ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ

Posted By:

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಜ್ಞಾನಸಾಗರ, ನಂದಿಹಳ್ಳಿಯ ಜ್ಞಾನ ಸರೋವರ ಆವರಣ ಮತ್ತು ಸ್ನಾತಕೋತ್ತರ ಕೇಂದ್ರ ಕೊಪ್ಪಳ ಆವರಣದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತಿಥಿ ಉಪನ್ಯಾಸ ನೀಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ವಿಷಯಗಳಲ್ಲಿ 71 ಪೂರ್ಣಕಾಲಿಕ ಮತ್ತು 50 ಅರೆಕಾಲಿಕ, ಒಟ್ಟು 121 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

 ಅತಿಥಿ ಉಪನ್ಯಾಸಕರ ನೇಮಕಾತಿ

ವೇತನ

ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರೆಗೆ (NET/KSET ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ ವರ್ಕ್ ನೊಂದಿಗೆ ಪಿಹೆಚ್.ಡಿ ಪದವಿ ಪಡೆದಿರುವವರು) ರೂ-25000 ದ ವರೆಗೆ ಮಾಸಿಕ ಗೌರವಧನ ನೀಡಲಾಗುವುದು. ಮತ್ತು ಅತಿಥಿ ಉಪನ್ಯಾಸಕರು ಮೇಲೆ ಹೇಳಿದ ಅವಧಿಯಷ್ಟೇ ಕಾರ್ಯ ನಿರ್ವಹಿಸಿದ್ದು NET/Ph.D ಪದವಿ ಹೊಂದಿಲ್ಲದಿದ್ದಲ್ಲಿ ಮಾಸಿಕಸಂಚಿತ ಗೌರವಧನ ರೂ.15000/- ಕ್ಕೆ ಅರ್ಹರಾಗಿರುತ್ತಾರೆ.
ವಾರಕ್ಕೆ 16 ಘಂಟೆಗಳಿಗಿಂತ ಕಡಿಮೆ ಬೋಧನೆ ನಡೆಸಲು ಅತಿಥಿ ಉಪನ್ಯಾಸಕರು ಪ್ರತಿ ಘಂಟೆಯ ಬೋಧನೆಗೆ ರೂ.350/- ರಂತೆ ಮಾಸಿಕ ಗರಿಷ್ಠ ರೂ.10000/- ಮೀರದಂತೆ ಗೌರವಧನ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ

  • ಅರ್ಜಿಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಸಲ್ಲಿಸತಕ್ಕದ್ದು.
  • ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ಅರ್ಹತೆ, ಅನುಭವದ ವಿವರಗಳು ಮತ್ತು ದೃಢೀಕೃತ ದಾಖಲೆಗಳೊಂದಿಗೆ ದಿನಾಂಕ 30-06-2017 ರೊಳಗೆ ವಿಶ್ವವಿದ್ಯಾಲಯದ ಕಛೇರಿಗೆ ತಲುಪಿಸತಕ್ಕದ್ದು.

ಕಛೇರಿ ವಿಳಾಸ

ಕುಲಸಚಿವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಜ್ಞಾನಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ-583105

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2017
  • ಸಂದರ್ಶನಗಳು ನಡೆಯುವ ದಿನಾಮಕ: 12-07-2017 ರಿಂದ 15-07-2017

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಪ,ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ ರೂ.200/-

ಡಿ.ಡಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. "ಹಣಕಾಸು ಅಧಿಕಾರಿಗಳು ವಿ.ಶ್ರೀ.ಕೃ.ವಿಶ್ವವಿದ್ಯಾಲಯ ಬಳ್ಳಾರಿ ಹೆಸರಿನಲ್ಲಿ ಡಿ.ಡಿಯನ್ನು ಪಡೆದು ಲಗತ್ತಿಸಬಹುದಾಗಿದೆ.

ಸೂಚನೆ

  • ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಸರಾಸರಿ ಶೇ.55% ರಷ್ಟು ಅಂಕ ಪಡೆದಿರಬೇಕು.
  • ಸದರಿ ಆಹ್ವಾನವು ನೇಮಕಾತಿಯಲ್ಲ, ಆಹ್ವಾನವು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು 2017-18ನೇ ಶೈಕ್ಷಣಿಕ ವರ್ಷ ಅಥವಾ ಅದಕ್ಕಿಂತ ಮೊದಲಿನ ವಿಶ್ವವಿದ್ಯಾಲಯದ ಆದೇಶದವರೆಗೆ ಮಾತ್ರ ಊರ್ಜಿತವಾಗಿರುತ್ತದೆ.
  • ಆಯ್ಕೆಗೊಂಡ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಯಾವುದೇ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಸಿದ್ಧವಿರಬೇಕು. (NET/KSET/Ph.D) ಆದವರಿಗೆ ಆದ್ಯತೆ ನೀಡಲಾಗುವುದು.

ಸಂಪೂರ್ಣ ವಿವರಕ್ಕಾಗಿ ಕೆಳಗಿನ ಪಿಡಿಎಫ್ ಫೈಲ್ ಗಮನಿಸಿ

English summary
Bellary sri krishnadevaraya university invites application to fill the full time and part time guest lecturers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia