ಬಿಬಿಎಂಪಿ ನೇಮಕಾತಿ: ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ

Posted By:

ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 130 ಕ್ಕೂ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಸಂದರ್ಶನ ಕರೆಯಲಾಗಿದೆ.

ನವೆಂಬರ್ 08 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲಕ ದಾಖಲಾತಿಗಳೊಂದಿಗೆ ಭಾಗವಹಿಸಬಹುದು.

ಬಿಬಿಎಂಪಿ:  ವಾಕ್ ಇನ್ ಇಂಟರ್ವ್ಯೂ

ಹುದ್ದೆಗಳು

1. ANM-120 ಹುದ್ದೆಗಳು

ವೇತನ ಶ್ರೇಣಿ: 9000 ರು. ತಿಂಗಳಿಗೆ.
ವಿದ್ಯಾರ್ಹತೆ: ANMನಲ್ಲಿ ತರಬೇತಿ ಹಾಗೂ ಕರ್ನಾಟಕದಲ್ಲಿ ನೋಂದಾಣಿ ಹೊಂದಿರಬೇಕು.
ವಯೋಮಿತಿ: 18ರಿಂದ 40 ವರ್ಷ.

2. ಔಷಧಿಕಾರ (Pharmacist)- 10

ವೇತನ ಶ್ರೇಣಿ: 15000 ರು. ತಿಂಗಳಿಗೆ
ವಿದ್ಯಾರ್ಹತೆ: ಪ್ಯಾರಾ ಮೆಡಿಕಲ್ ಕೋರ್ಸ್ ಪೂರ್ಣಗೊಳಿಸರಬೇಕು.
ವಯೋಮಿತಿ: 18ರಿಂದ 35 ವರ್ಷ.

3. ಮೆಡಿಕಲ್ ಅಧಿಕಾರಿ- 8

ವೇತನ ಶ್ರೇಣಿ: 45000 ರು. ತಿಂಗಳಿಗೆ.
ವಿದ್ಯಾರ್ಹತೆ: ಎಂಬಿಬಿಎಸ್ ಪೂರ್ಣಗೊಳಿಸಿರುವುದುರ ಜತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಣಿಯಾಗಿರಬೇಕು.
ವಯೋಮಿತಿ: 50 ವರ್ಷ ಕೆಳಗೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ತಮ್ಮ ಸ್ವವಿವರ ಹಾಗು ಅಗತ್ಯ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.

ಸಂದರ್ಶನ ನಡೆಯುವ ದಿನಾಂಕ: 08-11-2017 ರಿಂದ 10-11-2017 (ಬೆಳಿಗ್ಗೆ 11.00 ರಿಂದ ಸಂಜೆ 4.00 ರವರೆಗೆ )

ಸಂದರ್ಶನ ನಡೆಯುವ ಸ್ಥಳ

ಸಿಪಿಎಂಯು ಮೂರನೇ ಮಹಡಿ,
ಬಿಬಿಎಂಪಿ ಮುಖ್ಯ ಕಚೇರಿ
ಎನ್ ಆರ್ ಚೌಕ,
ಬೆಂಗಳೂರು-560002

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Bruhat Bengaluru Mahanagara Palike released a new recruitment notification through its official website bbmp.gov.in for the recruitment of various posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia