ಬಿಇಎಲ್ ಖಾಯಂ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನವರತ್ನ ಕಂಪನಿಯು ಭಾರತದಲ್ಲಿ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಹು ಯೂನಿಟ್, ಬಹು ಉತ್ಪನ್ನ ಸಂಸ್ಥೆಯಾಗಿ ಪ್ರಗತಿಪರ ರೂಪದಲ್ಲಿ ಸ್ಥಾಪಿತಗೊಂಡಿದೆ.

ಬಿಇಎಲ್ ಬೆಂಗಳೂರು ಘಟಕಕ್ಕೆ ಅವಶ್ಯವಿರುವ ವಿವಿಧ ಹುದ್ದೆಗಳ ಖಾಯಂ ಆಧಾರದ ಮೇಲೆ ನೇಮಕಾತಿಗೆ ಅರ್ಹ ಆಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು: ಇಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ (ಇಎಟಿ)
ವೃತ್ತಿ ವಿಷಯ: ಕೆಮಿಕಲ್ /ಎಲೆಕ್ಟ್ರಾನಿಕ್ಸ್
ಹುದ್ದೆ ಸಂಖ್ಯೆ: 03
ವಿದ್ಯಾರ್ಹತೆ: ಇಂಜಿನಿಯರಿಂಗ್ ನಲ್ಲಿ ಮೂರು ವರ್ಷಗಳ ಪೂರ್ಣಾವಧಿ ಡಿಪ್ಲೊಮಾ
ವೇತನ ಶ್ರೇಣಿ: ವೇತನ ವರ್ಗ-VII, ಬಡ್ತಿ ಹಾದಿ-VI, ರೂ.10050/-3%-25450/- + ಸ್ವೀಕಾರಾರ್ಹ ಭತ್ಯೆಗಳು

ಬಿಇಎಲ್ ಖಾಯಂ ನೇಮಕಾತಿ

ಹುದ್ದೆಯ ಹೆಸರು: ಕಿರಿಯ ಸಹಾಯಕ
ವೃತ್ತಿ ವಿಷಯ: ಡಿಪ್ಲೊಮಾ (ಕಮರ್ಷಿಯಲ್ ಪ್ರಾಕ್ಟಿಸ್)
ಹುದ್ದೆ ಸಂಖ್ಯೆ: 07
ವಿದ್ಯಾರ್ಹತೆ: ಕಮರ್ಷಿಯಲ್ ಪ್ರಾಕ್ಟಿಸ್ನಲ್ಲಿ 3 ವರ್ಷದ ಪೂರ್ಣಾವಧಿಯ ಡಿಪ್ಲೊಮಾ+ಕಂಪ್ಯೂಟರ್ ಕಾರ್ಯಾಚರಣೆಯ ಅರಿವು
ವೇತನ ಶ್ರೇಣಿ: ವೇತನ ವರ್ಗ-IV, ಬಡ್ತಿ ಹಾದಿ-V, ರೂ.8740/-3%-22150/-+ ಸ್ವೀಕಾರಾರ್ಹ ಭತ್ಯೆಗಳು

ಹುದ್ದೆಯ ಹೆಸರು: ಸ್ಟಾಫ್ ನರ್ಸ್ (ಮಹಿಳೆಯರು)
ವೃತ್ತಿ ವಿಷಯ: ಡಿಪ್ಲೊಮಾ (ನರ್ಸಿಂಗ್ ಮತ್ತು ಮಿಡ್ ವೈಫರಿ)
ಹುದ್ದೆ ಸಂಖ್ಯೆ: 02
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ + ಮಾನ್ಯತೆ ಪಡೆದ ಸಂಸ್ಥೆಯಿಂದ ಸಾಮಾನ್ಯ ನರ್ಸಿಂಗ್ ಮತ್ತು ಮಿಡ್ ವೈಫರಿನಲ್ಲಿ ಡಿಪ್ಲೊಮಾ. ಪ್ರತಿಷ್ಠಿತ ಆಸ್ಪತ್ರೆಯಿಂದ ಮೂರು ವರ್ಷಗಳ ಅನುಭವ. ಸ್ಟಾಫ್ ನರ್ಸ್ ಆಗಿ ನೋಂದಣೀಕರಣ ಅವಶ್ಯಕ
ವೇತನ ಶ್ರೇಣಿ: ವೇತನ ವರ್ಗ-IV, ಬಡ್ತಿ ಹಾದಿ-V, ರೂ.8740/-3%-22150/-+ ಸ್ವೀಕಾರಾರ್ಹ ಭತ್ಯೆಗಳು

ವಯೋಮಿತಿ

ದಿನಾಂಕ 01-10-2017 ರಂತೆ ಗರಿಷ್ಠ ವಯಸ್ಸು ಸಾಮಾನ್ಯ ವರ್ಗದವರೆಗೆ 28 ವರ್ಷಗಳು, ಒಬಿಸಿ ವರ್ಗದವರಿಗೆ 31 ಮತ್ತು ಪ.ಜಾ/ಪ.ಪಂ/ ಅಭ್ಯರ್ಥಿಗಳಿಗೆ 33 ವರ್ಷಗಳು.

ಸೂಚನೆ : ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣವಾಗಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿರುವುದಿಲ್ಲ.

ಇದನ್ನು ಗಮನಿಸಿ: ಕಾಂಟ್ರ್ಯಾಕ್ಟ್ ಇಂಜಿನಿಯರ್ಸ್ ನೇಮಕಾತಿಗೆ ಬಿಇಎಲ್ ಅರ್ಜಿ ಆಹ್ವಾನ

ಆಯ್ಕೆಯ ವಿಧಾನ

ಮಾನದಂಡವನ್ನು ಪೂರೈಸುವ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗಾಗಿ ಲಘು ಸೂಚಿ ತಯಾರಿಸಲಾಗುವುದು. 150 ಅಂಕಗಳಿಗೆ ಲಿಖಿತ ಪರೀಕ್ಷೆ ಸೇರಿ ಆಯ್ಕೆ ಪ್ರಕ್ರಿಯೆ ಒಳಗೊಂಡಿರುತ್ತದೆ.

ಅರ್ಜಿ ಶುಲ್ಕ:

 • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.300/-
 • (ಎಸ್‌ಸಿ/ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ).

ಅರ್ಜಿ ಸಲ್ಲಿಕೆ

 • ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
 • ಆನ್-ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 26-04-2017
 • ಆನ್-ಲೈನ್ ಅರ್ಜಿ ಸಲ್ಲಿಸುವ ವಿಳಾಸ bel-india.com
 • ಆನ್-ಲೈನ್ ಅರ್ಜಿ ನಮೂನೆಯಲ್ಲಿ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು
 • ಅಭ್ಯರ್ಥಿಗಳು ಸ್ವಂತ ಇ-ಮೇಲ್ ಐಡಿ ಹೊಂದಿರಬೇಕು
 • ಅಭ್ಯರ್ಥಿಗಳು ಆನ್-ಲೈನ್ ನೋಂದಣಿಗೆ ಬಳಸಿದ ಭಾವಚಿತ್ರವನ್ನೇ ನೇಮಕಾತಿಯವರೆಗೂ ಬಳಸಬೇಕು

ನೇಮಕಾತಿಗೆ ಸಂಬಂಧಪಟ್ಟ ಹಾಗೂ ಹೆಚ್ಚಿನ ಮಾಹಿತಿಗಾಗಿ ಬಿಇಎಲ್ ಅಧಿಕೃತ ವೆಬ್ಸೈಟ್ ವಿಳಾಸ bel-india.com ಗಮನಿಸಿ

  English summary
  Bharat Electronics Ltd., a Navaratna Company and India’s premier Professional Electronics Company has the requirement of personnel on permanent basis for its Bengaluru Unit

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia