೆಗಳು: 400 ಹುದ್ದೆಗಳು
ವೇತನ ಶ್ರೇಣಿ: ರೂ.31705-45950/-

ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಾವಕಾಶ

ವಿದ್ಯಾರ್ಹತೆ

ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಶೇ.60 ಅಂಕದೊಂದಿಗೆ ಸ್ನಾತಕ ಪದವಿ ಪಡೆದಿರಬೇಕು ಅದರೊಂದಿಗೆ ಎಂಬಿಎ/ ಪಿಜಿಡಿಬಿಎಂ/ ಪಿಜಿಬಿಎಂ/ ಪಿಜಿಡಿಬಿಎ /ಕಾಮರ್ಸ್ ನಲ್ಲಿ ಅಥವಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ/ ಅರ್ಥಶಾಸ್ತ್ರ ಅಥವಾ ಚಾರ್ಟರ್ಡ್ ಅಕೌಂಟಂಟ್ / ಐಸಿಡಬ್ಲ್ಯುಎ/ಕಂಪನಿ ಸೆಕ್ರೆಟರಿ/ ಕಂಪ್ಯೂಟರ್ ತರಬೇತಿಯ ಸರ್ಟಿಫಿಕೇಟ್ (ಕನಿಷ್ಠ ಮೂರು ತಿಂಗಳ ತರಬೇತಿ) ಅಥವಾ ಪದವಿ ಹಂತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಒಂದು ವಿಷಯವನ್ನಾಗಿ ಓದಿದವರು ಅರ್ಜಿ ಸಲ್ಲಿಸಬಹುದು

ವಯೋಮಿತಿ

ಆಫೀಸರ್ ಗಳಿಗಾದರೆ 21 ರಿಂದ 30 ವರ್ಷ, ಮ್ಯಾನೇಜರ್ ಗಳಿಗಾದರೆ 23 ರಿಂದ 35 ವರ್ಷ. (10-04-2017 ದಿನಾಂಕಕ್ಕೆ ಅನ್ವಯವಾಗುವಂತೆ)

ಆಯ್ಕೆ ಪ್ರಕ್ರಿಯೆ

ಮೊದಲು ಆನ್ ಲೈನ್ ಮೂಲಕ ಪರೀಕ್ಷೆ ನೀಡಲಾಗುತ್ತದೆ. ಅದರಲ್ಲಿ ಆಯ್ಕೆಯಾದವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೊನೆಯದಾಗಿ ದಾಖಲಾತಿಗಳ ಪರಿಶೀಲನೆಯ ನಂತರ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು ದಿನಾಂಕ 05-05-2017 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ: www.bankofindia.co.in

ಅರ್ಜಿ ಶುಲ್ಕ

ಅರ್ಜಿದಾರರು ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಶುಲ್ಕದ ವಿವರ

  • ಸಾಮಾನ್ಯ/ಇತರೆ ವರ್ಗಕ್ಕೆ: ರೂ.600/-
  • ಎಸ್ ಸಿ/ ಎಸ್ಟಿ: ರೂ.100/-

ಪ್ರಮುಖ ದಿನಾಂಕಗಳು

  • ಮೇ 05, 2017 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
  • ಶುಲ್ಕ ಪಾವತಿಗೂ ಮೇ 05, 2017 ಕೊನೆಯ ದಿನಾಂಕ

ಬ್ಯಾಂಕ್ ಆಫ್ ಇಂಡಿಯಾ

ಮುಂಬಯಿ ಮೂಲದ ರಾಷ್ಟ್ರದ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕ್ಗಳಲ್ಲೊಂದಾದ ಬ್ಯಾಂಕ್ ಆಫ್ ಇಂಡಿಯಾ 1909 ರಲ್ಲಿ ಸ್ಥಾಪನೆಯಾಯಿತು. ಜುಲೈ 1969 ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.

ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಸುಮಾರು 4963 ಶಾಖೆಗಳನ್ನೂ ಹೊಂದಿದೆ. ಅಲ್ಲದೇ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸುಮಾರು 100 ಕ್ಕೂ ಅಧಿಕ ಶಾಖೆಗಳನ್ನೂ ಕೂಡ ತೆರೆದಿದ್ದು ಒಟ್ಟು 5100 ಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ www.bankofindia.co.in ಗಮನಿಸಿ

English summary
Bank of India Recruitment of Officers and general managers in General Banking Stream.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia