ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ, ಬಳ್ಳಾರಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಹೊಸದಾಗಿ ನಿಗದಿಪಡಿಸಿದ ನಮೂನೆ 8(ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹಾಗು ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ ಎಂದು ಸೂಚಿಸಲಾಗಿದೆ.

ಈ ಹುದ್ದೆಗಳ ನೇಮಕಾತಿಗಾಗಿ 371(ಜೆ) ಮಿಕ್ಕಳಿದ ವೃಂದ (Residual Parent Cadre) ಅಡಿಯಲ್ಲಿ 371(ಜೆ) ಸ್ಥಳೀಯ ವೃಂದದ (Local cadre) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಸದರಿಯವರನ್ನು ಮಿಕ್ಕುಳಿದ ವೃಂದವೆಂದು ಪರಿಗಣಿಸಲಾಗುವುದು.
ಹುದ್ದೆಗಳ ವಿವರ
| ವಿಭಾಗ | ಪ್ರೊಫೆಸರ್ | ಅಸೋಸಿಯೇಟ್ ಪ್ರೊಫೆಸರ್ | ಅಸಿಸ್ಟೆಂಟ್ ಪ್ರೊಫೆಸರ್ |
| ಕೆಮಿಸ್ಟ್ರಿ | - | 1 | 1 |
| ಮ್ಯಾಥಮೆಟಿಕ್ಸ್ | 1 | 1 | 4 |
| ಫಿಸಿಕ್ಸ್ | 1 | 1 | 2 |
| ಬಾಟನಿ | 1 | 1 | 2 |
| ಝೂಲಾಜಿ | 1 | 1 | 2 |
| ಮಿನೆರಲ್ ಪ್ರೊಸೆಸಿಂಗ್ | 1 | 1 | 1 |
| ಎನ್ವಿರಾನ್ಮೆಂಟಲ್ ಸೈನ್ಸ್ | 1 | 1 | 1 |
| ಅಪ್ಲೈಡ್ ಜಿಯಾಲಜಿ | 1 | 1 | 1 |
| ಮೈಕ್ರೋಬಯಾಲಜಿ | - | 1 | 1 |
| ಕಂಪ್ಯೂಟರ್ ಸೈನ್ಸ್ | 1 | 2 | 1 |
| ಬಯೋಕೆಮಿಸ್ಟ್ರಿ/ಬಯೋಟೆಕ್ನಾಲಜಿ | 1 | 1 | 1 |
| ಎಕನಾಮಿಕ್ಸ್ | 1 | 1 | 1 |
| ಹಿಸ್ಟರಿನ&ಆರ್ಕ್ಯಾಲಜಿ | 1 | 1 | 1 |
| ಸೋಷಿಯಾಲಜಿ | - | 1 | 1 |
| ಸೋಸಿಯಲ್ ವರ್ಕ್ | 1 | 2 | 1 |
| ಪೊಲಿಟಿಕಲ್ ಸೈನ್ಸ್ | - | 1 | 1 |
| ವಿಮೆನ್ ಸ್ಟಡೀಸ್ | - | 1 | 1 |
| ಲೈಬ್ರರಿ & ಇನ್ಫರ್ಮೇಷನ್ ಸೈನ್ಸ್ | - | 1 | 1 |
| ಇಂಗ್ಲಿಷ್ | 1 | 1 | 3 |
| ಕನ್ನಡ | 1 | 1 | 2 |
| ಫೈನ್ ಆರ್ಟ್ಸ್ | - | - | 1 |
| ಮಾಸ್ ಕಮ್ಯುನಿಕೇಷನ್ & ಜರ್ನಲಿಸಂ | 1 | 1 | 1 |
| ಕಾಮರ್ಸ್ | 2 | 2 | 2 |
| ಬಿಸಿನೆಸ್ ಮ್ಯಾನೇಜ್ಮೆಂಟ್ ಸ್ಟಡೀಸ್ | 1 | 2 | 3 |
| ಫಿಸಿಕಲ್ ಎಜುಕೇಷನ್/ಸ್ಪೋರ್ಟ್ಸ್ | - | 1 | 3 |
| ಎಜುಕೇಷನ್ | 1 | 2 | 3 |
| ಲಾ ಡಿಪಾರ್ಟ್ಮೆಂಟ್ | - | 1 | 2 |
| ಒಟ್ಟು | 19 | 31 | 44 |
ಅರ್ಜಿ ಸಲ್ಲಿಕೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿ, ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.
ಅರ್ಜಿ ಶುಲ್ಕ
ಪ್ರಾಧ್ಯಾಪಕ ಹುದ್ದೆಗೆ -ರೂ.1200+300/-
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ -ರೂ.1200+300/-
ಸಹ ಪ್ರಾದ್ಯಾಪಕ ಹುದ್ದೆಗೆ-ರೂ.800+300/-
(ಎಸ್.ಸಿ/ಎಸ್.ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಶೇ.50 % ವಿನಾಯಿತಿ ಇರುತ್ತದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-09-2017
ಹೆಚ್ಚಿನ ಮಾಹಿತಿಗಾಗಿ vskub.ac.in ಗಮನಿಸಿ


Click it and Unblock the Notifications











