ಬೆಂಗಳೂರು ಮೆಟ್ರೋ: ಸಂದರ್ಶನದ ಮೂಲಕ ನೇಮಕಾತಿ

Posted By:

ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್ ಸಿಎಲ್) 2 ಐಟಿ ಪ್ರೋಗ್ರಾಮರ್ ಹಾಗೂ 2 ಸರ್ವೇಯರ್ ಒಟ್ಟು 04 ಗುತ್ತಿಗೆ ಆಧಾರಿತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಇದೇ ಮೇ 20ರಂದು ಬಿಎಂಆರ್ ಸಿಎಲ್ ಆಯೋಜಿಸಿರುವ ವಾಕ್ ಇನ್ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು.

ಮೆಟ್ರೋದಲ್ಲಿ ಉದ್ಯೋಗಾವಕಾಶ

ಹುದ್ದೆಗಳ ವಿವರ

ಪ್ರೋಗ್ರಾಮರ್ : 2 ಹುದ್ದೆ
ವೇತನ: ರೂ.35910/-
ವಯೋಮಿತಿ: ಗರಿಷ್ಠ 40 ವರ್ಷ.

ಪ್ರೋಗ್ರಾಮರ್ ಹುದ್ದೆಯ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ವೇಯರ್ :  2 ಹುದ್ದೆ
ವಯೋಮಿತಿ: ಗರಿಷ್ಠ 45 ವರ್ಷ.
ವೇತನ ಶ್ರೇಣಿ: ರೂ.22000/-

ಸರ್ವೇಯರ್ ಹುದ್ದೆಯ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆ ಅವಧಿ: ಮೂರು ವರ್ಷಗಳು

ವಿದ್ಯಾರ್ಹತೆ

  • ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಮಾಹಿತಿ ತಂತ್ರಜ್ಞಾನ (Information Technology) ಪದವಿ ಪಡೆದಿರಬೇಕು.
  • ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತರು ಲ್ಯಾಂಡ್ ಸರ್ವೇಯರ್ ನಲ್ಲಿ ಡಿಪ್ಲಮೋ ಪೂರ್ಣಗೊಳಿಸಿರಬೇಕು. ಅಥವಾ ಸರ್ವೇಯರ್ ಟ್ರೇಡ್ ನಲ್ಲಿ ಐಟಿಐ ಉತ್ತೀರ್ಣರಾಗಿಬೇಕು.

ಆಯ್ಕೆ ವಿಧಾನ

  • ಸಂದರ್ಶನ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಪ್ರೋಗ್ರಾಮರ್ ಹುದ್ದೆಯನ್ನು ಭರ್ತಿ ಮಾಡಲಾಗುವುದು.
  • ನೇರ ಸಂದರ್ಶನದ ಮೂಲಕ ಸರ್ವೇಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
  • ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ತರತಕ್ಕದ್ದು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಬಿ ಎಂ ಆರ್ ಸಿ ವೆಬ್ಶೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್-ಲೈನ್ ಮೂಲಕ ಅರ್ಜಿಯನ್ನು ತುಂಬಬೇಕು
ತುಂಬಿದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು, ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸಂದರ್ಶನಕ್ಕೆ ಕೊಂಡೊಯ್ಯುವುದು.
ಸರ್ವೇಯರ್ ಹುದ್ದೆಗೆ ಸಂದರ್ಶನ ನಡೆಯುವ ದಿನಾಂಕ 20 -05 -2017

ಸಂದರ್ಶನ ನಡೆಯುವ ಸ್ಥಳ

ಬಿಎಂಆರ್ ಸಿಎಲ್ ಮುಖ್ಯ ಕಛೇರಿ,
ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್
ಕೆ.ಹೆಚ್ ರಸ್ತೆ, ಶಾಂತಿನಗರ
ಬೆಂಗಳೂರು-560 027

ಇದರ ಬಗ್ಗೆ ಇನ್ನು ಹೆಚ್ಚಿನ ವಿವರಣೆ ತಿಳಿಯಲು ವೆಬ್ಸೈಟ್ ವಿಳಾಸ www.bmrc.co.in ಗಮನಿಸಿ

English summary
BMRCL invites applications from qualified and experienced personnel for appointment to the post of Programmer (IT) and Surveyors on contract basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia