ಬಿಎಚ್‌ಇಎಲ್‌: ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ

ಮಹಾರತ್ನ ಕಂಪನಿಗಳ ಕೆಟಗರಿಯಲ್ಲಿ ಬರುವ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆ 'ಭಾರತ್‌ ಹೇವ್ವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌' ನೀಮ್‌ (National Employability Enhancement Mission) ಸ್ಕೀಮ್ ಅಡಿಯಲ್ಲಿ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಎಚ್ ಎ ಎಲ್ : ಎಸ್ ಎಸ್ ಎಲ್ ಸಿ ಆದವರಿಗೆ ಅಪ್ರೆಂಟಿಸ್

ಬೆಂಗಳೂರಿನ ಘಟಕದಲ್ಲಿ ನೇಮಕಾತಿ ನಡೆಯುತ್ತಿದ್ದು, ಒಟ್ಟು 80 ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆರ್ಮಿ ಸ್ಕೂಲ್‌: 8000 ಬೋಧಕ ಹುದ್ದೆಗಳ ನೇಮಕಾತಿ

ಬಿಎಚ್‌ಇಎಲ್‌ ವಾಕ್ ಇನ್ ಇಂಟರ್ವ್ಯೂ

 

ವಿದ್ಯಾರ್ಹತೆ

ಬಿಕಾಂ, ಬಿಬಿಎಂ, ಬಿಎ, ಬಿಎಸ್ಸಿ, ಬಿಸಿಎ, ಬಿಎಸ್‌ಡಬ್ಲ್ಯೂ ಮತ್ತು ಬಿಬಿಎ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಬಿಕಾಂ ಪದವೀಧರರಿಗೆ 25 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಉಳಿದ ಪದವೀಧರರಿಗೆ ಒಟ್ಟು 55 ಹುದ್ದೆಗಳನ್ನು ಮೀಸಲಿಡಲಾಗಿದೆ. 2015, 2016 ಮತ್ತು 2017ರಲ್ಲಿ ನಿಗದಿತ ವಿದ್ಯಾರ್ಹತೆ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾತ್ರ ಸಂದರ್ಶನಲ್ಲಿ ಭಾಗವಹಿಸಬಹುದಾಗಿದೆ.

ವಯೋಮಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ಮೀರಿರಬಾರದು.

ಒಂದು ವರ್ಷದ ತರಬೇತಿ ಇದಾಗಿದೆ. ಕನ್ನಡ ಭಾಷೆ ಸ್ಪಷ್ಟವಾಗಿ ಬರೆಯಲು, ಮಾತನಾಡಲು ಮತ್ತು ಓದಲು ಬಲ್ಲ ಅಭ್ಯರ್ಥಿಗಳಿಗೆ ನೇಮಕದಲ್ಲಿ ಆದ್ಯತೆ ನೀಡಲಾಗುತ್ತದೆ.

ಸಂದರ್ಶನ ನಡೆಯುವ ದಿನ: ಡಿಸೆಂಬರ್‌ 13, 2017

ಸಂದರ್ಶನ ನಡೆಯುವ ಸ್ಥಳ: ಬಿಎಚ್‌ಇಎಲ್‌, ಎಲೆಕ್ಟ್ರಾನಿಕ್ಸ್‌ ಡಿವಿಷನ್‌, ಮೈಸೂರು ರಸ್ತೆ, ಬೆಂಗಳೂರು-560026.

ಸಮಯ: ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.30

ಸಂದರ್ಶನಕ್ಕೆ ತರಬೇಕಾದ ದಾಖಲೆಗಳು

  • ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ದಾಖಲೆಗಳು
  • ಜನ್ಮದಿನಾಂಕದ ಗುರುತಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ
  • ಅಂಗವೈಕಲ್ಯ ಇದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು
  • ಆಧಾರ್‌ ಕಾರ್ಡ್‌
  • ಪ್ಯಾನ್‌ ಕಾರ್ಡ್‌/ಬ್ಯಾಂಕ್‌ ಪಾಸ್‌ಪುಸ್ತಕದ ಒಂದು ಪ್ರತಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
BHEL walk in interview for the engagement of Graduates (Non-Engineering)as NEEM Trainees for ONE year in BHEL, EDN, Bengaluru (Partnering Industry)
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X