ಬಿಬಿಎಂಪಿ NUHM ವಿವಿಧ ಹುದ್ದೆಗಳ ನೇಮಕಾತಿ

Posted By:

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ, ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ರಿ)ದ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ನೇರ ಆಯ್ಕೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

  1. ವಿಶೇಷ ತಜ್ಞರು (ವಿಕಿರಣಶಾಸ್ತ್ರಜ್ಞರು)-04 ಹುದ್ದೆಗಳು (ವೇತನ ರೂ.1,10,000/-)
  2. ವಲಯ ಕಾರ್ಯಕ್ರಮ ವ್ಯವಸ್ಥಾಪಕರು-02 ಹುದ್ದೆಗಳು (ವೇತನ ರೂ.20,000/-)
  3. ಎಪಿಡೆಮಿಯೋಲಜಿಸ್ಟ್-02 ಹುದ್ದೆಗಳು (ವೇತನ ರೂ.25,000/-)
  4. ಲೆಕ್ಕಪತ್ರ ಸಹಾಯಕ-01 ಹುದ್ದೆ (ವೇತನ ರೂ.17,000/-)
  5. ಓ.ಟಿ. ಟೆಕ್ನಿಷಿಯನ್-02 ಹುದ್ದೆಗಳು (ವೇತನ ರೂ.15,000/-)
  6. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (ಎ.ಎನ್.ಎಂ)-140 ಹುದ್ದೆಗಳು (ವೇತನ ರೂ.9000/-)
  7. ಫಾರ್ಮಸಿಸ್ಟ್- 20 ಹುದ್ದೆಗಳು (ವೇತನ ರೂ.15,000/-)

ವಿವಿಧ ಹುದ್ದೆಗಳ ನೇಮಕಾತಿ

ಅರ್ಹತಾ ಮಾನದಂಡಗಳ

ವಲಯ ಕಾರ್ಯಕ್ರಮ ವ್ಯವಸ್ಥಾಪಕರು, ಎಪಿಡೆಮಿಯೋಲಜಿಸ್ಟ್, ಲೆಕ್ಕಪತ್ರ ಸಹಾಯಕ ಮತ್ತು ಓ.ಟಿ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗೆ
ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ

(ವಯೋಮಿತಿ ಸಡಿಲಿಕೆ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 10 ವರ್ಷ ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷ ಇರಲಿದೆ)

ವಿಶೇಷ ತಜ್ಞವೈದ್ಯರು (ರೇಡಿಯೋಲಜಿಸ್ಟ್) ಹುದ್ದೆಗಳಿಗೆ
ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಗರಿಷ್ಠ 65 ವರ್ಷ ಮೀರಿರಬಾರದು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (ಎ.ಎನ್.ಎಂ) ಹುದ್ದೆಗಳಿಗೆ
ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

ಸೂಚನೆ

ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ

ಆಸಕ್ತರು ಸಂಬಂಧಿಸಿದ ದಾಖಲೆಗಳೊಂದಿಗೆ ವಾಕ್ ಇನ್ ಸಂದರ್ಶನಕ್ಕೆ ನಿಗದಿಪಡಿಸಿರುವ ದಿನಾಂಕದಂದು ಹಾಜರಾಗತಕ್ಕದ್ದು.

ದಿನಾಂಕ: 03-04-2017
ರೆಡಿಯೋಲಜಿಸ್ಟ್, ವಲಯ ಕಾರ್ಯಕ್ರಮ ವ್ಯವಸ್ಥಾಪಕರು, ಎಪಿಡೆಮಿಯೋಲಜಿಸ್ಟ್, ಲೆಕ್ಕಪತ್ರ ಸಹಾಯಕ ಮತ್ತು ಓ.ಟಿ ಟೆಕ್ನಿಷಿಯನ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ.
ದಿನಾಂಕ: 04-04-2017
ಕಿರಿಯ ಮಹಿಳಾ ಸಹಾಯಕಿಯರಿಗೆ (ಎ.ಎನ್.ಎಂ) ಮತ್ತು ಫಾರ್ಮಸಿಸ್ಟ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ.

ನಗರ ಯೋಜನಾ ನಿರ್ವಹಣಾಧಿಕಾರಿಗಳ ಕಛೇರಿಗೆ ಬೆಳಿಗ್ಗೆ 11:00 ರಿಂದ ಸಂಜೆ 4:00 ರ ವರೆಗೂ ಅರ್ಜಿ ಮತ್ತು ಮೂಲ ದಾಖಲಾತಿಗಳೊಂದಿಗೆ ನೇರ ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಲು ಸೂಚಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಯನ್ನು 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಒಡಂಬಡಿಕೆ ಮಾಡಿಕೊಂಡು ನೇಮಕಾತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು.

ವಾಕ್ ಇನ್ ಆಯ್ಕೆ ನಡೆಯುವ ಸ್ಥಳ

ನಗರ ಯೋಜನಾ ನಿರ್ವಹಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ 304, ಅನೆಕ್ಸ್ ಕಟ್ಟಡ-3, 3ನೇ ಮಹಡಿ, ಎನ್.ಆರ್.ಚೌಕ, ಬೆಂಗಳೂರು-02.
ಹೆಚ್ಚಿನ ವಿವರಗಳಿಗಾಗಿ
ದೂರವಾಣಿ ಸಂಖ್ಯೆ: 080-22110445 ಸಂಪರ್ಕಿಸಿ
ವೆಬ್ಸೈಟ್ ವಿಳಾಸ www.bbmp.gov.in ಗಮನಿಸಿ

English summary
Announcement of direct Walk-in selection under NUHM for various posts on contractual basis

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia