ಬೆಂಗಳೂರಿನ ಆಧಾರ್ ಕೇಂದ್ರದಲ್ಲಿ ಉದ್ಯೋಗಾವಕಾಶ

Posted By:

ಆಧಾರ್ ಗುರುತಿನ ಪ್ರಾಧಿಕಾರವು ತಾಂತ್ರಿಕ ಮತ್ತು ಆಡಳಿತ ವಲಯದಲ್ಲಿ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಬೆಂಗಳೂರು ಕೇಂದ್ರದ ಆಧಾರ್ ಪ್ರಾಧಿಕಾರದಲ್ಲಿ ಏಳು ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 01 ರ ಒಳಗಾಗಿ ಅರ್ಜಿ ಸಲ್ಲಿಸತಕ್ಕದ್ದು.

ಆಧಾರ್ ಕೇಂದ್ರದಲ್ಲಿ ಉದ್ಯೋಗಾವಕಾಶ

ಹುದ್ದೆಗಳ ವಿವರ

ಹುದ್ದೆಯ ಹೆಸರು: ಉಪ ನಿರ್ದೇಶಕರು (ಡೆಪ್ಯೂಟಿ ಡೈರೆಕ್ಟರ್)
ಒಟ್ಟು ಹುದ್ದೆ: 01
ವೇತನ ಶ್ರೇಣಿ: ರೂ.15600-39100+6600/-

ಹುದ್ದೆಯ ಹೆಸರು: ತಾಂತ್ರಿಕ ಅಧಿಕಾರಿ (ಟೆಕ್ನಿಕಲ್ ಆಫಿಸರ್)
ಒಟ್ಟು ಹುದ್ದೆ: 06
ವೇತನ ಶ್ರೇಣಿ: ರೂ.9300-34800+4800/-

ಉಪ ನಿರ್ದೇಶಕರ ಹುದ್ದೆಗೆ ಅರ್ಹತೆ
ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಥವಾ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು ಅರ್ಹರಾಗಿರುತ್ತಾರೆ. ಐದು ವರ್ಷ ಆಡಳಿತ ಕ್ಷೇತ್ರದಲ್ಲಿ ಅನುಭವ ಮತ್ತು ಕಂಪ್ಯೂಟರ್ ಕೌಶಲ್ಯ ಇರಬೇಕು.

ತಾಂತ್ರಿಕ ಅಧಿಕಾರಿ ಹುದ್ದೆಗೆ ಅರ್ಹತೆ
ಬಿಸಿಎ/ಬಿ.ಎಸ್ಸಿ/ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್/ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್
ಐಟಿ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಅನುಭವವಿರಬೇಕು.

ಸೂಚನೆ: ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಸೂಕ್ತ ದಾಖಲೆಗಳ ಪ್ರತಿಯನ್ನು ಲಗತ್ತಿಸುವುದು.

ಹೆಚ್ಚಿನ ಮಾಹಿತಿಗಾಗಿ ಆಧಾರ್ ವೆಬ್ಸೈಟ್ ವಿಳಾಸ uidai.gov.in ಗಮನಿಸಿ

ಅರ್ಜಿ ಸಲ್ಲಿಸುವ ವಿಳಾಸ

Deputy Director General
UIDAI Technology Centre
Government of India,
Aadhaar Complex, NTI Layout,
Tatanagar, Kodigehalli, Bangalore-
560092.

ಆಧಾರ್

ಆಧಾರ್ ಸಂಖ್ಯೆಯು , ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾವಿಗುಪ್ರಾವು ("ಪ್ರಾಧಿಕಾರ") ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಯಾವುದೇ ವ್ಯಕ್ತಿಯು, ವಯಸ್ಸು ಎಷ್ಟೇ ಆಗಿರಲಿ ಹಾಗೂ ಲಿಂಗವು ಯಾವುದೇ ಆಗಿರಲಿ, ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವ ಸಲುವಾಗಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿ ಮಾಡಿಸಿಕೊಳ್ಳಲು ಸಿದ್ಧವಿರುವ ವ್ಯಕ್ತಿಯು ಕನಿಷ್ಟ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒಟ್ಟಾರೆ ಉಚಿತವಾಗಿರುವ ಅಂದರೆ ಯಾವುದೇ ಮೊತ್ತವನ್ನೂ ಪಾವತಿಸಬೇಕಾಗಿರದ ನೋಂದಣಿ ಪ್ರಕ್ರಿಯೆಯ ವೇಳೆಯಲ್ಲಿ ಒದಗಿಸಬೇಕಾಗುತ್ತದೆ.

English summary
Unique Identification Authority of India invites applications in the prescribed form forthe following post on deputation for Technology Centre/ Datacenter located at Bangalore.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia