ಪತ್ರಿಕೋದ್ಯಮ ಪದವೀಧರರಿಗೆ ಬಿಇಸಿಎಲ್ ನಲ್ಲಿ ಉದ್ಯೋಗಾವಕಾಶ

Posted By:

ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿಮಿಟೆಡ್‌ (ಬಿಇಸಿಐಎಲ್‌) ಖಾಲಿ ಇರುವ 42 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಿದೆ.

ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವುಳ್ಳವರು, ಆಸಕ್ತರು ಸೆಪ್ಟೆಂಬರ್‌ 28ರೊಳಗೆ ತಲುಪುವಂತೆ ತಮ್ಮ ರೆಸ್ಯೂಮ್‌ ಗಳನ್ನು ಕಚೇರಿ ವಿಳಾಸಕ್ಕೆ ಕಳುಹಿಸಲು ಸೂಚಿಸಿದೆ.

ಪದವೀಧರರಿಗೆ ಬಿಇಸಿಎಲ್ ನಲ್ಲಿ  ಉದ್ಯೋಗಾವಕಾಶ

ಹುದ್ದೆಗಳ ವಿವರ

ಕಂಟೆಂಟ್‌ ಎಡಿಟರ್‌-01 ಹುದ್ದೆ

ವೇತನ: ರೂ.49800/-

ವಿದ್ಯಾರ್ಹತೆ

ಜರ್ನಲಿಸಂ ಅಥವಾ ಮಾಸ್‌ ಕಮ್ಯುನಿಕೇಷನ್‌ ವಿಷಯದಲ್ಲಿ ಪಿಜಿ ಡಿಪ್ಲೊಮಾ ವಿದ್ಯಾರ್ಹತೆ ಜೊತೆಗೆ ಕನಿಷ್ಠ ಮೂರು ವರ್ಷ ಪತ್ರಿಕೆ ಅಥವಾ ಟಿವಿ ಮಾಧ್ಯಮಗಳಲ್ಲಿ (ಎಎನ್‌ಐ, ಪಿಟಿಐ ಅಥವಾ ಯುಎನ್‌ಐ) ಕೆಲಸ ಮಾಡಿದ ಅನುಭವ ಇದ್ದವರು ಅರ್ಜಿ ಸಲ್ಲಿಸಬಹುದು. ಡಿಡಿ ಅಥವಾ ಆಲ್‌ ಇಂಡಿಯಾ ರೇಡಿಯೋದ ನಿವೃತ್ತ ಸುದ್ದಿ ಸಂಪಾದಕರು ಅಥವಾ ಉಪ ನಿರ್ದೇಶಕರೂ ಅರ್ಜಿ ಸಲ್ಲಿಸಲು ಅರ್ಹರು.

ಸೀನಿಯರ್‌ ಮಾನಿಟರ್‌-03 ಹುದ್ದೆಗಳು (ಇಂಗ್ಲಿಷ್‌ ಭಾಷಾ ವಿಭಾಗ)

ವೇತನ: ರೂ.37350/-

ವಿದ್ಯಾರ್ಹತೆ

ಜರ್ನಲಿಸಂನಲ್ಲಿ ಪಿಜಿ ಡಿಪ್ಲೊಮಾ ಮತ್ತು ಎರಡು ವರ್ಷ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.

ಮಾನಿಟರ್‌- 38 ಹುದ್ದೆಗಳು (ಕನ್ನಡ ವಿಭಾಗದಲ್ಲಿ ಆರು ಹುದ್ದೆಗಳು)

ವೇತನ: ರೂ.28635/-

ವಿದ್ಯಾರ್ಹತೆ

ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗುತ್ತದೆ. ಇದರೊಂದಿಗೆ ಮಾಧ್ಯಮ ರಂಗದಲ್ಲಿ ಕನಿಷ್ಠ ಒಂದು ವರ್ಷವಾದರೂ ಕೆಲಸ ಮಾಡಿದ ಅನುಭವ ಹೊಂದಿರುವುದು ಕಡ್ಡಾಯ. ಪತ್ರಿಕೋದ್ಯಮ/ಸಮೂಹ ಸಂವಹನ ವಿಷಯದಲ್ಲಿ ಪದವಿ/ಪಿಜಿ ಡಿಪ್ಲೊಮಾ ಓದಿದವರೂ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಕೆ

  • ಆಸಕ್ತ ಅಭ್ಯರ್ಥಿಗಳು ಬಿಇಸಿಎಲ್ ಕಚೇರಿ ಅಥವಾ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಪಡೆಯಬಹುದಾಗಿದೆ.
  • ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.300/-
  • ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ.

ಆಯ್ಕೆ ವಿಧಾನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಉದ್ಯೋಗವು ತಾತ್ಕಲಿಕವಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-09-2017

ಇಂಜಿನಿಯರಿಂಗ್ ಪದವೀಧರರಿಗೆ ಎಚ್‌ಪಿಎಸಿಎಲ್‌ ನಲ್ಲಿ ಉದ್ಯೋಗಾವಕಾಶ

ಅರ್ಜಿ ಕಳುಹಿಸಲು ವಿಳಾಸ

Assistant General Manager (HR) in BECIL's
Corporate Office at BECIL
Bhawan, C-56/A-17, Sector-62,
Noida-201307 (U.P)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈರುತ್ಯ ರೈಲ್ವೆ: 136 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

English summary
Applications are invited from eligible candidates for monitoring posts at different positions. The selected candidates would be engaged on contractual basis by BECIL, a PSU under Ministry of I&B.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia