ನೀವು ಇಂಜಿನಿಯರ್ ಪದವೀಧರರಾಗಿದ್ದರೆ 1,40,000 ವರೆಗೆ ಸಂಪಾದಿಸಬಹುದು... ಇಂದೇ ಅರ್ಜಿ ಸಲ್ಲಿಸಿ

Written By: Nishmitha B

ಭಾರತ್ ಎಲೆಕ್ಟ್ರೋನಿಕ್ಸ್ ಲಿಮಿಟೆಡ್ (BEL) ಗೆ ಅರ್ಜಿ ಆಹ್ವಾನಿಸಿದ್ದು, ತಿಂಗಳಿಗೆ 1,40,000 ವರೆಗೆ ಸಂಪಾದಿಸಬಹುದಾಗಿದೆ

ಆಸಕ್ತ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ಮುನ್ನ ವೇತನ ಶ್ರೇಣಿ, ಅರ್ಹತೆ, ಹೇಗೆ ಅರ್ಜಿ ಸಲ್ಲಿಸುವುದು ಎಂಬ ಕಂಪ್ಲೀಟ್ ಮಾಹಿತಿ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 14,2018

ಭಾರತ್ ಎಲೆಕ್ಟ್ರೋನಿಕ್ಸ್ ಲಿಮಿಟೆಡ್ ನೇಮಕಾತಿ 2018 ಹುದ್ದೆಗಳ ವಿವರ ಹೀಗಿದೆ :

ಹುದ್ದೆ ಹೆಸರು  ಡೆಪ್ಯುಟಿ ಇಂಜಿನಿಯರ್
 ಹುದ್ದೆ ಸಂಖ್ಯೆ 23
 ಸಂಸ್ಥೆ ಭಾರತ್ ಎಲೆಕ್ಟ್ರೋನಿಕ್ಸ್ ಲಿಮಿಟೆಡ್
 ಕೆಲಸ ಮಾಡಬೇಕಾದ ಸ್ಥಳ  ಬೆಂಗಳೂರು
 ವೇತನ ಶ್ರೇಣಿ 40,000 ದಿಂದ 1, 40,000 ವರೆಗೆ
 ವಿದ್ಯಾರ್ಹತೆ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್
 ಕೆಲಸದ ಜವಾಬ್ದಾರಿಗಳು ಎಕ್ಸ್‌ಕ್ಯುಟೀವ್ ದಿ ಎಲೆಕ್ಟ್ರಾನಿಕ್ಸ್ ಹಾಗೂ ಸಾಫ್ಟ್‌ವೇರ್ ವರ್ಕ್ಸ್ ಇನ್ ಬೆಲ್
 ಇಂಡಸ್ಟ್ರಿ ಸಾಫ್ಟ್‌ವೇರ್ ಹಾಗೂ ಎಲೆಕ್ಟ್ರಾನಿಕ್ಸ್
 ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ  ಫೆ. 28, 2018
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾ.14, 2018

ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ

ಡೆಪ್ಯುಟಿ ಇಂಜಿನಿಯರ್ ಇನ್ ಕಂಪ್ಯೂಟರ್ ಸೈನ್ಸ್ ಆಂಡ್ ಎಲೆಕ್ಟ್ರೋನಿಕ್ಸ್ ಹುದ್ದೆಗೆ ಕ್ರಮಬದ್ಧವಾಗಿ ಅರ್ಜಿ ಸಲ್ಲಿಸುತ್ತಾ ಹೋಗಿ. ಅರ್ಜಿ ಸಲ್ಲಿಕೆಗೆ ಸಹಾಯಕವಾಗಲೆಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ನಾವು ನೀಡಿರುವ ಈ ಟಿಪ್ಸ್ ಫಾಲೋ ಮಾಡಿ ಸುಲಭವಾಗಿ ಅರ್ಜಿ ಸಲ್ಲಿಸಿ

ಸ್ಟೆಪ್ 1

ಮೊದಲಿಗೆ ಬೆಲ್ ಅಧಿಕೃತ ವೆಬ್‌ಸೈಟ್ ಗೆ ಲಾಗ್ ಇನ್ ಆಗಿ

ಸ್ಟೆಪ್ 2

ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿದಾಗ ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ. ಅಧಿಕೃತ ಹೋಮ್ ಪೇಜ್‌ನ ಬಲಭಾಗದಲ್ಲಿ ಕೆರಿಯರ್ ಟ್ಯಾಬ್ ಇದ್ದು ಅದನ್ನ ಕ್ಲಿಕ್ ಮಾಡಿ

ಸ್ಟೆಪ್ 3

ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿದ ಮೇಲೆ 5 ಆಯ್ಕೆಗಳು ನಿಮ್ಮ ಮುಂದೆ ಕಾಣಿಸುತ್ತದೆ. ಅದರಲ್ಲಿ ನೀವು ರಿಕ್ರ್ಯುಟ್‌ಮೆಂಟ್ - ಅಡ್ವಟೈಸ್ ಮೆಂಟ್ ಕ್ಲಿಕ್ ಮಾಡಿ

ಸ್ಟೆಪ್ 4

ಬಳಿಕ ಜಾಹೀರಾತಿನ ಲಿಸ್ಟ್ ತೆರೆದುಕೊಳ್ಳುತ್ತದೆ

ಸ್ಟೆಪ್ 5

ಅರ್ಜಿಗೆ ಬೇಕಾಗುವ ಫಾರ್ಮ್ಸ್ ನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಿ

ಸ್ಟೆಪ್ 6

ನೀವು ಅರ್ಜಿ ಸಲ್ಲಿಸಬೇಕಾದ ಹುದ್ದೆಯ ಫಾರ್ಮ್ ಸ್ಕ್ರಿನ್ ಮೇಲೆ ತೆರೆದುಕೊಳ್ಳುತ್ತದೆ

ಸ್ಟೆಪ್ 7

ಈ ಫಾರ್ಮ್ ಫ್ರಿಂಟ್ ತೆಗೆದು, ಎಲ್ಲಾ ಮಾಹಿತಿಯನ್ನ ಕಂಪ್ಲೀಟ್ ಆಗಿ ನೀಡಿ

ಸ್ಟೆಪ್ 8

ಕೊನೆಯದಾಗಿ ನಿಮ್ಮ ಸಂಪೂರ್ಣ ಅರ್ಜಿಯನ್ನ ಭಾರತ್ ಎಲೆಕ್ಟ್ರೋನಿಕ್ಸ್ ಗೆ ಪೋಸ್ಟ್ ಮಾಡಿ. ಎಲ್ಲಾ ಅರ್ಜಿಗಳನ್ನ ಒಂದು ಕವರ್‌ ನಲ್ಲಿ ಹಾಕಿ ಪೋಸ್ಟ್ ಮಾಡಿ. ಕವರ್ ಮೇಲೆ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬುವುದು ಬರೆಯಲು ಮರೆಯದಿರಿ

ನಿಮ್ಮ ಅರ್ಜಿಯನ್ನ ಸಲ್ಲಿಸಬೇಕಾದ ವಿಳಾಸ
ಡೆಪ್ಯುಟಿ ಜನರಲ್ ಮ್ಯಾನೇಜರ್ ( ಹೆಚ್‌ಆರ್ / ಮಿಲ್ ಕಾಮ್)
ಮಿಲಿಟಿರಿ ಕಮ್ಯುನಿಕೇಶನ್ ಎಸ್‌ಬಿಯು,
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,
ಜಾಲಹಳ್ಳಿ ಪೋಸ್ಟ್,
ಬೆಂಗಳೂರು - 560013

English summary
Bharat Electronics Limited (BEL) has released fresh vacancies for the post of Deputy Engineer in computer science and electronics

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia