ನಮ್ಮ ಮೆಟ್ರೋ ದಲ್ಲಿ ಗ್ರ್ಯಾಜುಯೆಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಗ್ರ್ಯಾಜುಯೆಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಗ್ರ್ಯಾಜುಯೆಟ್ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘ ವಿವಿಧ ಹುದ್ದೆಗಳ ನೇಮಕಾತಿದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘ ವಿವಿಧ ಹುದ್ದೆಗಳ ನೇಮಕಾತಿ

ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 ನಮ್ಮ ಮೆಟ್ರೋ ನೇಮಕಾತಿ

ಹುದ್ದೆಯ ವಿವರ

ಹುದ್ದೆಯ ಹೆಸರು: ಗ್ರ್ಯಾಜುಯೆಟ್ ಇಂಜಿನಿಯರ್ (ಸಿವಿಲ್)
ಒಟ್ಟು ಹುದ್ದೆಗಳು: 80
ವೇತನ: ತಿಂಗಳಿಗೆ ರೂ.25000/-
ವಯೋಮಿತಿ: ಗರಿಷ್ಠ 35 ವರ್ಷಗಳು

ವಿದ್ಯಾರ್ಹತೆ

ಅಭ್ಯರ್ಥಿಯು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮೋದನೆ ಪಡೆದ ಶಿಕ್ಷಣ ಸಂಸ್ಥೆಯಿಂದ ಸಿವಿಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಕನ್ನಡ ಓದಲು ಮತ್ತು ಬರೆಯಲು ಕಲಿತಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇನ್ಯಾವುದೇ ರೀತಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ .

ಅಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಮೆರಿಟ್ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2017

ಹೆಚ್ಚಿನ ವಿವರಗಳಿಗಾಗಿ www.bmrc.co.in ವೆಬ್ಸೈಟ್ ವಿಳಾಸ ಗಮನಿಸಿ

ನಮ್ಮ ಮೆಟ್ರೋ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‍ಸಿಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ.

ಬೆಂಗಳೂರು ಮೆಟ್ರೋಗೆ "ನಮ್ಮ ಮೆಟ್ರೋ'' ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಉತ್ಸರ್ಜನಗಳ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ.

For Quick Alerts
ALLOW NOTIFICATIONS  
For Daily Alerts

English summary
Applications are invited from eligible Indian Nationals for the following posts (Total 80 Posts) in the Project Wing of BMRCL on contract basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X